For Quick Alerts
  ALLOW NOTIFICATIONS  
  For Daily Alerts

  'ಪ್ಯಾರಿಸ್ ಪ್ರಣಯ' ಚಿತ್ರವನ್ನ ರಘು ಮುಖರ್ಜಿ ಒಪ್ಪಿಕೊಳ್ಳಲು ಬೇರೆಯದ್ದೇ ಕಾರಣವಿತ್ತು.!

  By Harshitha
  |

  'ಮಿಸ್ಟರ್ ಇಂಟರ್ ನ್ಯಾಷನಲ್' ಆಗಿದ್ದ ರಘು ಮುಖರ್ಜಿ ರವರನ್ನ ಚಿತ್ರರಂಗಕ್ಕೆ ಕರೆ ತಂದವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.

  ಫಿಟ್ ನೆಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರಘು ಮುಖರ್ಜಿ ರವರಿಗೆ ಚಿತ್ರರಂಗದ ಗಂಧ ಗಾಳಿ ಗೊತ್ತಿರಲಿಲ್ಲ. ಅದರಲ್ಲೂ ನಾಗತಿಹಳ್ಳಿ ಚಂದ್ರಶೇಖರ್ ಅಂದ್ರೆ ಯಾರೂ ಅನ್ನೋದೇ ಅವರಿಗೆ ಮೊದಲು ಗೊತ್ತಿರಲಿಲ್ವಂತೆ.!

  ಹೌದು, 'ಮಿಸ್ಟರ್ ಇಂಟರ್ ನ್ಯಾಷನಲ್' ಟೈಟಲ್ ಗೆದ್ದ ಮೇಲೆ 'ಪ್ಯಾರಿಸ್ ಪ್ರಣಯ' ಚಿತ್ರಕ್ಕಾಗಿ ರಘು ಮುಖರ್ಜಿ ರವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಆಫರ್ ಮಾಡಿದ್ರು.

  ರಘು-ಅನು ಮದುವೆ ಆಗಿ ಒಂದು ವರ್ಷ ಆಯ್ತು.! ಆನಿವರ್ಸರಿ ಸೆಲೆಬ್ರೇಷನ್ ಹೇಗಿತ್ತು.?

  ಆದ್ರೆ, ನಾಗತಿಹಳ್ಳಿ ಚಂದ್ರಶೇಖರ್ ಬಗ್ಗೆ ಗೊತ್ತಿಲ್ಲದ ಕಾರಣ ಹಲವು ದಿನ ಅವರಿಗೆ ರಘು ಮುಖರ್ಜಿ ಪ್ರತಿಕ್ರಿಯೆ ನೀಡಿರಲಿಲ್ಲವಂತೆ. ಕೊನೆಗೆ ನಾಗತಿಹಳ್ಳಿ ಚಂದ್ರಶೇಖರ್ ರವರ 'ಅಮೇರಿಕ..ಅಮೇರಿಕ' ಹಾಗೂ 'ನನ್ನ ಪ್ರೀತಿಯ ಹುಡುಗಿ' ಚಿತ್ರಗಳ ಬಗ್ಗೆ ತಿಳಿದುಕೊಂಡ ಮೇಲೆ ಅವರೊಂದಿಗೆ ರಘು ಮಾತನಾಡಿದರಂತೆ.

  ಅಷ್ಟಕ್ಕೂ, ಫಿಲ್ಮ್ ಇಂಡಸ್ಟ್ರಿಗೆ ಕಾಲಿಡಲು ರಘು ಮುಖರ್ಜಿಗೆ ಇಂಟ್ರೆಸ್ಟ್ ಇರಲಿಲ್ಲ. ಆದರೂ, ಅವರು 'ಪ್ಯಾರಿಸ್ ಪ್ರಣಯ' ಚಿತ್ರವನ್ನ ಒಪ್ಪಿಕೊಳ್ಳಲು ಕಾರಣ 'ಯೂರೋಪ್ ಟ್ರಿಪ್'.!

  ನಂಬಿದ್ರೆ ನಂಬಿ... ಬಿಟ್ಟರೆ ಬಿಡಿ... 'ಪ್ಯಾರಿಸ್ ಪ್ರಣಯ' ಚಿತ್ರವನ್ನ ರಘು ಮುಖರ್ಜಿ ಒಪ್ಪಿಕೊಂಡಿದ್ದು ಯೂರೋಪ್ ಗೆ ಹೋಗಬಹುದು ಎಂಬ ಆಸೆ ಮೇರೆಗೆ.!

  ಈ ವಿಚಾರವನ್ನ ಸ್ವತಃ ರಘು ಮುಖರ್ಜಿ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು.

  ''ಸಿನಿಮಾ ಬಗ್ಗೆ ನನಗೆ ಇಂಟ್ರೆಸ್ಟ್ ಇರಲಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ಯಾರು ಅನ್ನೋದೇ ಗೊತ್ತಿರಲಿಲ್ಲ. ಅವರು ಫೋನ್ ಮಾಡಿ ಸುಮಾರು ದಿನ ಆಗಿದ್ದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆಮೇಲೆ ನಾಗತಿಹಳ್ಳಿ ಚಂದ್ರಶೇಖರ್ ರವರ ಬಗ್ಗೆ ಗೊತ್ತಾಯ್ತು. ನಾನು 'ಪ್ಯಾರಿಸ್ ಪ್ರಣಯ' ಸಿನಿಮಾ ಮಾಡಿದ್ದು ಒಂದೇ ಕಾರಣಕ್ಕಾಗಿ... ಯೂರೋಪ್ ಗೆ ಹೋಗುವ ಅವಕಾಶ ಸಿಗುತ್ತೆ. ಒಂದು ತಿಂಗಳು ಅಲ್ಲಿ ಇರಬಹುದು ಅಂತ ಒಪ್ಪಿಕೊಂಡೆ'' ಎಂದಿದ್ದಾರೆ ನಟ ರಘು ಮುಖರ್ಜಿ.

  ಯೂರೋಪ್ ಟ್ರಿಪ್ ಆಸೆಯಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಘು ಮುಖರ್ಜಿ ಇಂದು ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಅಲ್ಲದೇ, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

  English summary
  Read this article to know the real Reason behind Raghu Mukherjee's entry into Sandalwood through 'Paris Pranaya'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X