For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?

  |
  Weekend With Ramesh Season 4: ರಾಘವೇಂದ್ರ ಹೆಸರಿನ ಹಿಂದಿನ ಕಥೆಯೇ ರೋಚಕ

  ಡಾ ರಾಜ್ ಕುಮಾರ್ ಮೂವರು ಮಕ್ಕಳಲ್ಲಿ ಎರಡನೇಯವರು ರಾಘವೇಂದ್ರ ರಾಜ್ ಕುಮಾರ್. ಮೊದಲನೇ ಮಗ ಶಿವರಾಜ್ ಕುಮಾರ್ ಹಾಗೂ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್. ಲಕ್ಷ್ಮಿ ಮತ್ತು ಪೂರ್ಣಿಮಾ ಎಂಬ ಹೆಣ್ಣು ಮಕ್ಕಳು ಇದ್ದಾರೆ.

  ದ್ವಿತೀಯ ಪುತ್ರನಿಗೆ ರಾಘವೇಂದ್ರ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇವರನ್ನ ಪ್ರೀತಿಯಿಂದ ಎಲ್ಲರೂ ರಾಘಣ್ಣ ಎಂದು ಕರೆಯುತ್ತಾರೆ. ರಾಘಣ್ಣ ಅವರಿಗೆ ರಾಘವೇಂದ್ರ ಎಂದು ಹೆಸರಿಡಲು ಒಂದು ವಿಶೇಷವಾದ ಕಾರಣವಿದೆ.

  'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?

  ಈ ಹೆಸರಿನ ಹಿಂದಿರುವ ಕಥೆಯನ್ನ ಹಿರಿಯ ನಿರ್ದೇಶಕ ಭಗವಾನ್ ಮತ್ತು ಹಿರಿಯ ನಟಿ ಜಯಂತಿ ಅವರು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಡಾ ರಾಜ್ ಪುತ್ರನಿಗೆ ಆ ರಾಘವೇಂದ್ರ ಸ್ವಾಮಿಯ ಹೆಸರಿಡಲು ಕಾರಣವೇನು? ಮುಂದೆ ಓದಿ.....

  ಅದು ಮಂತ್ರಾಲಯ ಮಹಾತ್ಮೆ ಚಿತ್ರೀಕರಣದ ಸಮಯ

  ಅದು ಮಂತ್ರಾಲಯ ಮಹಾತ್ಮೆ ಚಿತ್ರೀಕರಣದ ಸಮಯ

  ಆಗ 'ಮಂತ್ರಾಲಯ ಮಹಾತ್ಮೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಟಿವಿ ಸಿಂಗ್ ಠಾಕೂರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದರು. ರಾಜ್ ಕುಮಾರ್, ಉದಯ್ ಕುಮಾರ್, ಜಯಂತಿ, ಕಲ್ಪನ ನಟಿಸುತ್ತಿದ್ದರು. ಆ ಸಂದರ್ಭದಲ್ಲಿ ಹುಟ್ಟಿದವರೇ ರಾಘಣ್ಣ.

  ರಾಘವೇಂದ್ರ ಸ್ವಾಮಿ ಪ್ರಸಾದ

  ರಾಘವೇಂದ್ರ ಸ್ವಾಮಿ ಪ್ರಸಾದ

  ಈ ಹುಡುಗನಿಗೆ ಏನು ಹೆಸರಿಡಬೇಕು ಎಂಬ ಚಿಂತೆಯಲ್ಲಿ ಅಣ್ಣಾವ್ರು ಇದ್ದರು. ರಾಯರ ಪ್ರಸಾದ ಆಗಿದ್ದರಿಂದ ರಾಘವೇಂದ್ರ ಎಂದು ಹೆಸರಿಡುವುದು ಸೂಕ್ತ ಮತ್ತು ಶ್ರೇಯಸ್ಸು ಎಂದು ನಿರ್ಧರಿಸಿ ಆ ಹೆಸರಿಟ್ಟರಂತೆ.

  ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ

  ಜಯಂತಿ ಪಾಲಿಗೆ ಇವರು 'ಬೆಟ್ಟದ ಹುಲಿ'

  ಜಯಂತಿ ಪಾಲಿಗೆ ಇವರು 'ಬೆಟ್ಟದ ಹುಲಿ'

  ಹಿರಿಯ ನಟಿ ಜಯಂತಿ ಪಾಲಿಗೆ ರಾಘವೇಂದ್ರ ರಾಜ್ ಕುಮಾರ್ ಬೆಟ್ಟದ ಹುಲಿ. ಯಾಕಂದ್ರೆ, ಮಂತ್ರಾಲಯ ಮಹಾತ್ಮೆ ಸಿನಿಮಾ ಮತ್ತು ಬೆಟ್ಟದ ಹುಲಿ ಸಿನಿಮಾಗಳ ಚಿತ್ರೀಕರಣ ಅದೇ ಅಂತರದಲ್ಲಿ ನಡೆಯುತ್ತಿತ್ತು. ರಾಘಣ್ಣ ಜನನವಾದ ದಿನ ಬೆಟ್ಟದ ಹುಲಿ ಸೆಟ್ ನಲ್ಲಿ ರಾಜ್ ಇದ್ದರಂತೆ. ಹಾಗಾಗಿ, ಜಯಂತಿ ಈ ಹುಡುಗನಿಗೆ ಬೆಟ್ಟದ ಹುಲಿ ಎಂದು ಕರೆಯಲು ಇಷ್ಟಪಡುತ್ತಿದ್ದರು. ಈಗಲೂ ರಾಘಣ್ಣ ಅವರನ್ನ ಬೆಟ್ಟದ ಹುಲಿ ಎಂದೇ ಕರೆಯುತ್ತಾರೆ.

  ಆಗಸ್ಟ್ 15ಕ್ಕೆ ಹುಟ್ಟಿದ ರಾಘಣ್ಣ

  ಆಗಸ್ಟ್ 15ಕ್ಕೆ ಹುಟ್ಟಿದ ರಾಘಣ್ಣ

  1965 ಅಗಸ್ಟ್ 15 ರಂದು ರಾಘವೇಂದ್ರ ರಾಜ್ ಕುಮಾರ್ ಹುಟ್ಟಿದರು. ವಿಶೇಷ ಅಂದ್ರೆ ಸ್ವಾತಂತ್ರ್ಯ ದಿನಾಚರಣೆಯೂ ಹೌದು. ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಇವರ ಜನನವಾಯಿತು.

  English summary
  Dr rajkumar second son raghavendra rajkumar was participate in Weekend with ramesh 4. why dr rajkumar named raghavendra for his son? the reason revealed in weekend tent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X