»   » ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು

ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು

Posted By: Naveen
Subscribe to Filmibeat Kannada

'ರವಿ.ಡಿ ಚನ್ನಣ್ಣನವರ್' ರವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಿಜಕ್ಕೂ ಅದ್ಭುತವಾಗಿತ್ತು. ಗದಗ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಹುಡುಗನೊಬ್ಬ ಇವತ್ತು 'ಕರ್ನಾಟಕದ ಸಿಂಗಂ' ಆಗಿ ಬೆಳೆದ ಕಥೆ ಬಲು ಸ್ಫೂರ್ತಿದಾಯಕ.['ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು]

ಈ ಮಟ್ಟದ ಸಾಧನೆ ಮಾಡಬೇಕು ಅಂದ್ರೆ ಅದರ ಹಿಂದೆ ಬೆಟ್ಟದಷ್ಟು ನೋವು ಇರುತ್ತೆ. ಆ ಕಲ್ಲು ಮುಳ್ಳಿನ ಹಾದಿಯ ಬಗ್ಗೆ ರವಿ ಅವರ ತಾಯಿ ಮನಬಿಚ್ಚಿ ಮಾತನಾಡಿದ್ರು. ಸಾಮಾನ್ಯವಾಗಿ ಮಕ್ಕಳು ತಾಯಿಯನ್ನ ದೇವರು ಅಂತಾರೆ. ಅಂದ್ರೆ, ಇಲ್ಲಿ ರವಿ ಅವರ ತಾಯಿ ರತ್ನಮ್ಮ ತಮ್ಮ 'ಮಗನನ್ನೇ ದೇವರು' ಅಂತ ಕರೆದರು.

ರವಿ ಚಿಕ್ಕ ವಯಸ್ಸಿನಲ್ಲಿ ಪಟ್ಟ ಕಷ್ಟದ ಬಗ್ಗೆ ಅವರ ತಾಯಿ ಮನತುಂಬಿ ಮಾತನಾಡಿದ್ರು. ಆ ಮಾತುಗಳು ಇಲ್ಲಿವೆ ಓದಿರಿ....

ಕಡು ಬಡತನ

'ರವಿ ಡಿ ಚನ್ನಣ್ಣನವರ್' ಹುಟ್ಟಿದ್ದು ಗದಗ ಜಿಲ್ಲೆಯ ಕೆಳ್ಳೂರು ಎಂಬ ಪುಟ್ಟ ಹಳ್ಳಿಯಲ್ಲಿ. ಕೃಷಿಯನ್ನೇ ನಂಬಿಕೊಂಡಿದ್ದ ಅವರ ಕುಟುಂಬ ಕಡು ಬಡತನದಲ್ಲಿ ಇತ್ತು. ಮೂರು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಅವರಿಗಿತ್ತು. ಅವರ ಆ ಸ್ಥಿತಿಯ ಬಗ್ಗೆ ರವಿ ಅವರ ತಾಯಿ ರತ್ನಮ್ಮ ಮಾತನಾಡಿದ್ರು.

ತುಂಬ ಜಾಣ

''ರವಿ ಬಾಲ್ಯದಲ್ಲಿ ತುಂಬ ಜಾಣ. ತುಂಬ ಚೆನ್ನಾಗಿ ಓದುತ್ತಿದ್ದ. ಆದರೆ, 5 ವರ್ಷ ಇದ್ದಾಗ ಶಾಲೆಗೆ ಸೇರಿಸುವುದಕ್ಕೆ ಹೋದಾಗ, ನನ್ನನ್ನ ನೋಡಿ ಅಮ್ಮ... ಅಂತ ಬಿಕ್ಕಿ ಬಿಕ್ಕಿ ಅಳುತ್ತಿದ್ದ'' - ರತ್ನಮ್ಮ, ರವಿ ತಾಯಿ

ಪೆನ್ಸಿಲ್ ಕದಿಯುತಿದ್ದ

''ರವಿ ಚಿಕ್ಕ ಹುಡುಗನಾಗಿದ್ದಾಗ ಶಾಲೆಯಲ್ಲಿ ಕೆಲ ಹುಡುಗರ ಜೊತೆ ಸೇರಿ ಪೆನ್ಸಿಲ್ ಕದಿಯುತ್ತಿದ್ದ. ಒಮ್ಮೆ ಆ ವಿಷಯ ಗೊತ್ತಾಗಿ, ಹೀಗೆ ಮಾಡಿದ್ರೆ ಶಾಲೆ ಬಿಡಿಸುತ್ತೇನೆ ಅಂತ ಹೇಳಿದ್ದೆ. ಅದಕ್ಕೆ ಇನ್ನು ಮುಂದೆ ಯಾವತ್ತೂ ಮಾಡಲ್ಲ ಅಂತ ಹೇಳಿದ'' - ರತ್ನಮ್ಮ, ರವಿ ತಾಯಿ.

ಕೂಲಿ ಕೆಲಸ

''ಶಾಲೆಯ ಜೊತೆ ಕೆಲಸ ಸಹ ಮಾಡುತ್ತಿದ್ದ. ನನ್ನ ಜೊತೆಗೆ ಹೊಲಗಳಲ್ಲಿ ಕೂಲಿ ಮಾಡುವುದಕ್ಕೆ ಬರುತ್ತಿದ್ದ. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಬಾರ್ ನಲ್ಲಿ ಸಹ ಕೆಲಸ ಮಾಡಿದ್ದಾನೆ'' - ರತ್ನಮ್ಮ, ರವಿ ತಾಯಿ

ಹತ್ತು ಸಾವಿರ ಬಹುಮಾನ ಬಂದಿತ್ತು

''ಪಿಯುಸಿಯಲ್ಲಿ ಫಸ್ಟ್ ರ್ಯಾಂಕ್ ತಗೆದಿದ್ದಕ್ಕೆ ರವಿಗೆ 10,000 ರೂಪಾಯಿ ಬಹುಮಾನ ಬಂದಿತ್ತು. ಆ ದುಡ್ಡನ್ನ ತಮ್ಮ ತಂದೆಗೆ ಕೊಟ್ಟರೆ ಹಾಳು ಮಾಡಬಹುದು ಅಂತ ನನಗೆ ಕೊಟ್ಟಿದ್ದ'' - ರತ್ನಮ್ಮ, ರವಿ ತಾಯಿ

ಹರಿದ ಬಟ್ಟೆಯಲ್ಲಿ ಶಾಲೆಗೆ ಹೋಗುತ್ತಿದ್ದ

''ಅವನಿಗೆ ಶಾಲೆಗೆ ಹಾಕಿಕೊಂಡು ಹೋಗುವುದಕ್ಕೂ ಸರಿಯಾಗಿ ಬಟ್ಟೆ ಇರಲಿಲ್ಲ. ಹರಿದ ಬಟ್ಟೆಯನ್ನೇ ಶಾಲೆಗೆ ಹಾಕಿಕೊಂಡು ಹೋಗುತಿದ್ದ. ಈಗಲೂ ಸಹ ಅವನ 20 ಜೊತೆ ಬಟ್ಟೆಗಳನ್ನ ಹಾಗೆ ಇಟ್ಟುಕೊಂಡಿದ್ದೇನೆ'' - ರತ್ನಮ್ಮ, ರವಿ ತಾಯಿ

'ಮಗನೇ ದೇವರು'

''ನಮ್ಮ ಮನೆಯಲ್ಲಿ ಎಲ್ಲಿಯೂ ದೇವರ ಪೋಟೊ ಇಲ್ಲ. ರವಿ ಸಾಹೇಬರ ಫೋಟೋವನ್ನೇ ದೇವರು ಅಂತ ಇಟ್ಟು ಪೂಜಿಸುತ್ತಿದ್ದೇವೆ'' - ರತ್ನಮ್ಮ, ರವಿ ತಾಯಿ

'ಮುಂದಿನ ಜನ್ಮದಲ್ಲೂ ಅವನಿಗೆ ತಾಯಿಯಾಗ್ತೀನಿ'

''ಇಂತಹ ಒಳ್ಳೆಯ ಮಗ ಹುಟ್ಟಿರೋದಕ್ಕೆ ಎಷ್ಟು ಪುಣ್ಯ ಮಾಡಿದ್ದೇನೋ ನಾನು. ಮುಂದಿನ ಜನ್ಮದಲ್ಲಿ ಸಹ ಅವನಿಗೆ ತಾಯಿಯಾಗ್ತೀನಿ'' - ರತ್ನಮ್ಮ, ರವಿ ತಾಯಿ

English summary
IPS Officer Ravi D Channannavar's mother Rathnamma talks about their struggling days in Weekend with Ramesh-3 show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada