For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ಮತ್ತೆ ರಿಷಿಕಾ ರಗಳೆ

  By Rajendra
  |
  <ul id="pagination-digg"><li class="next"><a href="/tv/bigg-boss-pillow-gift-to-anushree-rishika-075295.html">Next »</a></li></ul>

  ಈಟಿವಿ ಕನ್ನಡ ವಾಹಿನಿಯ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್'ಗೆ ಅಂತಿಮ ತೆರೆ ಬೀಳುವ ಸಮಯ ಹತ್ತಿರವಾಗುತ್ತಿದೆ. ಕಣದಲ್ಲಿ ಉಳಿದಿರುವ ನಾಲ್ಕು ಮಂದಿಯಲ್ಲಿ ಯಾರು ವಿನ್ನರ್, ಯಾರು ರನ್ನರ್ ಎಂಬುದು ಗೊತ್ತಾಗಲು ಇನ್ನು ಉಳಿದಿರುವುದು ಕೇವಲ ಕೆಲವೇ ಗಂಟೆಗಳು ಮಾತ್ರ.

  ಬಿಗ್ ಬಾಸ್ ಮನೆಯಲ್ಲಿ 95ನೇ ದಿನ ಏನು ನಡೆಯಿತು ಎಂಬ ಬಗ್ಗೆ ಒಮ್ಮೆ ಕಣ್ಣಾಡಿಸೋಣ ಬನ್ನಿ. ತಮ್ಮ ಜಗಳಗಂಟಿ ಸ್ವಭಾವದಿಂದ ಬಿಗ್ ಬಾಸ್ ಮನೆಯಲ್ಲಿ ಭಾರಿ ರಾದ್ಧಾಂತ ಸೃಷ್ಟಿಸಿದ್ದ ರಿಷಿಕಾ ಸಿಂಗ್ ಪುನರಾಗಮನವಾಗಿದೆ. ಜೊತೆಗೆ ಅನುಶ್ರೀ ಸಹ ಇದ್ದಾರೆ.

  ಇವರಿಬ್ಬರೂ ಮನೆಯಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿದರು. ಒಂದು ದಿನ ಎಲ್ಲರೊಂದಿಗೆ ಕಳೆಯಲು ಬಿಗ್ ಬಾಸ್ ಕೊಟ್ಟಿದ್ದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ ಇನ್ನೊಂದು ಕಡೆ ಇವರಿಬ್ಬರ ಕಲರವ ಮನೆಯಲ್ಲಿ ಜೋರಾಗಿತ್ತು.

  ರಿಷಿಕಾ ಹಾವಭಾವಗಳನ್ನು ಪ್ರದರ್ಶಿಸುತ್ತಾ ಅವರಂತೆ ಮಾಡಿ ತೋರಿಸಿದರು ವಿಜಯ್ ರಾಘವೇಂದ್ರ. ಬ್ರಹ್ಮಾಂಡ ಗುರುಗಳು ರಿಷಿಕಾ ಅವರಂತೆಯೇ ಕತ್ತು ತಿರುಗಿಸಿ ಹಾಗೆ ಹೀಗೆ ಮಾಡಿ ತೋರಿಸಿದರು. ಇದಕ್ಕೆ ಸೂಪರ್ ಎಂದು ರಿಷಿಕಾ ಇಬ್ಬರನ್ನೂ ಹಾಡಿ ಹೊಗಳಿದರು.

  ಅರುಣ್ ಕುಮಾರ್ ಅವರಂತೂ ಅಣ್ಣಾವ್ರ ಧ್ವನಿಯನ್ನು ಅನುಕರಿಸಿ ಮಾಡಿದ ಮಿಮಿಕ್ರಿ ಎಲ್ಲರನ್ನೂ ರಂಜಿಸಿತು. ಅರುಣ್ ಅವರ ಮಿಮಿಕ್ರಿಗೆ ಅನುಶ್ರೀ ಅವರಂತೂ ತುಂಬಾ ಎಕ್ಸೈಟ್ ಆಗಿದ್ದರು. ಇದೇ ಸಂದರ್ಭದಲ್ಲಿ ನಾನು ನಿಮ್ಮನ್ನು ಒಂದ್ಸಲ ಹಗ್ ಮಾಡಬಹುದಾ ಎಂದು ಅರುಣ್ ಕೇಳಿದ್ದಕ್ಕೆ ಅನುಶ್ರೀ ತಪ್ಪಿಸಿಕೊಂಡರು.

  <ul id="pagination-digg"><li class="next"><a href="/tv/bigg-boss-pillow-gift-to-anushree-rishika-075295.html">Next »</a></li></ul>
  English summary
  Etv Kannada's big reality show Bigg Boss day 95th highlights. Actors Rishika Singh and Anushree re-enters house and spend joyful moments with inmates. Arun Sagar celebrates wedding anniversary and he got a chance to make a call to his wife.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X