»   » ಬಿಗ್ ಬಾಸ್ ಮನೆಯಿಂದ ಆರ್.ಜೆ ನೇತ್ರ ಔಟ್ ಆಗಲು ಕಾರಣವೇನು?

ಬಿಗ್ ಬಾಸ್ ಮನೆಯಿಂದ ಆರ್.ಜೆ ನೇತ್ರ ಔಟ್ ಆಗಲು ಕಾರಣವೇನು?

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಿಂದ ಆರ್.ಜೆ ನೇತ್ರ ಅವರು ಔಟ್ ಆಗಿದ್ದಾರೆ. ಇವರೊಂದಿಗೆ ಸುನಾಮಿ ಕಿಟ್ಟಿ, ನಟಿ ಶ್ರುತಿ, ರೆಹಮಾನ್, ಕೃತಿಕಾ ನಾಮಿನೇಟ್ ಆಗಿದ್ದರು. ಆದರೆ ಕೊನೆಗೆ ಆರ್.ಜೆ ನೇತ್ರಾ ಅವರು ಮನೆಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ.

ಕಳೆದ ವಾರ 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ 'ಶ್ರುತಿ ಹೋಟೆಲ್' ಸೋತ ಕಾರಣ ತಂಡದಲ್ಲಿದ್ದ ನಟಿ ಶ್ರುತಿ, ನೇತ್ರ, ಕಿಟ್ಟಿ, ರೆಹಮಾನ್ ಮತ್ತು ಕೃತಿಕಾ ಅವರು ನೇರವಾಗಿ ನಾಮಿನೇಟ್ ಆಗಿದ್ದರು.[ಆರ್.ಜೆ ನೇತ್ರಗೆ ಮೊಟ್ಟೆ ಹೊಡೆದ 'ಬಿಗ್ ಬಾಸ್' ಮನೆ ಸದಸ್ಯರು]

RJ Nethra Out of 'Bigg Boss 3' house

ಆದರೆ ಇಷ್ಟು ಮಂದಿಯಲ್ಲಿ ಬರೀ ನೇತ್ರ ಅವರು ಮಾತ್ರ ಔಟ್ ಆಗಲು ಕಾರಣ ಏನಪ್ಪಾ ಅಂದ್ರೆ, ಅತ್ಯಂತ ಕಡಿಮೆ ಎಸ್.ಎಂ ಎಸ್ ಒಂದು ಕಡೆಯಾದರೆ, ಇತ್ತೀಚೆಗೆ ಮನೆಯಲ್ಲಿ ಹೆಚ್ಚಾಗಿ ಬೆರೆಯದೆ ಒಂಥರಾ ಮೂಡಿಯಾಗಿ ಉಳಿಯುತ್ತಿದ್ದರು. ಜೊತೆಗೆ ಟಾಸ್ಕ್ ಗಳನ್ನು ಸರಿಯಾಗಿ ಕಂಪ್ಲೀಟ್ ಮಾಡುತ್ತಿರಲಿಲ್ಲ. ಅಲ್ಲದೇ ಅವರು ಮೌನಗೌರಿಯಾಗಿ ಮನೆಯಲ್ಲಿ ಇದ್ದಾರೆ ಎಂದು ವೀಕ್ಷಕರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನೇತ್ರಾ ಮನೆಯಿಂದ ಆಚೆ ಬಂದ್ರು.

ನಟಿ ಶ್ರುತಿ ಅವರು ಬಿಗ್ ಮನೆಯಲ್ಲಿ ಅಮ್ಮನ ಸ್ಥಾನ ಪಡೆದುಕೊಂಡು ಇನ್ನು ಮುಗುಮ್ಮಾಗಿಯೇ ಉಳಿದಿರುವುದರಿಂದ ಅವರು ಓಪನ್ ಆಗಲಿ ಎಂದು ವೀಕ್ಷಕರೇ ಉಳಿಸಿಕೊಂಡಿರಬಹುದು.

ಇನ್ನು ರೆಹಮಾನ್ ಉಳಿಯಲು ಕಾರಣ ನೇಹಾ ಗೌಡ ಆಚೆ ಹೋದ ಮೇಲೆ ಮತ್ತೆ ಮನೆಯವರ ಜೊತೆ ಚೆನ್ನಾಗಿ ಬೆರೆಯುತ್ತಾ ಟಾಸ್ಕ್ ಕೂಡ ಚೆನ್ನಾಗಿ ಮಾಡುತ್ತಿದ್ದಾರೆ.['ಬಿಗ್ ಬಾಸ್' ಮನೆಯಿಂದ ಆರ್.ಜೆ ನೇತ್ರ ಔಟ್?]

RJ Nethra Out of 'Bigg Boss 3' house

ಇನ್ನು ಕೃತಿಕಾ ಅವರ ಕಡೆ ಬಂದರೆ ಅವರು ಮನೆಯಲ್ಲಿ ಶ್ರುತಿ ಅವರನ್ನು ಅಮ್ಮ ಎನ್ನುತ್ತಿದ್ದಾರೆ. ಹಾಗಾಗಿ ಒಂಥರಾ ಅಮ್ಮ-ಮಗಳ ಸಂಬಂಧ ಬಿಗ್ ಮನೆಯಲ್ಲಿ ಬೆಳೆಯುತ್ತಿದೆ. ಆ ಸಂಬಂಧ ಇನ್ನು ಎಲ್ಲಿಯವರೆಗೂ ಹೋಗುತ್ತದೆ ಎಂದು ನೋಡಲು ವೀಕ್ಷಕರು ಕಾತರರಾಗಿರುವುದರಿಂದ, ಅವರನ್ನು ವೀಕ್ಷಕರೇ ಉಳಿಸಿಕೊಂಡಿದ್ದಾರೆ.

ಸುನಾಮಿ ಕಿಟ್ಟಿಯ ಕಡೆ ಬಂದರೆ ಅವರು ಇನ್ನು ಕನ್ ಫ್ಯೂಶನ್ ನಲ್ಲೇ ಇದ್ದಾರೆ. ಮೊನ್ನೆ ಪೊಲೀಸ್ ಟಾಸ್ಕ್ ಆದಾಗಿನಿಂದ ಪೂರ್ತಿ ಕನ್ ಫ್ಯೂಶನ್ ಮಾಡಿಕೊಂಡಿರುವುದರಿಂದ ಅವರನ್ನು ಉಳಿಸಿಕೊಳ್ಳಲಾಗಿದೆ. ಅಲ್ಲದೆ ಅವರು ಕೊಟ್ಟ ಟಾಸ್ಕ್ ಗಳನ್ನೆಲ್ಲಾ ಚೆನ್ನಾಗಿ ಮಾಡುತ್ತಿದ್ದಾರೆ.

ಆದ್ದರಿಂದ ಫೈನಲಿ ನೇತ್ರಾ ಎಲ್ಲರ ಟಾರ್ಗೆಟ್ ಆಗಿ ಬಿಗ್ ಮನೆಯಿಂದ ಹೊರನಡೆದಿದ್ದಾರೆ. ಇನ್ನುಳಿದ ಶ್ರುತಿ, ಕೃತಿಕಾ, ರೆಹಮಾನ್ ಮತ್ತು ಸುನಾಮಿ ಕಿಟ್ಟಿ ಸೇಫ್ ಆಗಿದ್ದಾರೆ.

English summary
RJ Nethra has been eliminated from the 'Bigg Boss 3' kannada during the weekend with Kichcha Sudeep's show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada