For Quick Alerts
  ALLOW NOTIFICATIONS  
  For Daily Alerts

  ಬಿಗ್ ಮನೆಯಲ್ಲಿ ಮೊದಲ ದಿನವೆ ಬಕ್ರ ಆದ ವೈಲ್ಡ್ ಕಾರ್ಡ್ ಸ್ಪರ್ಧಿ ಆರ್.ಜೆ ಪೃಥ್ವಿ

  |

  ಬಿಗ್ ಬಾಸ್ ಕನ್ನಡ ಸೀಸನ್-7 ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ. ಬಿಗ್ ಮನೆಯಿಂದ ಈ ಬಾರಿ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಔಟ್ ಆದ ಮೂರನೆ ಸ್ಪರ್ಧಿಯಾಗಿದ್ದಾರೆ ರಶ್ಮಿ. ಬಿಗ್ ಮನೆಯಿಂದ ಒಬ್ಬರು ಹೊರಬರುತ್ತಿದ್ದಂತೆ ಮತ್ತೋರ್ವ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ. ಆರ್.ಜೆ ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

  ಕಿಚ್ಚ ಸುದೀಪ್ ಗೆ ಸಿಟ್ಟು ತರಿಸಿದ ಚೈತ್ರ ಕೋಟೂರು.!ಕಿಚ್ಚ ಸುದೀಪ್ ಗೆ ಸಿಟ್ಟು ತರಿಸಿದ ಚೈತ್ರ ಕೋಟೂರು.!

  ವೈಲ್ಡ್ ಕಾರ್ಡ್ ಎಂಟ್ರಿ ಯಾರಿರಬಹುದು ಎನ್ನುವ ಕುತೂಹಲ ವೀಕ್ಷಕರಲ್ಲಿ ಇತ್ತು. ನಿನ್ನೆಯ ಕಾರ್ಯಕ್ರಮದಲ್ಲಿ ಪೃಥ್ವಿ ಎಂಟ್ರಿ ಕೊಡುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಪೃಥ್ವಿ, ಫೀವರ್ 104 ಎಫ್ ನಲ್ಲಿ ಆರ್ ಜೆಯಾಗಿ ಕೆಲಸ ಮಾಡುತ್ತಿದ್ದಾರೆ. ಪೃಥ್ವಿ ಯಾರು ಎನ್ನುವುದು ಅನೇಕರಿಗೆ ಗೊತ್ತಿರದೆ ಇರಬಹುದು, ಆದರೆ ಅವರ ಧ್ವನಿ ಬಹುತೇಕರಿಗೆ ಚಿರಪರಿಚಿತ.

  ಇವನ್ಯಾರೋ ಡಿಫರೆಂಟ್ ವೆರಿ ವೆರಿ ಡಿಫರೆಂಟ್

  ಇವನ್ಯಾರೋ ಡಿಫರೆಂಟ್ ವೆರಿ ವೆರಿ ಡಿಫರೆಂಟ್

  ಕುತೂಹಲ ಮೂಡಿಸಿದ್ದ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪೃಥ್ವಿ ವೇದಿಕೆ ಮೇಲೆ ಬರುತ್ತಿದ್ದಂತೆ ಇವನ್ಯಾರೋ ಡಿಫರೆಂಟ್ ವೆರಿ ವೆರಿ ಡಿಫರೆಂಟ್ ಎನ್ನುವ ಫೀಲ್ ವೀಕ್ಷಕರಲ್ಲಿ ಬರದೆ ಇರಲಿಕ್ಕೆ ಸಾಧ್ಯವಿಲ್ಲ. ಬೋಳು ತಲೆ, ಉದ್ದ ಮೀಸೆ ಮತ್ತು ದಾಡಿ, ವಿಚಿತ್ರ ಕಾಸ್ಟ್ಯೂಮ್ ನೋಡಿ ವೀಕ್ಷಕರು ಒಮ್ಮೆ ಬೆರಗಾಗಿದ್ದಾರೆ.

  'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?'ಬಿಗ್ ಬಾಸ್' ಬಗ್ಗೆ ಜೈಜಗದೀಶ್ ಬಹಿರಂಗ ಅಸಮಾಧಾನ: ಸುದೀಪ್ ಏನಂದರು.?

  ಗಂಡಸರ ಫ್ಯಾಷನ್ ಬೋರ್ ಆಗಿದೆಯಂತೆ

  ಗಂಡಸರ ಫ್ಯಾಷನ್ ಬೋರ್ ಆಗಿದೆಯಂತೆ

  ಪೃಥ್ವಿ ಔಟ್ ಲುಕ್ ನೋಡಿ ಅಚ್ಚರಿಯಾಗಿದ್ದಲ್ಲದೆ, ಗಂಡಸರ ಫ್ಯಾಷನ್ ತುಂಬ ಬೋರ್ ಆಗಿ ಸ್ಟೈಲ್ ಬದಲಾಯಿಸಿಕೊಂಡಿದ್ದೇನೆ ಎನ್ನುವ ಮಾತು ವೀಕ್ಷಕರಿಗೆ ಮತ್ತಷ್ಟು ವಿಚಿತ್ರ ಎನಿಸಿರುವುದರಲ್ಲಿ ಅನುಮಾನವೆ ಇಲ್ಲ. ಪೃಥ್ವಿ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಬಿಗ್ ಮಂದಿಯನ್ನು ಕೊಂಚ ಕಾಡಿದರು. ನಂತರ ಪೃಥ್ವಿ ಮನೆಯೊಳಗೆ ಹೋಗುತ್ತಿದ್ದಂತೆ ರಶ್ಮಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದರು. ಪೃಥ್ವಿ ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದಲ್ಲ, ವೈಲ್ಡ್ ಕಾರ್ಡ್ ಎಂಟ್ರಿ ನನ್ನದು, ಸ್ಪರ್ಧಿಯಾಗಿ ಇಲ್ಲಿಯೆ ಇರುತ್ತೇನೆ ಎಂದು ಹೇಳಿ ಬಿಗ್ ಮಂದಿಗೆ ಶಾಕ್ ನೀಡಿದರು.

  ಬಕ್ರ ಆದ ಪೃಥ್ವಿ

  ಬಕ್ರ ಆದ ಪೃಥ್ವಿ

  ಬಿಗ್ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೆ ಬಿಗ್ ಮನೆಯ ಸ್ಪರ್ಧಿಗಳಿಂದ ಬಕ್ರ ಆಗಿದ್ದಾರೆ. ಮಿಮಿಕ್ರಿ ಕಿಂಗ್ ಹರೀಶ್ ರಾಜ್ ಬಿಗ್ ಬಾಸ್ ಧ್ವನಿಯಲ್ಲಿ ಮಾತನಾಡಿ ಪೃಥ್ವಿ ಅವರನ್ನು ಪ್ರಾಂಕ್ ಮಾಡಿದ್ದಾರೆ. "ಪೃಥ್ವಿ ರಾಜ್ ಈ ಕೂಡಲೆ ಸ್ವಿಮ್ಮಿಂಗ್ ಪೂಲ್ ಗೆ ಬೀಳಬೇಕೆಂದು ಬಿಗ್ ಬಾಸ್ ಆದೇಶಿಸುತ್ತದೆ" ಎಂದು ಹರೀಶ್ ರಾಜ್ ಬಿಗ್ ಬಾಸ್ ಧ್ವನಿಯಲ್ಲಿ ಹೇಳಿದ್ದನ್ನು ಕೇಳಿ ಬಿಗ್ ಬಾಸ್ ಹೇಳುತ್ತಿದ್ದಾರೆ ಎಂದು ಪೃಥ್ವಿ ಪೂಲ್ ಒಳಗೆ ಬಿದ್ದು ಬಿಡುತ್ತಾರೆ. ನಂತರ ಎಲ್ಲರೂ ಸೇರಿ ಪ್ರಾಂಕ್ ಮಾಡಿದ್ದಾರೆ ಎನ್ನುವ ವಿಚಾರ ಪೃಥ್ವಿಗೆ ಗೊತ್ತಾಗಿ ಕಂಗಾಲಾಗುತ್ತಾರೆ.

  ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಶೈನ್ ವಿರುದ್ಧ ಗುಟುರು ಹಾಕಿದ ಸುದೀಪ್.!ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಶೈನ್ ವಿರುದ್ಧ ಗುಟುರು ಹಾಕಿದ ಸುದೀಪ್.!

  ಮತ್ತಷ್ಟು ರಂಗೇರಲಿದೆ ಬಿಗ್ ಮನೆ

  ಮತ್ತಷ್ಟು ರಂಗೇರಲಿದೆ ಬಿಗ್ ಮನೆ

  ಪೃಥ್ವಿ ಎಂಟ್ರಿಯಿಂದ ಈ ವಾರ ಬಿಗ್ ಮನೆ ಹೇಗಿರಲಿದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಈಗಾಗಲೆ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಒಂದು ರೀತಿಯ ಹೊಂದಾಣಿಕೆ ಆಗಿರುತ್ತೆ. ನಾಲ್ಕನೆ ವಾರ ಪೃಥ್ವಿ ಎಂಟ್ರಿಯಾಗಿರುವುದರಿಂದ ಮನೆಯವರು ಅವರನ್ನು ಹೇಗೆ ಟ್ರೀಟ್ ಮಾಡಲಿದ್ದಾರೆ, ಬಿಗ್ ಮನೆಯಲ್ಲಿ ಪೃಥ್ವಿ ಹೇಗಿರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  RJ Prithvi wild card entry to Bigg Boss kannada season 7. Bigg Boss contestants pranked to RJ Prithvi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X