For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಧಿಪತಿ': ಮೊದಲ ದಿನ ರಾಕಿಂಗ್ ಸ್ಟಾರ್ ಎಷ್ಟು ಗೆದ್ರು.?

  By Bharath Kumar
  |
  Kannadada Kotyadhipathi season 3 ಕೋಟ್ಯಾಧಿಪತಿಯಲ್ಲಿ ಯಶ್ ಭರ್ಜರಿ ಆಟ..!

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದರು. ಈ ಎಪಿಸೋಡ್ ನೋಡಲು ಅಭಿಮಾನಿಗಳು ಕಾಯ್ತಿದ್ದರು. ಕೊನೆಗೂ ಯಶ್ ಅವರ ಸಂಚಿಕೆ ಶುಕ್ರವಾರ ಪ್ರಸಾರವಾಗಿದೆ.

  ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಯಶ್ ಆಟವನ್ನ ಸಖತ್ ಜೋಶ್ ಆಗಿ ಆಡಿದರು. ಆದ್ರೆ, ಮೊದಲ ದಿನ ಯಶ್ ಅವರಿಗೆ ಎದುರಾಗಿದ್ದು ಕೇವಲ ಐದು ಪ್ರಶ್ನೆಗಳು ಮಾತ್ರ. ಈ ಐದು ಪ್ರಶ್ನೆಗಳು 'ರಾಜಾಹುಲಿ'ಗೆ ಸುಲಭವಾಗಿ ಉತ್ತರ ನೀಡಿ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ.

  ಹಾಗಿದ್ರೆ, ಕನ್ನಡದ ಕೋಟ್ಯಧಿಪತಿಯಲ್ಲಿ ರಾಕಿಂಗ್ ಯಶ್ ಗೆ ಕೇಳಲಾದ ಆ ಐದು ಪ್ರಶ್ನೆಗಳು ಯಾವುದು.? ಹೇಗಿತ್ತು 'ಮಾಸ್ಟರ್ ಪೀಸ್' ಕೊಟ್ಟ ರಾಕಿಂಗ್ ಉತ್ತರ, ಹಾಗೂ ಮೊದಲ ಸಂಚಿಕೆ.? ಮುಂದೆ ನೋಡಿ...

  ಅದ್ಧೂರಿ ಎಂಟ್ರಿ

  ಅದ್ಧೂರಿ ಎಂಟ್ರಿ

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಡುಗಳ ಮೂಲಕ ಅವರಿಗೆ ಅದ್ಧೂರಿ ಎಂಟ್ರಿ ನೀಡಲಾಯಿತು. ಈ ವೇಳೆ ನಿರೂಪಕ ರಮೇಶ್ ಅರವಿಂದ್ ಹಾಗೂ ಯಶ್ ಒಟ್ಟಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ನಂತರ ಯಶ್ ಅವರನ್ನ ಹಾಟ್ ಸೀಟ್ ನಲ್ಲಿ ಕೂರಿಸಿದರು. ಆಟ ಶುರು.

  ಯಶ್ ಎದುರಿಸಿದ ಮೊದಲ ಪ್ರಶ್ನೆ.?

  ಯಶ್ ಎದುರಿಸಿದ ಮೊದಲ ಪ್ರಶ್ನೆ.?

  ಆಡುಮಾತಿನ ಪ್ರಕಾರ ಸೂರ್ಯನಿಗೆ ಏನನ್ನು ಹಿಡಿಯುವುದು ಹಾಸ್ಯಾಸ್ಪದ.?
  A ಬಕೆಟ್
  B ಟಾರ್ಚ್
  C ಗಿಡಯಾರ
  D ಕನ್ನಡಿ
  ಯಶ್ ಕೊಟ್ಟ ಸರಿಯಾದ ಉತ್ತರ : B ಟಾರ್ಚ್

  ಎರಡನೇ ಪ್ರಶ್ನೆ.?

  ಎರಡನೇ ಪ್ರಶ್ನೆ.?

  ಪುಂಗಿ ಎಂಬ ವಾದ್ಯವನ್ನ ಇವರಲ್ಲಿ ಯಾರು ಹೆಚ್ಚಾಗಿ ಬಳಸುವವರು.?

  A ಮೇಳದವರು
  B ದಾಸರು
  C ಡಂಗೂರ ಸಾರುವವರು
  D ಹಾವಾಡಿಗರು
  ಯಶ್ ಕೊಟ್ಟ ಸರಿಯಾದ ಉತ್ತರ : D ಹಾವಾಡಿಗರು

  ಯಶ್ ಗೆ ಮೂರನೇ ಪ್ರಶ್ನೆ

  ಯಶ್ ಗೆ ಮೂರನೇ ಪ್ರಶ್ನೆ

  2018ನೇ ಸಾಲಿನ ಐಪಿಎಲ್ ವೇಳೆ ಯಾವ ತಂಡವನ್ನ ಬೆಂಬಲಿಸಿ ಈ ಸಲ ಕಪ್ ನಮ್ದೆ ಎಂಬ ಹ್ಯಾಷ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.?

  A ಡೆಲ್ಲಿ ಡೇರ್ ಡೇವಿಲ್ಸ್
  B ರಾಜಸ್ತಾನ ರಾಯಲ್ಸ್
  C ರಾಯಲ್ ಚಾಲೆಂಜಯರ್ಸ್ ಬೆಂಗಳೂರು
  D ಮುಂಬೈ ಇಂಡಿಯೆನ್ಸ್
  ಯಶ್ ಕೊಟ್ಟ ಸರಿಯಾದ ಉತ್ತರ : C ರಾಯಲ್ ಚಾಲೆಂಜಯರ್ಸ್ ಬೆಂಗಳೂರು

  ಐದು ಸಾವಿರ ಪ್ರಶ್ನೆ.?

  ಐದು ಸಾವಿರ ಪ್ರಶ್ನೆ.?

  ಇದು ಯಾವ ರಾಜಕಾರಣಿ ಧ್ವನಿ ಎಂದು ಗುರುತಿಸಿ.?

  A ಸಿದ್ದರಾಮಯ್ಯ
  B ಎಚ್ ಡಿ ದೇವೇಗೌಡ
  C ಬಿಎಸ್ ಯಡಿಯೂರಪ್ಪ
  D ಮಲ್ಲಿಕಾರ್ಜುನ ಖರ್ಗೆ
  ಯಶ್ ಕೊಟ್ಟ ಸರಿಯಾದ ಉತ್ತರ : A ಸಿದ್ದರಾಮಯ್ಯ

  ಐದನೇ ಪ್ರಶ್ನೆ

  ಐದನೇ ಪ್ರಶ್ನೆ

  ಇವುಗಳಲ್ಲಿ ಯಾವ ಚಲನಚಿತ್ರದಲ್ಲಿ ಡಾ ರಾಜ್ ಕುಮಾರ್ ಮತ್ತು ಡಾ ವಿಷ್ಣುವರ್ಧನ್ ಒಟ್ಟಾಗಿ ಅಭಿನಯಿಸಿದ್ದಾರೆ.?

  A ಭಾಗ್ಯವಂತರು
  B ಭಾಗ್ಯಲಕ್ಷ್ಮಿ
  C ಗಂಧದ ಗುಡಿ
  D ಹೊಸಬೆಳಕು
  ಯಶ್ ಕೊಟ್ಟ ಸರಿಯಾದ ಉತ್ತರ : C ಗಂಧದ ಗುಡಿ

  ಯಶ್ ಒಟ್ಟು ಗಳಿಸಿದ್ದೆಷ್ಟು.?

  ಯಶ್ ಒಟ್ಟು ಗಳಿಸಿದ್ದೆಷ್ಟು.?

  ರಾಕಿಂಗ್ ಸ್ಟಾರ್ ಯಶ್ ಮೊದಲ ದಿನದ ಎಪಿಸೋಡ್ ನಲ್ಲಿ ಐದು ಪ್ರಶ್ನೆಗಳಿಗೆ ಉತ್ತರ ನೀಡಿ 10 ಸಾವಿರ ಗೆದ್ದಿದ್ದಾರೆ. ಮೊದಲ ಜಗಲಿಕಟ್ಟೆ ಹಂತವನ್ನ ದಾಟಿದ್ದಾರೆ. ಸೋಮವಾರ ಮುಂದಿನ ಸಂಚಿಕೆಯಲ್ಲಿ ಯಶ್ ಮತ್ತೆ ಬರ್ತಾರೆ. ಕಾದು ನೋಡೋಣ ಯಶ್ ಎಷ್ಟು ಗೆಲ್ತಾರೆ.?

  English summary
  Kannada actor Rocking Star Yash participate in Kannadada Kotyadipathi Reality show. here is the rocking star's 1st episode in kannadada kotyadhipathi'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X