»   » ರಾಕಿಂಗ್ ಸುದ್ದಿ: ಟಿವಿ ಆಂಕರ್ ಆಗಿ ಕಿರುತೆರೆ ಕಡೆ ಮುಖ ಮಾಡಿದ ಯಶ್

ರಾಕಿಂಗ್ ಸುದ್ದಿ: ಟಿವಿ ಆಂಕರ್ ಆಗಿ ಕಿರುತೆರೆ ಕಡೆ ಮುಖ ಮಾಡಿದ ಯಶ್

Posted By:
Subscribe to Filmibeat Kannada

ಕನ್ನಡದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ. ಸಿನಿಮಾ ಜಗತ್ತಿಗೆ ಎಂಟ್ರಿ ಕೊಡುವ ಮೊದಲು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಯಶ್ ಈಗ ಅದೇ ಕಿರುತೆರೆಯಲ್ಲಿ ನಿರೂಪಕರಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

ಹೌದು, 'ಜೀ ಕನ್ನಡ' ವಾಹಿನಿಯ ವಿಶೇಷ ಕಾರ್ಯಕ್ರಮವೊಂದರಲ್ಲಿ 'ಮಿಸ್ಟರ್ ರಾಮಾಚಾರಿ' ಆಂಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಕೂಡ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಅದ್ಭುತ ಕ್ಷಣಕ್ಕೆ ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಸಾಕ್ಷಿಯಾಗಿದ್ದಾರೆ.

ಹಾಗಿದ್ರೆ, ಈ ಕಾರ್ಯಕ್ರಮ ಯಾವುದು? ಯಾವಾಗ ಪ್ರಸಾರವಾಗುತ್ತೆ ಎಂದು ತಿಳಿದುಕೊಳ್ಳಿ ಫೋಟೋ ಸ್ಲೈಡ್ ಗಳಲ್ಲಿ.....

'ಶ್ರೀಸದ್ಗುರು' ಸಂದರ್ಶನ ಮಾಡಿದ ಯಶ್

ದೇಶಾದ್ಯಂತ ''Rally For Rivers‏'' ಅಭಿಯಾನವನ್ನ ಕೈಗೊಂಡಿರುವ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಅವರನ್ನ ರಾಕಿಂಗ್ ಸ್ಟಾರ್ ಯಶ್ ಸಂದರ್ಶನ ಮಾಡಿದ್ದಾರೆ. ಶ್ರೀ ಸದ್ಗುರು ಜೊತೆ ಸಂವಾದ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಯಶ್ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸೊಸೆ ರಾಧಿಕಾ ಪಂಡಿತ್ ಗೆ ಪ್ರೀತಿಯ ಅತ್ತೆ ಕಡೆಯಿಂದ ಸಿಕ್ಕಿದೆ ಅದ್ಧೂರಿ ಗಿಫ್ಟ್!

ನದಿ ನೀರು ಸಂರಕ್ಷಣೆ ಬಗ್ಗೆ ಜಾಗೃತಿ

''Rally For Rivers‏'' ಅಭಿಯಾನಕ್ಕೆ ನಟ ಯಶ್ ಅವರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಸದ್ಗುರು ಜೊತೆ ಕೈಜೋಡಿಸಿರುವ ಯಶ್, ಇಂತಹದೊಂದು ವಿಶೇಷ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ.

ಸೌತ್ ಸಿನಿಮಾ ರಂಗದಲ್ಲಿ ಶುರುವಾಯ್ತು ಯಶ್ 'KGF' ಹವಾ!

ರಾಧಿಕಾ ಪಂಡಿತ್ ಕೂಡ ಭಾಗಿ

ಈ ಸಂದರ್ಶನದಲ್ಲಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗವಹಿಸಿದ್ದು, ವೀಕ್ಷಕರ ಗ್ಯಾಲರಿಯಲ್ಲಿ ಕೂತು ಸಂದರ್ಶನ ವೀಕ್ಷಿಸಿದ್ದಾರೆ.

ಯಾವಾಗ ಪ್ರಸಾರ

'ಯಶ್ ಮತ್ತು ಸದ್ಗುರು ಸಂವಾದ' ಕಾರ್ಯಕ್ರಮ, ಇದೇ ಭಾನುವಾರ ಸಂಜೆ 6.30ಕ್ಕೆ ನಿಮ್ಮೆ ನೆಚ್ಚಿನ ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

'ಗಣೇಶ' ಉತ್ಸವದಲ್ಲಿ ಮೈಕಲ್ ಜಾಕ್ಸನ್ ಆದ ರಾಕಿಂಗ್ ಸ್ಟಾರ್

'ಯಶ್ ಮತ್ತು ಸದ್ಗುರು ಸಂವಾದ' ಪ್ರೋಮೋ ನೋಡಿ

English summary
Kannada Actor, Rocking star Yash interviewed Shri Jagadguru Jaggi Vasudev. The Programme will telecast on September 10th on zee kannada channel
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada