»   » ತಾಯಿ ಸಾವಿತ್ರಿಯನ್ನು ನೆನೆದು ಕಣ್ಣೀರಿಟ್ಟ ಚಂದ್ರಿಕಾ

ತಾಯಿ ಸಾವಿತ್ರಿಯನ್ನು ನೆನೆದು ಕಣ್ಣೀರಿಟ್ಟ ಚಂದ್ರಿಕಾ

Posted By:
Subscribe to Filmibeat Kannada
<ul id="pagination-digg"><li class="next"><a href="/tv/sudeep-comedy-punches-bigg-boss-074126.html">Next »</a></li></ul>

ಈ ಶುಕ್ರವಾರ (ಮೇ 18) ಕಿಚ್ಚ ಸುದೀಪ್ ನಿರೂಪಿಸಿದ "ವಾರದ ಕಥೆ ಕಿಚ್ಚನ ಜೊತೆ" ಎಲ್ಲರನ್ನೂ ರಂಜಿಸಿತು. ಸುದೀಪ್ ಈ ಬಾರಿ ಮನೆಯ ಎಲ್ಲ ಸದಸ್ಯರಿಗೆ ತಾಯಂದಿರ ದಿನವನ್ನು ನೆನಪಿಸಿ ಎಲ್ಲರ ಅಮ್ಮಂದಿರ ಬಗ್ಗೆ ಕೇಳುತ್ತಾ ಕಣ್ಣು ಮಂಜಾಗುವಂತೆ ಮಾಡಿದರು. ಕ್ಷಣಕಾಲ ಎಲ್ಲರನ್ನೂ ಭಾವನಾತ್ಮಕವಾಗಿ ಹಿಡಿದಿಟ್ಟರು ಸುದೀಪ್.

ನಿಕಿತಾ ಅವರು ತಮ್ಮ ತಂದೆಯನ್ನು ನೆನೆದು ಕಣ್ಣೀರಿಟ್ಟರು. ಆದರೆ ಅರುಣ್ ಸಾಗರ್ ಅವರಲ್ಲೇ ನಮ್ಮ ತಂದೆಯವರನ್ನು ಕಂಡೆ ಎಂಬ ಭಾವ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಇದೇ ಸಂದರ್ಭದಲ್ಲಿ ಸುದೀಪ್ ಅವರು ಚಂದ್ರಿಕಾ ಅವರ ತಾಯಿ ಬಗ್ಗೆಯೂ ಕೇಳಿದರು.

Actress Chandrika

ತಮ್ಮ ತಾಯಿಯ ಬಗ್ಗೆ ಹೇಳುತ್ತಾ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ ಎಂದ ಚಂದ್ರಿಕಾ, ಮಾತಿನ ಆಳಕ್ಕೆ ಇಳಿಯುತ್ತಿದ್ದಂತೆ ಗದ್ಗದಿತರಾದರು. ನಮ್ಮ ತಾಯಿ ಓದಿರುವುದು ಮೂರನೇ ಕ್ಲಾಸು. ಕ್ಯಾಮೆರಾ ಮುಂದೆ ಬರಲ ಅವರಿಗೆ ತುಂಬಾ ಸಂಕೋಚ. ಹಾಗಾಗಿ ಅವರು ಕ್ಯಾಮೆರಾ ಮುಂದೆ ಬರಲಿಲ್ಲ.

ನನ್ನ ಲೈಫು ಹೀಗಾಯಿತಲ್ಲಾ ಎಂಬ ನೋವು ಅವರಿಗೆ ಇದ್ದೇ ಇದೆ. ಅಮ್ಮ ದಯವಿಟ್ಟು ನನ್ನ ಜೊತೆ ಇರಿ. ನಿನ್ನನ್ನು ನೋಡಿಕೊಳ್ಳಲು ನಾಲ್ಕು ಜನ ಮಕ್ಕಳಿದ್ದೇವೆ. ನನ್ನ ಜೊತೆ ಬಂದು ಇರಿ ಎಂದು ಕಣ್ಣೀರಿನಲ್ಲೇ ಕರೆಕೊಟ್ಟರು. ತಮ್ಮ ತಾಯಿ ಹೆಸರು ಸಾವಿತ್ರಿ ಎಂಬುದನ್ನು ಚಂದ್ರಿಕಾ ಕಾರ್ಯಕ್ರಮದಲ್ಲಿ ತಿಳಿಸಿದರು. ಸಾವಿತ್ರಿ ಅವರು ಚಂದ್ರಿಕಾ ಜೊತೆ ಇರುವಂತೆ ಅವರ ಪರವಾಗಿ ಸುದೀಪ್ ಸಹ ಭಿನ್ನವಿಸಿಕೊಂಡರು. ಕ್ಷಣಕಾಲ ಪ್ರೇಕ್ಷಕರನ್ನು ಸುದೀಪ್ ಭಾವುಕಲೋಕಕ್ಕೆ ಕರೆದೊಯ್ದರು.

<ul id="pagination-digg"><li class="next"><a href="/tv/sudeep-comedy-punches-bigg-boss-074126.html">Next »</a></li></ul>
English summary
Bigg Boss participant Rohan Gowda evicted from the house on this Friday, 18th May. Sudeep comedy punches, Arun Sagar love story, Loose Mada Yogesh re-entry, Rishika's Yakshagana controversy etc,. are the highlights of the week. The shows weekly roundup 'Vaarada Kathe Kichchana Jothe' highlights. &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada