»   » ಕರೋಡ್ ಪತಿ ಬಂಪರ್ ಬಹುಮಾನ ರು.7 ಕೋಟಿ

ಕರೋಡ್ ಪತಿ ಬಂಪರ್ ಬಹುಮಾನ ರು.7 ಕೋಟಿ

Posted By:
Subscribe to Filmibeat Kannada

ಕನ್ನಡದ ಕೋಟ್ಯಾಧಿಪತಿ ಬಹುಮಾನದ ಮೊತ್ತ ರು.1 ಕೋಟಿ ಇತ್ತು. ನಾಲ್ಕು ಲೈಫ್ ಲೈನ್ ಗಳನ್ನು ಬಳಸಿಕೊಂಡು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾ ಒಂದು ಕೋಟಿ ಗೆಲ್ಲುವ ಸದಾವಕಾಶ ಕಲ್ಪಿಸಲಾಗಿತ್ತು. ಇದು ಕನ್ನಡದ ಕೋಟ್ಯಾಧಿಪತಿ ಮಾತಾಯಿತು. ಈಗ ಹಿಂದಿಯ 'ಕೌನ್ ಬನೇಗಾ ಕರೋಡ್ ಪತಿ' ಏಳನೇ ಸೀಸನ್ 2013 ಸೆಪ್ಟೆಂಬರ್ 6ರಿಂದ ಶುರುವಾಗುತ್ತಿದೆ.

ಹೊಸ ಸೀಸನ್ ವಿಶೇಷ ಏನೆಂದರೆ ಬಹುಮಾನದ ಮೊತ್ತವನ್ನು ರು.7 ಕೋಟಿಗೆ ಏರಿಸಲಾಗಿದೆ. ಹಾಗೆಯೇ ನಾಲ್ಕು ಲೈಫ್ ಲೈನ್ ಗಳ ಬದಲಾಗಿ ಐದು ಲೈಫ್ ಲೈನ್ ಗಳನ್ನು ಈ ಬಾರಿಯ ಸೀಸನ್ ನಲ್ಲಿ ನೀಡಲಾಗುತ್ತಿದೆ. ಸೋನಿ ಎಂಟರ್ ಟೈನ್ ಮೆಂಟ್ ಟೆಲಿವಿಷನ್ ನಲ್ಲಿ ಸೆಪ್ಟೆಂಬರ್ 6ರಿಂದ ಹೊಸ ಸೀಸನ್ ಆರಂಭ.

Amitabh Bachchan

ಆರನೇ ಸೀಸನ್ ನಲ್ಲಿ ಸ್ಪರ್ಧಿಗೆ ಜಾಕ್ ಪಾಟ್ ಪ್ರಶ್ನೆ ಕೇಳಲಾಗುತ್ತದೆ. ಈ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ರು.5 ಕೋಟಿ ಬಹುಮಾನ ಸಿಗುತ್ತಿತ್ತು. ಈಗ ಜಾಕ್ ಪಾಟ್ ಮೊತ್ತವನ್ನು ರು.7 ಕೋಟಿಗೆ ಏರಿಸಲಾಗಿದೆ ಎನ್ನುತ್ತವೆ ಮೂಲಗಳು. ಇದರ ಜೊತೆಗೆ ಹೆಚ್ಚುವರಿ ಲೈಫ್ ಲೈನ್ ಸಹ ಇರುತ್ತದೆ ಎನ್ನಲಾಗಿದ್ದು ವಿವರಗಳು ಇನ್ನಷ್ಟೆ ಹೊರಬೀಳಬೇಕು.

ಇಷ್ಟು ದಿನ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಈ ಶೋ ಮುಂಬೈ ಗುರಗಾಂವ್ ನ ಫಿಲಿಂಸಿಟಿಯಲ್ಲಿ ನಡೆಯುತ್ತಿತ್ತು. ಈಗ ಮುಂಬೈನ ಅಂಧೇರಿ ಪಶ್ವಿಮ ಭಾಗದಲ್ಲಿರುವ ಯಶ್ ರಾಜ್ ಫಿಲಂಸ್ ಸ್ಟುಡಿಯೋದಲ್ಲಿ ನಡೆಯಲಿದೆ. ಇದಕ್ಕಾಗಿ ಭರ್ಜರಿ ಸೆಟ್ ಸಹ ಹಾಕಲಾಗಿದೆ.

ಕೌನ್ ಬನೇಗಾ ಕರೋಡ್ ಪತಿ ಏಳನೇ ಸೀಸನ್ ಕುರಿತು ಗುರುವಾರ (ಆ.29) ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಪಾಲ್ಗೊಳ್ಳುತ್ತಿದ್ದು ಅಧಿಕೃತ ವಿವರಗಳನ್ನು ನೀಡಲಿದ್ದಾರೆ. ಎಪ್ಪತ್ತರ ಹರೆಯದ ಬಿಗ್ ಬಿ ಈ ಬಾರಿ ಏನು ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಿಗೆ ಇದ್ದೇ ಇದೆ. (ಏಜೆನ್ಸೀಸ್)

English summary
Sources says "Kaun Banega Crorepati 2013" can help you win Rs 7 crore! And that with the help of not four but five lifelines. The forthcoming season of the show, which goes on air on Sony Entertainment Television Sep 6, contestants can play for an amount bigger than ever.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada