For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಟ್ಟು ಕಿರುತೆರೆಗೆ ಬಂದ ಎಸ್ ನಾರಾಯಣ್ ಪುತ್ರ ಪಂಕಜ್!

  |

  ಸಿನಿಮಾ ಕಲಾವಿದರ ಹಾಗೆ ಕಿರುತೆರೆ ಕಲಾವಿದರು ಪ್ರೇಕ್ಷಕರ ಮನಸ್ಸಲ್ಲಿ ಉಳಿಯುತ್ತಾರೆ. ಕಿರುತೆರೆ ಮೂಲಕ ನಿತ್ಯ ಪ್ರೇಕ್ಷಕರ ಮುಂದೆ ಬರುವ ಕಲಾವಿದರು ಸಿನಿಮಾ ಮಂದಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆಯುತ್ತಾರೆ. ಇನ್ನು ಸಾಕಷ್ಟು ಕಿರುತೆರೆ ಕಲಾವಿದರು ಹಿರಿತೆರೆಗೆ, ಸಿನಿಮಾದಲ್ಲಿ ನಟಿಸಿದವರು ಕಿರುತೆರೆಗೆ ಬರುವುದು ಸಹಜವಾಗಿದೆ.

  ಸಿನಿಮಾದ ಹಲವು ನಟ ನಟಿಯರು ಸಿನಿಮಾ ಅದೃಷ್ಟ ಕೈ ಕೊಟ್ಟಾಗ ಅಥವ ಕಿರುತೆರೆಯಲ್ಲಿ ಉತ್ತಮ ಅವಕಾಶ ಸಿಕ್ಕಾಗ, ಸಿನಿಮಾ ಬಿಟ್ಟು ಕಿರುತೆರೆಗೆ ಬರುತ್ತಾರೆ. ಈಗ ಕನ್ನಡದ ಮತ್ತೊಬ್ಬ ಹಸರಾಂತ ನಟ ಸಿನಿಮಾ ಬಿಟ್ಟು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದು ಹಿರಿಯ ನಿರ್ದೇಶಕ ಎಸ್.ನಾರಾಯಣ್ ಪುತ್ರ ಪಂಕಜ್.

  ಪುಟ್ಟಕ್ಕನ ಮಕ್ಕಳು: ಅಮ್ಮನ ಮುಂದೆ ಪ್ರೀತಿ ಹೇಳಿಕೊಂಡ ನಾಯಕ ಕಂಠಿ!ಪುಟ್ಟಕ್ಕನ ಮಕ್ಕಳು: ಅಮ್ಮನ ಮುಂದೆ ಪ್ರೀತಿ ಹೇಳಿಕೊಂಡ ನಾಯಕ ಕಂಠಿ!

  ಹೌದು ಕಿರುತೆರೆಯಲ್ಲಿ ಪಂಕಜ್ ಸದ್ಯ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಕನ್ನಡದ 'ಪಾರು' ಧಾರಾವಾಹಿಯಲ್ಲಿ ನಟ ಎಸ್.ನಾರಾಯಣ್ ವೀರಣ್ಣ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಇದೇ ಧಾರಾವಾಹಿಗೆ ಎಸ್.ನಾರಾಯಣ್ ಪುತ್ರ ಪಂಕಜ್ ಕೂಡ ಎಂಟ್ರಿ ಕೊಟ್ಟಿದೆ. ಈ ಸೀರಿಯಲ್‌ನಲ್ಲಿ ಪಂಕಜ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡುತ್ತಿರುವ ಪಂಕಜ್, ಕಿರುತೆಯಲ್ಲಿ ಸೆಟಲ್ ಆಗ್ತಾರ?, ಕಿರುತೆರೆಯಲ್ಲಿ ನಾಯಕನಾಗಿ ಮುಂದೆ ಎಂಟ್ರಿ ಕೊಡ್ತಾರ ಎನ್ನುವುದನ್ನು ನೋಡಬೇಕು. ಯಾಕೆಂದರೆ ಪಂಕಜ್ ಒಂದು ಸಮಯದಲ್ಲಿ ಕನ್ನಡದ ಹಿಟ್ ನಟ ಎನಿಸಿಕೊಂಡಿದ್ದರು. ಅವರ ಕೆಲವು ಸಿನಿಮಾಗಳು ಹೆಸರು ಮಾಡಿದವು. ಆದರೆ ಕ್ರಮೇಣ ಅವರ ಸಿನಿಮಾಗಳು ಅಷ್ಟೇನು ಸದ್ದು ಮಾಡಲಿಲ್ಲ. ಹಾಗಾಗಿ ಇತ್ತೀಚೆಗೆ ಅವರು ಸಿನಿಮಾ ಮಾಡುವುದನ್ನು ನಿಲ್ಲಿಸಿದ್ದಾರೆ.

  ಸಿನಿಮಾದಿಂದ ತೆರೆಮರೆಗೆ ಸರಿದ ನಟ ಪಂಕಜ್, ಈಗ ಕಿರುತೆಯಲ್ಲಿ ಕಾಣಿಸಿಕೊಂಡು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಾಗಾಗಿ ಪಂಕಜ್ ಇನ್ನು ಮುಂದೆ ಸಿನಿಮಾ ಬಿಟ್ಟು ಸಂಪೂರ್ಣವಾಗಿ ಸೀರಿಯಲ್‌ನಲ್ಲಿ ಅಭಿನಯದ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಪಂಕಜ್ ಅವರೇ ಮಾತಾಡಬೇಕು.

  ಈಗಾಗಲೇ ಹಲವು ನಟ, ನಟಿಯರು ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಹಲವು ಸಿನಿಮಾ ಕಲಾವಿದರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ರಚಿತಾ ರಾಮ್, ತಾರಾ, ಅನುಪ್ರಭಾಕರ್, ಸೋನು ಗೌಡ, ನಟಿ ಲಕ್ಷ್ಮೀ, ವಿನಯಾ ಪ್ರಸಾದ್, ರಕ್ಷಿತಾ, ಉಮಾಶ್ರೀ, ಭಾವನಾ ಹಾಗೂ ನಟರಾದ ರವಿಚಂದ್ರನ್, ಎಸ್ ನಾರಾಯಣ್, ಮಾಸ್ಟರ್ ಆನಂದ್, ಮೋಹನ್, ಅಭಿಜಿತ್, ಜೈ ಜಗದೀಶ್, ಅನಿರುದ್ಧ್, ಸೇರಿದಂತೆ ಹಲವು ಸಿನಿಮಾ ತಾರೆಯರು, ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

  ಇದಕ್ಕೆ ಉತ್ತಮ ನಿದರ್ಶನವೆಂದರೆ, ನಟ ಅನಿರುದ್ಧ್. ಅನಿರುದ್ಧ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಬೆಳ್ಳಿ ತೆರೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿಲ್ಲ. ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಜೊತೆ ಜೊತೆಯಲಿ' ಸೀರಿಯಲ್ ಅವರ ಕೈ ಹಿಡಿದಿದ್ದು, ಆರ್ಯವರ್ಧನ್ ಆಗಿ ಹೊರ ಹೊಮ್ಮಿದ್ದಾರೆ. ಸದ್ಯ ಅನಿರುದ್ಧ ಅವರು ಯಶಸ್ಸು ಕಂಡಿದ್ದು, ಎಲ್ಲರ ನೆಚ್ಚಿನ ನಟರಾಗಿದ್ದಾರೆ.

  ಇದೀಗ ಸಾಲು ಸಾಲಾಗಿ ಹಲವು ಸಿನಿಮಾ ಕಲಾವಿದರು ಕಿರುತೆರೆಯತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಶುರುವಾದ ರಾಮಾಚಾರಿ ಎಂಬ ಧಾರಾವಾಹಿಯಲ್ಲೂ ದೊಡ್ಡ ತಾರಾ ಬಳಗವೇ ಇದ್ದು, ನಟಿ ಭಾವನಾ ಈ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಲ್ಲಿ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  S Narayan Son Pankaj Enters To Tv Serial With Paaru Serial, Know More
  Saturday, March 12, 2022, 10:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X