ಧ್ರುವ ಸರ್ಜಾ ಆಟೋ ಓಡಿಸಲು ಸೃಜನ್ ಲೋಕೇಶ್ ಕಾರಣ.!
Recommended Video

'ಚಾಲೆಂಜ್', 'ಚೋಟಾ ಚಾಂಪಿಯನ್', 'ಕಾಸಿಗೆ ಟಾಸ್' ಹಾಗೂ 'ಮಜಾ ಟಾಕೀಸ್'... ಅಂತಹ ರಿಯಾಲಿಟಿ ಶೋಗಳ ಸೂತ್ರಧಾರ ಸೃಜನ್ ಲೋಕೇಶ್ ಇದೀಗ ಹೊಸ ಶೋ ಆರಂಭಿಸುತ್ತಿದ್ದಾರೆ.
ಉದಯ ವಾಹಿನಿಗಾಗಿ 'ಸದಾ ನಿಮ್ಮೊಂದಿಗೆ' ಎಂಬ ಹೆಸರಿನ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ಪ್ರಾರಂಭ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಈ ಶೋ ಮೂಡಿಬರಲಿದ್ದು, ಇದರಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಟೋ ಓಡಿಸಿದ್ದಾರೆ.
ಮೈಸೂರಿನ ಓರ್ವ ಆಟೋ ಡ್ರೈವರ್ ಕಷ್ಟಕ್ಕೆ ಸ್ಪಂದಿಸಿದ ಧ್ರುವ ಸರ್ಜಾ, ಆ ಕುಟುಂಬಕ್ಕೆ ಆರ್ಥಿಕ ನೆರವಾಗಲು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ಒಂದು ದಿನ ಆಟೋ ಓಡಿಸಿದ್ದಾರೆ.

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸೃಜನ್ ಲೋಕೇಶ್, ''ಸದಾ ನಿಮ್ಮೊಂದಿಗೆ' ತುಂಬಾ ಒಳ್ಳೆಯ ಕಾನ್ಸೆಪ್ಟ್ ಹೊಂದಿದೆ. ಯಾರಿಗಾದರೂ ಸಹಾಯ ಆಗುತ್ತೆ ಅನ್ನೋದಾದರೆ, ನಮ್ಮ ಸಿನಿಮಾ ಆರ್ಟಿಸ್ಟ್ ಗಳೇ ಬಂದು ಅವರಿಗೋಸ್ಕರ ಕಾಮನ್ ಮ್ಯಾನ್ ಮಾಡುವ ಕೆಲಸ ಮಾಡಿ ಅದರಲ್ಲಿ ಬರುವ ಹಣದ ಜೊತೆಗೆ ನಮ್ಮ ಪ್ರೊಡಕ್ಷನ್ ಹಾಗೂ ಚಾನೆಲ್ ಕಡೆಯಿಂದಲೂ ಹಣ ಕೊಡುತ್ತೇವೆ. ಈ ಕಾರ್ಯಕ್ರಮಕ್ಕಾಗಿ ಧ್ರುವ ಸರ್ಜಾ ಆಟೋ ಓಡಿಸಿದ್ದಾರೆ'' ಎಂದರು.
ಬರೀ ಧ್ರುವ ಮಾತ್ರ ಅಲ್ಲ. ಈ ಕಾರ್ಯಕ್ರಮದಲ್ಲಿ ಶ್ರೀಮುರಳಿ, ರಶ್ಮಿಕಾ ಮಂದಣ್ಣ, ಪ್ರಿಯಾಮಣಿ, ಧನಂಜಯ್ ಸೇರಿದಂತೆ ಹಲವರು ಭಾಗವಹಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮ ಜುಲೈ 15 ರಿಂದ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











