For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ಹೀಗೆ ಬಂದು ಹಾಗೆ ಹೊರ ಹೋದಾಕೆ

  By ಜೇಮ್ಸ್ ಮಾರ್ಟಿನ್
  |

  ರಾಜಕೀಯದಾಟದಲ್ಲಿ ಪಕ್ಷದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಸಂಗ್ರಾಮ್ ಎಲ್ಲರೊಡನೆ ತಾನು ಸತ್ಯವಂತ ಎಂಬುದನ್ನು ಸಾಬೀತುಪಡಿಸಲು ಸುಳ್ಳು ಪರೀಕ್ಷೆ ಯಂತ್ರ (lie detector test) ಮುಂದೆ ಪರೀಕ್ಷೆಗೆ ಒಡ್ಡಿಕೊಂಡು ಒದ್ದಾಡಿದ್ದು ಮಜಾ ನೀಡಿದರೆ, ವಾರಾಂತ್ಯದಲ್ಲಿ ಎಂದಿನಂತೆ ಒಬ್ಬರು ಮನೆ ಬಿಟ್ಟು ಹೊರ ಬಂದಿದ್ದಾರೆ. ಹೀಗೆ ಬಂದು ಹಾಗೆ ಹೋದ ಅತಿಥಿ ಸ್ಪರ್ಧಿ ಕ್ಯಾಂಡಿ ಬ್ರಾರ್.

  ಕುಶಾಲ್ ಹಾಗೂ ಗೌಹರ್ ಪ್ರೇಮ್ ಕಹಾನಿಗೆ ಟ್ವಿಸ್ಟ್ ಕೊಡಲು ಮನೆಹೊಕ್ಕಿದ್ದ ಕ್ಯಾಂಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲಳಾಗಿ ಮನೆಯಿಂದ ಹೊರ ನಡೆದಿದ್ದಾಳೆ.ನಿರೂಪಕ ಸಲ್ಮಾನ್ ಖಾನ್ ಕ್ಯಾಂಡಿ ಹೆಸರು ಹೇಳಿದಾಗ ಯಾರಿಗೂ ಅಷ್ಟಾಗಿ ಅಚ್ಚರಿ ಮೂಡಲಿಲ್ಲ. ಜತೆಗೆ ಕುಶಾಲ್ ಮನೆಗೆ ಬಂದರೆ ಹೇಗೆ? ಕುಶಾಲ್ ನನ್ನು ನೀವೆಲ್ಲ ಒಪ್ಪಿಕೊಳ್ಳುತ್ತೀರಾ? ಎಂದು ಸಲ್ಮಾನ್ ಪ್ರಶ್ನೆ ಎಸೆದು ಉತ್ತರ ಪಡೆದಿದ್ದಾನೆ.

  ಜತೆಗೆ ಸಲ್ಮಾನ್ ನನಗೆ ಕ್ಷಮೆ ಕೋರಿದ್ದಾನೆ ಎಂದು ಕುಶಾಲ್ ಹೇಳಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಬಗ್ಗೆ ಸಲ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದು ಗೌಹರ್ ಹುಬ್ಬೇರುವಂತೆ ಮಾಡಿತು. ಕುಶಾಲ್ ಮನೆಗೆ ರೀ ಎಂಟ್ರಿ ಬಗ್ಗೆ ಬಿಗ್ ಬಾಸ್ ತಂಡ ನಿರ್ಧರಿಸಲಿದೆ. ನಾನು ಇಲ್ಲಿ ನಿರೂಪಕ ಮಾತ್ರ ಎಂದು ಸಲ್ಮಾನ್ ಮತ್ತೆ ಮತ್ತೆ ಹೇಳಿದರು.

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಏಜಾಜ್ ಜತೆ ಮನೆ ಹೊಕ್ಕಿದ್ದ ಕ್ಯಾಂಡಿ ಮನೆಯಲ್ಲಿ ಗ್ಲಾಮರ್ ಆಗಲಿ, ಜಗಳವಾಗಲಿ ಹುಟ್ಟು ಹಾಕಲಿಲ್ಲ. ಗೌಹರ್, ತನೀಶಾ, ಅರ್ಮಾನ್, ಆಂಡಿ ಮುಂದೆ ಸಪ್ಪಗಾದಳು. ಗೌಹರ್, ಕಾಮ್ಯಾ, ಪ್ರತ್ಯೂಷಾ, ಏಜಾಜ್ ಒಂದು ಗುಂಪಾಗಿ ಬೆಳೆಯುತ್ತಿದ್ದಾರೆ, ಎಲ್ಲಿ ನಾಯಕತ್ವ, ಸಂಗ್ರಾಮ್ ಆಂಡಿ ಗೆಳೆತನ, ತನೀಶಾ-ಅರ್ಮಾನ್ ಆಪ್ತತೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

  ಕ್ಯಾಂಡಿ ಜತೆ ನಾಮಿನೇಟ್ ಆಗಿದ್ದ ಸಂಗ್ರಾಮ್ ಸಿಂಗ್, ಸೋಫಿಯಾ ಹಯಾತ್, ಏಜಾಜ್ ಖಾನ್ ಎಲಿಮಿನೇಷನ್ ನಿಂದ ಬಚಾವ್ ಆಗಿದ್ದಾರೆ. ಮುಂದಿನ ವಾರ ಕುಶಾಲ್ ರೀ ಎಂಟ್ರಿ ಆಗುತ್ತದೆಯೇ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

  ಹೀಗೆ ಬಂದು ಹಾಗೆ ಹೊರ ಹೋದಾಕೆ

  ಹೀಗೆ ಬಂದು ಹಾಗೆ ಹೊರ ಹೋದಾಕೆ

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಏಜಾಜ್ ಜತೆ ಮನೆ ಹೊಕ್ಕಿದ್ದ ಕ್ಯಾಂಡಿ ಮನೆಯಲ್ಲಿ ಗ್ಲಾಮರ್ ಆಗಲಿ, ಜಗಳವಾಗಲಿ ಹುಟ್ಟು ಹಾಕಲಿಲ್ಲ

  ಕುಶಾಲ್ ಮಾಜಿ ಗೆಳತಿ

  ಕುಶಾಲ್ ಮಾಜಿ ಗೆಳತಿ

  ಮನೆಯಿಂದ ಹೊರ ಬಿದ್ದಿರುವ ಕುಶಾಲ್ ಥಂಡನ್ ನ ಮಾಜಿ ಗೆಳತಿಯಾಗಿರುವ ಕ್ಯಾಂಡಿ ಬ್ರಾರ್ ಹಳೆ ಪ್ರೇಮಕಥೆಯ ಬಗ್ಗೆ ಮಾತೇ ಆಡಲಿಲ್ಲ.

  ಪ್ರೇಕ್ಷಕರಿಗೆ ನಿರಾಶೆ

  ಪ್ರೇಕ್ಷಕರಿಗೆ ನಿರಾಶೆ

  ಕುಶಾಲ್ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದಾಗ ಮನೆಯ ಇನ್ನೊಂದು ತುದಿಯಲ್ಲಿದ್ದ ಕ್ಯಾಂಡಿ ಎಲ್ಲವನ್ನು ನೋಡಿದ್ದಳು. ಮನೆಗೆ ಏಜಾಜ್ ಜತೆ ಎಂಟ್ರಿಕೊಟ್ಟ ಕ್ಯಾಂಡಿ ತನ್ನ ಹಳೆ ಲವ್ ಸ್ಟೋರಿ ಬಗ್ಗೆ ಮಾತನಾಡದೆ ನಿರಾಶೆ ಮೂಡಿಸಿದಳು

  ಕುಶಾಲ್ ಸಿಗಲೇ ಇಲ್ಲ

  ಕುಶಾಲ್ ಸಿಗಲೇ ಇಲ್ಲ

  ಕುಶಾಲ್ ಮನೆಯಲ್ಲಿದ್ದಾಗಲೇ ಕ್ಯಾಂಡಿಯನ್ನು ಮನೆಗೆ ಬಿಡುವುದು ಬಿಗ್ ಬಾಸ್ ಉದ್ದೇಶವಾಗಿತ್ತು, ಆದರೆ, ಕ್ಯಾಂಡಿಗೆ ಕುಶಾಲ್ ಎದುರುಗೊಳ್ಳುವ ಅವಕಾಶವೇ ಸಿಗಲಿಲ್ಲ. ಕುಶಾಲ್ ಹಾಗೂ ಗೌಹರ್ ಮನೆ ಬಿಟ್ಟು ಹೊರಕ್ಕೆ ಹೊರಟ್ಟಿದ್ದರು

  ಕುಶಾಲ್ ಹೊರಕ್ಕೆ

  ಕುಶಾಲ್ ಹೊರಕ್ಕೆ

  ಕ್ಯಾಂಡಿ ಎಂಟ್ರಿಗೂ ಮುನ್ನ ಆಂಡಿ ಮೇಲೆ ಕೈ ಮಾಡಿದ ಕುಶಾಲ್ ವರ್ತನೆಯನ್ನು ಎಲ್ಲರೂ ಖಂಡಿಸಿದರೆ ಗೌಹರ್ ಸಮರ್ಥಿಸಿದ್ದಲ್ಲದೆ, ಕುಶಾಲ್ ಜತೆ ಮನೆ ಬಿಟ್ಟು ಹೊರಕ್ಕೆ ನಡೆದಳು

  ಕ್ಯಾಂಡಿ ಎಂಟ್ರಿ ಕಾರಣವೇ

  ಕ್ಯಾಂಡಿ ಎಂಟ್ರಿ ಕಾರಣವೇ

  ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ನಡೆದ ಎನ್ನಲಾಗಿದೆ.

  ಕ್ಯಾಂಡಿ, ಏಜಾಜ್

  ಕ್ಯಾಂಡಿ, ಏಜಾಜ್

  ಕ್ಯಾಂಡಿ, ಏಜಾಜ್ ಹಾಗೂ ಸೋಫಿಯಾ ಹಯಾತ್ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ್ದು, ಕುಶಾಲ್ ಕೂಡಾ ರೀ ಎಂಟ್ರಿ ಪಡೆಯುವ ಸಾಧ್ಯತೆ ಹೆಚ್ಚಿದೆ

  ಮನೆಯಲ್ಲಿ ಕ್ಯಾಂಡಿ

  ಮನೆಯಲ್ಲಿ ಕ್ಯಾಂಡಿ

  ಇತರೆ ಸ್ಪರ್ಧಿಗಳು ಕ್ಯಾಂಡಿ ಬಾಯಿ ಬಿಡಲು ಬಿಡದಂತೆ ಆಕೆ ಮೇಲೆ ದಬ್ಬಾಳಿಕೆ ನಡೆಸಿದ್ದರಿಂದ ಕ್ಯಾಂಡಿ ಮೊದಲಿನಿಂದಲೂ ಸೈಲಂಟ್ ಆಗಿ ಉಳಿದು ಬಿಟ್ಟಳು. ಇದೇ ಆಕೆಗೆ ಮುಳುವಾಯಿತು

  ಕ್ಯಾಂಡಿ-ಕುಶಾಲ್

  ಕ್ಯಾಂಡಿ-ಕುಶಾಲ್

  ಮದ್ಯ ಚಟದಿಂದ ಬಳಲುತ್ತಿದ್ದ ಕುಶಾಲ್ ಟ್ರೀಟ್ ಮೆಂಟ್ ಮುಗಿಸಿಕೊಂಡು ಬಿಗ್ ಬಾಸ್ ಗೆ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದರ ನಡುವೆ ಹಳೆ ಗೆಳೆತಿ ಕ್ಯಾಂಡಿ ಜತೆ ಸಂಪರ್ಕ್ ಕಡಿದು ಕೊಳ್ಳುವ ಮೊದಲು ಆಕೆ ಮೇಲೆ ದೈಹಿಕ ಹಲ್ಲೆ ಕೂಡಾ ನಡೆಸಿದ್ದ ಎನ್ನಲಾಗಿದೆ.

  ಕುಶಾಲ್ ರೀ ಎಂಟ್ರಿ

  ಕುಶಾಲ್ ರೀ ಎಂಟ್ರಿ

  ಕುಶಾಲ್ ಮತ್ತೆ ಮನೆಗೆ ಬಂದರೆ ಏನು ಆಗುತ್ತೋ ನನಗೆ ಗೊತ್ತಿಲ್ಲ ಎಂದು ಅರ್ಮಾನ್ ಹೇಳಿದ್ದಾನೆ. ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಾಳೆ.

  ಕ್ಯಾಂಡಿ ಏಜಾಜ್

  ಕ್ಯಾಂಡಿ ಏಜಾಜ್

  ಕ್ಯಾರವಾನ್ ನಲ್ಲಿದ್ದಾಗ ಕ್ಯಾಂಡಿ ಮೇಲೆ ಮೋಹಿತನಾಗಿದ್ದ ಏಜಾಜ್

  ಕ್ಯಾಂಡಿ ಗೆಳೆಯನ ಜತೆ

  ಕ್ಯಾಂಡಿ ಗೆಳೆಯನ ಜತೆ

  ಮನೆಯಿಂದ ಹೊರ ಬಿದ್ದ ಕ್ಯಾಂಡಿ ಗೆಳೆಯನ ಜತೆ

  English summary
  Bigg Boss 7's host Salman Khan is going to call out Candy Brar's name in tonight's eliminations. Candy Brar was brought into the show to add some more spice to the Gauhar-Kushal love story, but just before she entered the show, Kushal Tandon got himself kicked out of the house for violence against a fellow inmate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X