For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಿಂದ ಬ್ಯಾಡ್ ಬಾಯ್ ಔಟ್?

  By Mahesh
  |
  ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನದ್ದೇ ಈಗ ಎಲ್ಲೆಡೆ ಸುದ್ದಿ ಕನ್ನಡದಲ್ಲಿ ಬಾಲ್ಯವಸ್ಥೆಯಲ್ಲಿರುವ ಈ ಶೋ ಹಾಗೂ ಹೀಗೂ ಜನಪ್ರಿಯತೆ ಉಳಿಸಿಕೊಂಡಿದೆ. ಹಿಂದಿ ಬಿಗ್ ಬಾಸ್ ನಲ್ಲಿ ಸ್ಟಾರ್ ನಿರೂಪಕ ಸಲ್ಮಾನ್ ಖಾನ್ ಕರೆ ತಂದು ಟಿಆರ್ ಪಿ ಹೆಚ್ಚಿಸಿಕೊಂಡಿದ್ದ ಕಲರ್ಸ್ ವಾಹಿನಿ ಈಗ ಕಂಗಾಲಾಗಿದೆ.

  ಬಾಲಿವುಡ್ ಮಂದಿಯ ಪಾಲಿಗೆ ಬ್ಯಾಡ್ ಬಾಯ್ ಆಗಿರುವ ಸಲ್ಮಾನ್ ಖಾನ್ ಅವರು ಮುಂದಿನ ಸರಣಿಯಲ್ಲಿ ನಿರೂಪಣೆ ಮಾಡುವುದು ಅನುಮಾನ ಎನ್ನಲಾಗಿದೆ. ಸಲ್ಮಾನ್ ಅವರ ಬ್ಯುಸಿ ಕಾರ್ಯಕ್ರಮಗಳು, ಆರೋಗ್ಯದಲ್ಲಿ ಏರುಪೇರು ಜೊತೆಗೆ ಕೋರ್ಟಿಗೆ ಅಲೆಯುವುದು ಮುಂತಾದ ಕಾರಣಗಳು ಎತ್ತು ನಿಂತಿದೆ.

  ಲಭ್ಯ ಮಾಹಿತಿ ಪ್ರಕಾರ ಸಲ್ಮಾನ್ ಖಾನ್ ಬದಲಿಗೆ ಶಾರುಖ್ ಖಾನ್ ಅವರನ್ನು ಕರೆ ತರಲು ಕಲರ್ಸ್ ವಾಹಿನಿ ಕಾಮತ್ ನಿರ್ಧರಿಸಿದ್ದಾರಂತೆ. ಈ ಬಗ್ಗೆ ಕಿಂಗ್ ಖಾನ್ ಅವರಿಗೂ ಆಹ್ವಾನ ಕಳಿಸಲಾಗಿದೆ ಎಂಬ ಸುದ್ದಿಯಿದೆ. ಸಲ್ಮಾನ್ ಖಾನ್ ಗೆ ನೀಡುತ್ತಿದ್ದ ಸಂಭಾವನೆಗೂ ಹೆಚ್ಚು ಕೊಟ್ಟರೆ ನಾನು ರೆಡಿ ಎಂದು ಶಾರುಖ್ ಹೇಳಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದೆ.

  ಸದ್ಯಕ್ಕೆ ಇದು ಗಾಳಿಸುದ್ದಿಯಾಗೇ ಹರಿದಾಡುತ್ತಿದ್ದು, ಕಲರ್ಸ್ ವಾಹಿನಿ ಪಿಆರ್ ಆಗಲಿ ಶಾರುಖ್ ಖಾನ್ ವಕ್ತಾರರಾಗಲಿ ವಿಷಯವನ್ನು ಸ್ಪಷ್ಟಪಡಿಸಿಲ್ಲ. ಸಲ್ಮಾನ್ ಖಾನ್ ರಂತೆ ಶಾರುಖ್ ಖಾನ್ ಕೂಡಾ ಅಪಾರ ಅಭಿಮಾನಿ ವರ್ಗ ಹೊಂದಿದ್ದು, ಈ ಮುಂಚೆ ರಿಯಾಲಿಟಿ ಶೋ ಗಳನ್ನು ನಿರೂಪಣೆ ಮಾಡಿದ ಅನುಭವವಿದೆ.

  ಆದರೆ, ಶಾರುಖ್ ನಡೆಸಿಕೊಟ್ಟ ಕೌನ್ ಬನೇಗಾ ಕರೋಡ್ ಪತಿ ಅಷ್ಟೇನು ಜನಪ್ರಿಯತೆ ಪಡೆದಿರಲಿಲ್ಲ. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಶಾರುಖ್ ನಿರೂಪಣೆ ಇದೆ ಎಂದೇ ಸ್ಟಾರ್ ಗಳು ಬರುವುದು ಸುಳ್ಳಲ್ಲ. ಒಟ್ಟಾರೆ ಈ ಬಾರಿ ಬಿಗ್ ಬಾಸ್ ನ 7ನೇ ಆವೃತ್ತಿ ಇನ್ನಷ್ಟು ಬಿಗ್ ಆಗಿ ಜನರ ಮುಂದೆ ಬರಲಿದೆ. ಯಾರು ಯಾರು ಸ್ಪರ್ಧಿಗಳು ಕೋಟಿ ಗೆಲ್ಲುವ ಆಸೆಯಿಂದ ಮನೆ ಹೊಕ್ಕಲಿದ್ದಾರೆ. ಶಾರುಖ್ ಬಿಗ್ ಬಾಸ್ ಗೆ ಕಾಲಿಟ್ಟರೆ ಕಲರ್ಸ್ ಲಕ್ ಮತ್ತೆ ತಿರುಗುತ್ತಾ? ಕಾದು ನೋಡಿ

  English summary
  The hit TV reality show Bigg Boss is hosted successfully by Salman Khan for the past three seasons. And the show got its highest TRPs due to his presence. But rumours are that he might not be able to host the show this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X