»   » ಸುದೀಪ್ ಎಡಗೈಯಲ್ಲಿ ಅಡಗಿದೆ 'ಬಿಗ್ ಬಾಸ್' ಗೆಲುವಿನ ಅದೃಷ್ಟ!

ಸುದೀಪ್ ಎಡಗೈಯಲ್ಲಿ ಅಡಗಿದೆ 'ಬಿಗ್ ಬಾಸ್' ಗೆಲುವಿನ ಅದೃಷ್ಟ!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ನಿರೂಪಕ ಕಿಚ್ಚ ಸುದೀಪ್ ಅವರ ಎಡಗೈಯಲ್ಲಿ ಗೆಲವಿನ ಅದೃಷ್ಟ ಅಡಗಿದೆ. ಇದಕ್ಕೆ ತಾಜಾ ಉದಾಹರಣೆ 'ಬಿಗ್ ಬಾಸ್ ಕನ್ನಡ-4'.

ಹೌದು, 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನ ಮೊದಲ ಸೀಸನ್ ನಿಂದಲೂ ಗಮನಿಸುತ್ತಾ ಬಂದ್ರೆ, ಕುತೂಹಲಕಾರಿ ವಿಷಯವೊಂದು ಕಣ್ಣಿಗೆ ಬೀಳುತ್ತೆ. ಪ್ರತಿ ಆವೃತ್ತಿಯ ಫಿನಾಲೆಯಲ್ಲೂ ಸುದೀಪ್ ಅವರ ಎಡಗೈ ಹಿಡಿದುಕೊಂಡಿದ್ದವರೇ 'ಬಿಗ್ ಬಾಸ್' ವಿನ್ನರ್ ಆಗಿದ್ದಾರೆ.

ಇದು ಸುದೀಪ್ ಅವರ ಕೈಗುಣವೋ ಅಥವಾ ಸ್ವರ್ಧಿಗಳ ಅದೃಷ್ಟವೋ ಗೊತ್ತಿಲ್ಲ. ಆದ್ರೆ, ಕಾಕತಾಳೀಯ ಎಂಬಂತೆ ಮೂರು ಸೀಸನ್ ನಲ್ಲಿ ಇದು ಪ್ರೂವ್ ಆಗಿದೆ.

'ಬಿಗ್ ಬಾಸ್ ಕನ್ನಡ 4' ಪ್ರಥಮ್

'ಬಿಗ್ ಬಾಸ್ ಕನ್ನಡ 4' ರಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಿದ್ದ ಕೀರ್ತಿ ಹಾಗೂ ಪ್ರಥಮ್ ಅವರನ್ನ ಸುದೀಪ್ ವೇದಿಕೆ ಮೇಲೆ ಕರೆ ತಂದರು. ಸುದೀಪ್ ಅವರ ಬಲ ಭಾಗದಲ್ಲಿ ಕೀರ್ತಿ, ಎಡ ಭಾಗದಲ್ಲಿ ಪ್ರಥಮ್ ನಿಂತುಕೊಂಡರು. ಸುದೀಪ್ ಎಡಗೈ ಮೇಲುತ್ತುವ ಮೂಲಕ ಪ್ರಥಮ್ ವಿನ್ನರ್ ಆದರು.

'ಬಿಗ್ ಬಾಸ್ ಕನ್ನಡ 2' ಅಕುಲ್ ಬಾಲಾಜಿ

'ಬಿಗ್ ಬಾಸ್ ಕನ್ನಡ' ಸೀಸನ್ 3ರಲ್ಲಿ ಸೃಜನ್ ಲೋಕೇಶ್ ಹಾಗೂ ಅಕುಲ್ ಬಾಲಾಜಿ ಫಿನಾಲೆಗೆ ಬಂದಿದ್ದರು. ಸುದೀಪ್ ಅವರ ಬಲ ಭಾಗದಲ್ಲಿ ಸೃಜನ್ ಲೋಕೇಶ್ ಎಡ ಭಾಗದಲ್ಲಿ ಅಕುಲ್ ಬಾಲಾಜಿ ನಿಂತಕೊಂಡರು. ಆಗಲೂ ಎಡಗೈ ಮೇಲಿತ್ತಿದ ಸುದೀಪ್, ಅಕುಲ್ ಬಾಲಾಜಿ ಜಯಶಾಲಿ ಎಂದು ಘೋಷಿಸಿದರು.

'ಬಿಗ್ ಬಾಸ್ ಕನ್ನಡ 3' ಶೃತಿ

ಬಿಗ್ ಬಾಸ್ ಕನ್ನಡ 3ನೇ ಆವೃತ್ತಿಯಲ್ಲೂ ಇದು ಸಾಬೀತಾಗಿದೆ. ಶೃತಿ ಮತ್ತು ಚಂದನ್ ಫಿನಾಲೆ ತಲುಪಿದ್ದರು. ಅಲ್ಲಿಯೂ ಸುದೀಪ್ ಅವರ ಬಲ ಭಾಗದಲ್ಲಿ ಚಂದನ್ ಹಾಗೂ ಎಡ ಭಾಗದಲ್ಲಿ ಶೃತಿ ನಿಂತಿದ್ದರು. ಕಾಕತಾಳೀಯ ಅಂದ್ರೆ, ಮೂರನೇ ಸೀಸನ್ ನಲ್ಲೂ ಸುದೀಪ್ ಅವರ ಎಡಗೈ ಮೇಲುತ್ತುವ ಮೂಲಕ ಶೃತಿ ವಿನ್ನರ್ ಆದರು.

'ಬಿಗ್ ಬಾಸ್ ಕನ್ನಡ 1' ವಿಜಯರಾಘವೇಂದ್ರ

'ಬಿಗ್ ಬಾಸ್ ಕನ್ನಡ 1, ಕಾರ್ಯಕ್ರಮದಲ್ಲಿ ನಟ ವಿಜಯರಾಘವೇಂದ್ರ ಹಾಗೂ ಅರುಣ್ ಸಾಗರ್ ಫಿನಾಲೆ ತಲುಪಿದ್ದರು. ಸುದೀಪ್ ಅವರ ಬಲಭಾಗದಲ್ಲಿ ವಿಜಯರಾಘವೇಂದ್ರ, ಎಡ ಭಾಗದಲ್ಲಿ ಅರುಣ್ ಸಾಗರ್ ನಿಂತಿದ್ದರು. ಆದ್ರೆ, ಸೀಸನ್ ಒಂದರಲ್ಲಿ ಕಿಚ್ಚ ಸುದೀಪ್ ಬಲಗೈಯನ್ನ ಮೇಲುತ್ತುವುದರ ಮೂಲಕ ವಿಜಯರಾಘವೇಂದ್ರ ವಿನ್ನರ್ ಎಂದು ಘೋಷಿಸಿದ್ದರು.

ಕಿಚ್ಚನ ಎಡಗೈಯಲ್ಲಿದೆ ಅದೃಷ್ಟ!

ಹೀಗೆ, 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ 3 ಸೀಸನ್ ನಲ್ಲೂ ಸುದೀಪ್ ಅವರ ಎಡ ಭಾಗದಲ್ಲಿದ್ದವರೇ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಮೊದಲ ಆವೃತ್ತಿ ಯಲ್ಲಿ ವಿಜಯರಾಘವೇಂದ್ರ ಅವರು ಬಿಟ್ಟರೇ, ಅಕುಲ್ ಬಾಲಾಜಿ, ಶೃತಿ, ಪ್ರಥಮ್ ಮೂವರು ಎಡ ಭಾಗದಲ್ಲಿದ್ದವರೇ. ಇದು ಕಾಕತಾಳೀಯವೋ ಅಥವಾ ಅದೃಷ್ಟವೋ ಗೊತ್ತಿಲ್ಲ.

English summary
Same Similarities in All Sesson BiggBoss Kannada Results

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada