»   »  ಕಿರುತೆರೆಯಲ್ಲಿ ಸ್ಟಾರ್ ಹೀರೋಗಳ ಭರ್ಜರಿ ಇನ್ನಿಂಗ್ಸ್

ಕಿರುತೆರೆಯಲ್ಲಿ ಸ್ಟಾರ್ ಹೀರೋಗಳ ಭರ್ಜರಿ ಇನ್ನಿಂಗ್ಸ್

By: ಜೀವನರಸಿಕ
Subscribe to Filmibeat Kannada

ಸಿನಿಮಾಗಳಿಗಿಂತ ಸೀರಿಯಲ್ ಗಳಲ್ಲಿ ಹೆಚ್ಚು ಕಣ್ಣೀರು ಹರಿಸ್ತಾರೆ ಅಂತ ಗೊತ್ತಿತ್ತು. ಈಗ ಗೊತ್ತಾಗಿದೆ ಸಿನಿಮಾಗಳಿಗಿಂತ ಹೆಚ್ಚು ಹಣವನ್ನ ಸೀರಿಯಲ್ ಗಳೇ ಹರಿಸ್ತಿವೆ ಅನ್ನೋದು. ಯಾಕಂದ್ರೆ ಸ್ಟಾರ್ ಗಳು ಬಿಗ್ಸ್ಕ್ರೀನ್ ಗಿಂತ ಸ್ಮಾಲ್ ಸ್ಕ್ರೀನ್ ಕಡೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ.

ಚಿತ್ರರಂಗದಲ್ಲಿ ಹಿಂದೆ ಒಂದು ಮಾತಿತ್ತು. ಥಿಯೇಟರ್ ನಲ್ಲಿ ಕಣ್ಣೀರು ಸುರಿದಷ್ಟು ಬಾಕ್ಸಾಫೀಸಲ್ಲಿ ಹಣ ಸುರಿಯುತ್ತೆ ಅನ್ನೋದು. ಈಗ ಆ ಮಾತು ಸತ್ಯವಾಗ್ತಿದೆ. ಥಿಯೇಟರ್ ಗಿಂತ ಮನೆಯಲ್ಲಿ ಟಿವಿಗಳಲ್ಲಿ ಕಣ್ಣೀರು ಸುರಿಸೋ ಸೀರಿಯಲ್ ಪ್ರೇಮಿಗಳಿಂದಾಗಿ, ರಿಯಾಲಿಟಿ ಶೋಗಳಿಂದಾಗಿ ಪ್ರೇಕ್ಷಕರ ಜೊತೆಗೆ ಸ್ಟಾರ್ ಗಳೂ ಕೂಡ ಕಿರುತೆರೆ ಕಡೆ ವಾಲಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಅವಕಾಶ ಇಲ್ಲದ ಸ್ಟಾರ್ ಗಳು, ಸಿನಿಮಾದ ಜೊತೆಗೆ ಬೇರೆ ಏನಾದ್ರೂ ಮಾಡೋ ಯೋಚನೆ ಇರೋ ನಟ ನಟಿಯರು ಈಗ ಕಿರುತೆರೆಯಲ್ಲಿ ಪಬ್ಲಿಸಿಟಿ ಜೊತೆಗೆ ಕಾಸು ಗಿಟ್ಟಿಸ್ತಿದ್ದಾರೆ. ಥಿಯೇಟರ್ ಗೆ ಹೋಗಿ ನೋಡಬೇಕಾದ ಸ್ಟಾರ್ ಗಳು ನಮ್ಮ ಟಿವಿಯಲ್ಲೇ ಬರ್ತಿರೋದಕ್ಕೆ ಪ್ರೇಕ್ಷಕರು ಶಹಬ್ಬಾಸ್ ಅಂತಿದ್ದಾರೆ ಅಂತಹಾ ಸ್ಟಾರ್ ಗಳ ಒಂದು ಲಿಸ್ಟ್ ಇಲ್ಲಿದೆ ನೋಡಿ.

ಯೋಗಿ ಲೈಫ್ ಸೂಪರ್ ಗುರು

ಸದ್ಯದ ಹಾಟ್ ನ್ಯೂಸ್ ಅಂದ್ರೆ ಲೂಸ್ ಮಾದ ಯೋಗಿ ಲೈಫ್ ಸೂಪರ್ ಗುರು ಕಾರ್ಯಕ್ರಮ ನಡೆಸಿಕೊಡೋ ಮೂಲಕ ಕಿರುತೆರೆಗೆ ಲಗ್ಗೆ ಇಟ್ಟಿದ್ದಾರೆ. ಕಾರ್ಯಕ್ರಮ ಹೋಸ್ಟ್ ಮಾಡೋ ಮತ್ತೊಬ್ಬ ನಟನಾಗಿ ಎಂಟ್ರಿಕೊಡ್ತಿದ್ದಾರೆ.

ಶ್ರವಂತ್ ಸೀರಿಯಲ್ ಗೆ ಪರಾರಿ

'ಪರಾರಿ' ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಶ್ರವಂತ್ ಈಗ ಸುವರ್ಣ ವಾಹಿನಿಯ 'ಮಧುಬಾಲಾ' ಸೀರಿಯಲ್ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ಹೊರಟಿದ್ದಾರೆ.

ವಿಶ್ವ-ಸ್ಫೂರ್ತಿ ಜೋಡಿ ಸೀರಿಯಲ್

ಒಂದೇ ಸಿನಿಮಾ ಮೂಲಕ ಎಂಟ್ರಿಯಾದ ವಿಶ್ವ ಮತ್ತು ಸ್ಫೂರ್ತಿ ಇಬ್ಬರೂ ನಟಿಯರು ಈಗ ಸೀರಿಯಲ್ 'ಅತಿಮಧುರ ಅನುರಾಗ'ದಿಂದ ಮದುವೆಗೂ ತಯಾರಾಗಿದ್ದಾರೆ.

ಪುನೀತ್ ಕೋಟ್ಯಾಧಿಪತಿ

ಪವರ್ ಸ್ಟಾರ್ ಪುನೀತ್ ಹಿಂದಿಯ ಕೌನ್ ಬನೇಗಾ ಕರೋಡ್ ಪತಿಯನ್ನ ಕನ್ನಡದ ಕೋಟ್ಯಾಧಿಪತಿಯಾಗಿ ನಡೆಸಿಕೊಟ್ಟು ಯಶಸ್ವಿಯಾಗಿದ್ದಾರೆ. ಈ ಮೂಲಕ ಪುನೀತ್ ಕಿರುತೆರೆಯಲ್ಲೂ ಸ್ಟಾರ್ ಆಗಿ ಮನೆಮನೆಗೂ ತಲುಪಿದ್ದಾರೆ.

ಎಫ್ ಎಂನಲ್ಲಿ ವಿಜಯ್ ರಾಘವೇಂದ್ರ

ಇತ್ತೀಚೆಗೆ ಎಫ್ ಎಂನಲ್ಲಿ ವಿಜಯ್ರಾಘವೇಂದ್ರ ಆರ್ ಜೆಯಾಗಿ ಕಾರ್ಯಕ್ರಮ ನಡೆಸಿಕೊಡ್ತಿರೋದಕ್ಕೆ ಎಫ್ ಎಂ ಕೇಳುಗರು ಫಿದಾ ಆಗಿದ್ದಾರೆ. ಮಧುರ ಮಾತುಗಳಲ್ಲಿ ಮನಗೆಲ್ಲೋ ಚಿನ್ನಾರಿಮುತ್ತ ಇಷ್ಟವಾಗ್ತಿದ್ದಾರೆ.

ಸುದೀಪ್ ಬಿಗ್ ಬಾಸ್

ರಿಯಾಲಿಟಿ ಶೋನ ಬಿಗ್ ಬಾಸ್ ಕಿಚ್ಚ ಸುದೀಪ್ ಕಾರ್ಯಕ್ರಮದ ಬಗ್ಗೆ ಹೇಳಬೇಕಾಗೀನೇ ಇಲ್ಲ. ಆದ್ರೂ ಮೊದಲ ಸೀಸನ್ ಯಶಸ್ವಿಯಾದ್ರೂ ಎರಡನೇ ಸೀಸನ್ ಗೆ ಅಷ್ಟಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ.

English summary
Here is the list of Sandalwood heroes who also successed on Kannada small screen. Like Sudeep and Puneeth Rajkumar few more stars are steped into small screen. Loose Mada Yogesh, Vijay Raghavendra starts his new innings on Small screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada