»   » ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕಿರುತೆರೆ ಎಂಟ್ರಿ ಪಕ್ಕಾ

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕಿರುತೆರೆ ಎಂಟ್ರಿ ಪಕ್ಕಾ

Posted By: ಜೀವನರಸಿಕ
Subscribe to Filmibeat Kannada

ದಶಕಗಳ ಕಾಲ ಕನ್ನಡ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿ ಮೆರೆದಾಡಿದ ಕನ್ನಡದ ಕನಸಿನ ಹುಡುಗಿ ರಮ್ಯಾ ಈಗ ಸ್ಮಾಲ್ ಸ್ಕ್ರೀನ್ಗೆ ಎಂಟ್ರಿಕೊಡೋಕೆ ರೆಡಿಯಾಗಿದ್ದಾರೆ. ರಮ್ಯಾ ಸದ್ಯ ಡಾನ್ಸಿಂಗ್ಸ್ಟಾರ್ನಲ್ಲಿ ಜ್ಯೂರಿ ಆಗೋಕೆ ಒಪ್ಪಂದ ಮಾಡಿಕೊಂಡಿದ್ದಾರೆ ಅಂತಿದೆ ರಮ್ಯ ಆಪ್ತ ಮೂಲಗಳು.

ಹೌದು ಇದು ರವಿಮಾಮನ ಪ್ರಭಾವವೋ ಏನೋ ಗೊತ್ತಿಲ್ಲ. ಆದ್ರೆ ರಮ್ಯಾ ಮಾತ್ರ ಕಲರ್ಸ್ ಕನ್ನಡದ ನೋಡೋ ಕಿರುತೆರೆ ಪ್ರೇಮಿಗಳ ಕನಸಲ್ಲೂ ಕಾಡೋ ದಿನಗಳು ಸದ್ಯದಲ್ಲೇ ಬರಲಿವೆ ಅನ್ನೋ ಮಾತುಗಳು ಕೇಳಿ ಬರ್ತಿವೆ. [ಅಭಿಮಾನಿಗಳಿಗೆ ಮತ್ತೆ ಶಾಕಿಂಗ್ ನ್ಯೂಸ್ ಕೊಟ್ಟ ರಮ್ಯಾ]

Sandalwood queen Ramya set to enter small screen

ಕ್ರೇಜಿಸ್ಟಾರ್ ಕಿರುತೆರೆಗೆ ಎಂಟ್ರಿಕೊಟ್ಟ ನಂತ್ರ ಅಭಿಮಾನಿಗಳನ್ನ ದುಪ್ಪಟ್ಟಾಗಿಸಿಕೊಂಡಿದ್ದಾರೆ. ರವಿಮಾಮ ಎಪಿಸೋಡ್ ಒಂದಕ್ಕೆ ಗಳಿಸ್ತಿರೋ ಹಣ ಕೂಡ ದೊಡ್ಡದಿದೆ. ಹಣಕ್ಕಿಂತ ಹೆಚ್ಚಾಗಿ ಈ ಮೋಹಕತಾರೆಗೆ ಈಗ ರಾಜಕೀಯದಲ್ಲಿ ಮೇಲೆಬರೋ ಅವಶ್ಯಕತೆ ಇದೆ. ಅದಕ್ಕಾಗಿ ಮತ್ತೊಮ್ಮೆ ತೆರೆಮೇಲೆ ಬರಲೇಬೇಕು.

ತೆರೆಮೇಲೆ ಕಾಣಿಸಿಕೊಳ್ಳೋಕೆ ಸಿನಿಮಾಗಳು ಇಲ್ಲ. ಇರೋ ಸಿನಿಮಾಗಳು ಬರ್ಬೇಕು ಅಂದ್ರೆ, ಮತ್ತೆ ತೆರೆಮೇಲೆ ಇಲ್ಲದಿದ್ರೂ ರಾಜಕೀಯದಲ್ಲಿ ರಮ್ಯಾ ಮಿಂಚಬೇಕು. ಈ ಕಾರಣಕ್ಕಾಗಿ ಕ್ರೇಜಿಸ್ಟಾರ್ ಸಲಹೆಯನ್ನ ಪಾಲಿಸ್ತಿರೋ ರಮ್ಯಾ ಕಲರ್ಸ್ ಕನ್ನಡಗೆ ಎಂಟ್ರಿಕೊಡಲಿದ್ದಾರೆ ಅನ್ನೋ ಸುದ್ದಿ ಸಿಕ್ಕಿದೆ..[ನಿನ್ನೆ ಆಟೋ ಏರಿದ್ದ ರಮ್ಯಾ ಇಂದು ಫಾರ್ಚ್ಯುನರ್ ನಲ್ಲಿ ಬಂದ್ರು!]

ಕಲರ್ಸ್ ಕನ್ನಡ ಡಾನ್ಸಿಂಗ್ಸ್ಟಾರ್, ಮಜಾಟಾಕೀಸ್ ಕಾರ್ಯಕ್ರಮಗಳ ನಂತ್ರ ಮನರಂಜನಾ ವಾಹಿನಿಗಳ ಸ್ಪರ್ಧೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ವಿರಾಜಮಾನವಾಗಿದ್ದು ಬೇರೆ ವಾಹಿನಿಗಳು ಹತ್ತಿರಕ್ಕೂ ಸುಳಿಯಲಾಗದಷ್ಟು ಅಂತರ ಕಾಯ್ದುಕೊಂಡಿದೆ. ಆದೇ ಅಂತರವನ್ನ ಉಳಿಸಿಕೊಳ್ಳೋ ಮೂಲಕ ನಂಬರ್ ಒನ್ ಪಟ್ಟದಲ್ಲಿ ಉಳಿಯೋ ಯೋಜನೆಯಲ್ಲಿರೋ ಕಲರ್ಸ್ ವಾಹಿನಿಯ ಯಾವ ಕಾರ್ಯಕ್ರಮದಲ್ಲಿ ರಮ್ಯಾ ಜಡ್ಜ್ ಆಗ್ತಾರೆ ಅನ್ನೋದು ಸದ್ಯದ ಕ್ಯೂರಿಯಾಸಿಟಿ.

English summary
Sandalwood queen Ramya is all set to enter small screen as judge for reality show in Kannada colors channel very shortly. It is learnt that she is following the foot steps of crazy star Ravichandran. Which reality show will Ramya be judging? Start guessing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada