For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯತ್ತ ಮುಖ ಮಾಡಿದ ಸ್ಯಾಂಡಲ್ ವುಡ್ ನ 'ನಕ್ಷತ್ರ'ಗಳು

  By Pavithra
  |
  ಸ್ಯಾಂಡಲ್ ವುಡ್ ತಾರೆಗಳು ಈಗ ಕಿರುತೆರೆಯಲ್ಲಿ ಫುಲ್ ಬ್ಯುಸಿ | Filmibeat Kannada

  ಇಷ್ಟು ದಿನ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದ ಚಂದನವನದ ನಕ್ಷತ್ರಗಳು ಇದೀಗ ವಾರಾಂತ್ಯದಲ್ಲಿ ರಾತ್ರಿ ಹೊತ್ತಿನಲ್ಲಿ ಕಿರುತೆರೆಯಲ್ಲಿ ಮಾತ್ರ ಮಿಂಚಲಿವೆ. ಬಿಗ್ ಸ್ಕ್ರೀನ್ ಮೇಲೆ ಪ್ರೇಕ್ಷಕರನ್ನ ರಂಜಿಸಿದ ಅನೇಕರು ಈಗ ಸ್ಮಾಲ್ ಸ್ಕ್ರೀನ್ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

  ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲಾ ಸ್ಟಾರ್ ಕಲಾವಿದರು ರಿಯಾಲಿಟಿ ಶೋಗಳ ಮೂಲಕ ಮನೆ ಮನೆಗೆ ತಲುಪಿದ್ದಾರೆ. ಮುಂದೆ ಓದಿರಿ...

  ವಾರಾಂತ್ಯದಲ್ಲಿ ಕಿಚ್ಚನ ಪಂಚಾಯತಿ

  ವಾರಾಂತ್ಯದಲ್ಲಿ ಕಿಚ್ಚನ ಪಂಚಾಯತಿ

  ವಾರಾಂತ್ಯ ಆಯ್ತು ಅಂದ್ರೆ ಸಾಕು ಸುದೀಪ್ ರನ್ನ ನೋಡಲು ಸಿನಿಮಾ ಥಿಯೇಟರ್ ಗೆ ಹೋಗುವ ಅವಶ್ಯಕತೆ ಇಲ್ಲ. ಯಾಕಂದ್ರೆ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಸುದೀಪ್ ಪ್ರತಿ ಮನೆಯ ಟಿವಿಯಲ್ಲಿ ಬರ್ತಾರೆ. ಸುದೀಪ್ ಇನ್ನೂ ಎಂಟು ವಾರಗಳ ಕಾಲ ಹೀಗೆ ನಿಮ್ಮನ್ನ ರಂಜಿಸಲಿದ್ದಾರೆ.

  'ಫ್ಯಾಮಿಲಿ ಪವರ್' ಬಗ್ಗೆ ಖುಷಿ ಜೊತೆ ಬೇಸರ ವ್ಯಕ್ತಪಡಿಸಿದ ವೀಕ್ಷಕರು

  ಫ್ಯಾಮಿಲಿ ಪುನೀತ್ ಮಾತು-ಕತೆ

  ಫ್ಯಾಮಿಲಿ ಪುನೀತ್ ಮಾತು-ಕತೆ

  ಸುದೀಪ್ ರಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ತುಂಬಾ ದಿನಗಳ ನಂತರ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಶುರುವಾಗಿರುವ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ವರ್ಷಕ್ಕೆ ಒಂದು ಬಾರಿ ಮಾತ್ರ ನೋಡುತ್ತಿದ್ದ ಪವರ್ ಸ್ಟಾರ್ ರನ್ನ ಪ್ರತಿ ಶನಿವಾರ ಹಾಗೂ ಭಾನುವಾರ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.

  'ಬಿಗ್ ಬಾಸ್ ಕನ್ನಡ' ನೋಡ್ತೀರಾ? ಇಲ್ವಾ? ವೀಕ್ಷಕರ ಅಭಿಮತ ಏನಿದೆ?

  ಡ್ರಾಮಾ ಟೀಂ ನಲ್ಲಿ ಲಕ್ಷ್ಮೀ -ಮುಖ್ಯಮಂತ್ರಿ ಚಂದ್ರು

  ಡ್ರಾಮಾ ಟೀಂ ನಲ್ಲಿ ಲಕ್ಷ್ಮೀ -ಮುಖ್ಯಮಂತ್ರಿ ಚಂದ್ರು

  ಜೀ ಕನ್ನಡದಲ್ಲಿ ಬರುವ 'ಡ್ರಾಮಾ ಜ್ಯೂನಿಯರ್ಸ್' ನಲ್ಲಿ ಬಿಗ್ ಸ್ಟಾರ್ ಗಳ ಜೊತೆಯಲ್ಲಿ ಹಿರಿಯ ನಟರು ಕೂಡ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಭಾಗಿಯಾಗಿದ್ದಾರೆ. ಜೀ ಕನ್ನಡದಲ್ಲೇ ನಟ ವಿಜಯ ರಾಘವೇಂದ್ರ ಎರಡು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿದ್ದಾರೆ.

  ಜೂಲಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಕಡೆಯಿಂದ ಸರ್ಪ್ರೈಸ್

  ಸಂಗೀತ ನಿರ್ದೇಶಕರನ್ನೂ ಬಿಡದ ಕಿರುತೆರೆ

  ಸಂಗೀತ ನಿರ್ದೇಶಕರನ್ನೂ ಬಿಡದ ಕಿರುತೆರೆ

  ತೆರೆ ಹಿಂದೆ ಕೆಲಸ ಮಾಡುತ್ತಿದ್ದ ಸಂಗೀತ ನಿರ್ದೇಶಕರು ಕೂಡ ಸ್ಮಾಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಹಾಗೂ ರಘು ದೀಕ್ಷಿತ್ ಕೂಡ ಇನ್ನು ಮುಂದೆ ಜೀ ವಾಹಿನಿಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

  ಬೆಸ್ಟ್ ಸಿಂಗರ್ಸ್ ರನ್ನ ಸೆಲೆಕ್ಟ್ ಮಾಡಲಿರುವ ಕ್ರೇಜಿಸ್ಟಾರ್

  ಬೆಸ್ಟ್ ಸಿಂಗರ್ಸ್ ರನ್ನ ಸೆಲೆಕ್ಟ್ ಮಾಡಲಿರುವ ಕ್ರೇಜಿಸ್ಟಾರ್

  ಉದಯ ಟಿವಿಯಲ್ಲಿ ಶುರುವಾಗಿರುವ ಗಾಯನದ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೇ ರವಿಮಾಮ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ರು.

  'ಫ್ಯಾಮಿಲಿ ಪವರ್' ಶೋ ಕಾನ್ಸೆಪ್ಟ್ ಕೇಳಿ ಪುನೀತ್ ಪತ್ನಿ ಏನು ಹೇಳಿದ್ದರು?

  ಕಾಮಿಡಿ ಮಾಡ್ತಾರೆ ಬುಲ್-ಬುಲ್

  ಕಾಮಿಡಿ ಮಾಡ್ತಾರೆ ಬುಲ್-ಬುಲ್

  ಉದಯ ಟಿವಿಯ 'ಕಿಕ್' ರಿಯಾಲಿಟಿ ಶೋ ಮೂಲಕ ಕಿರುತೆರೆಯ ಪ್ರಯಾಣ ಶುರು ಮಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುವ ಕಾಮಿಡಿ ಟಾಕೀಸ್ ಶೋನಲ್ಲಿ ಸೃಜನ್ ಹಾಗೂ ರಚಿತಾ ರಾಮ್ ಎಲ್ಲರನ್ನ ನಕ್ಕು ನಗಿಸುತ್ತಿದ್ದಾರೆ.

  ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?

  ಸ್ಟಾರ್ ಸುವರ್ಣದಲ್ಲಿ ರಾಗಿಣಿ

  ಸ್ಟಾರ್ ಸುವರ್ಣದಲ್ಲಿ ರಾಗಿಣಿ

  ಸ್ಟಾರ್ ಸುವರ್ಣದಲ್ಲಿ ಶುರುವಾಗಲಿರುವ ಹೊಸ ಕಾಮಿಡಿ ಶೋನಲ್ಲಿ ನಟಿ ರಾಗಿಣಿ ಭಾಗಿಯಾಗಲಿದ್ದಾರೆ. ಈಗಾಗಲೇ ಶೋ ತಯಾರಿ ಆಗಿದ್ದು ಫೋಟೋ ಶೂಟ್ ಕೂಡ ನಡೆದಿದೆ. ಇನ್ನೂ ಕೆಲವೇ ದಿನಗಳಲ್ಲಿ ಕಿರುತೆರೆ ಮೂಲಕ ತುಪ್ಪದ ಹುಡುಗಿ ಎಲ್ಲರ ಮನೆಗೆ ಬರಲಿದ್ದಾರೆ.

  English summary
  Sandalwood stars like Sudeep, Puneeth Rajkumar, V Ravichandran, Rachita Ram are busy in reality shows. ಕನ್ನಡದ ಬಿಗ್ ಸ್ಕ್ರೀನ್ ಕಲಾವಿದರೆಲ್ಲರೂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X