»   » ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್

ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್

Written By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ 'ಒಳ್ಳೆ ಹುಡುಗ ಪ್ರಥಮ್' ಹಾಗೂ 'ಸಂಜನಾ' ದಾಖಲೆ ಬರೆದಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗ್ತಾರೆ ಎಂಬ ಕುತೂಹಲದ ಜೊತೆಗೆ ಯಾರು ನಾಮಿನೇಟ್ ಆಗುತ್ತಾರೆ ಎಂಬ ನಿರೀಕ್ಷೆ ಕೂಡ ಹೆಚ್ಚಾಗಿತ್ತು. ಈಗ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

ಕಳೆದ ವಾರ 7 ಜನ ನಾಮಿನೇಷನ್ ಆಗಿದ್ದವರ ಪೈಕಿ ಗಾಯಕಿ ಚೈತ್ರಾ ಎಲಿಮಿನೇಟ್ ಆಗಿದ್ರು. ಈ ವಾರ 5 ಜನ ನಾಮ ನಿರ್ದೇಶನವಾಗಿದ್ದಾರೆ. ಹೀಗಾಗಿ ಈ ವಾರ ಬಿಗ್ ಮನೆಯಿಂದ ಯಾರು ಹೊರಗೆ ಹೋಗಬಹುದು ಎಂಬ ಚರ್ಚೆ ಈಗಲೇ ಶುರುವಾಗಿದೆ.['ಕಿರಿಕ್ ತಂಗಳಿಟ್ಟು' ಪ್ರಥಮ್ ಗೆ ದೊಡ್ಡ ಗಣೇಶ್ ಕೊಟ್ಟ ಭಯಂಕರ ಶಿಕ್ಷೆ]

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಥಮ್, ಸಂಜನಾ ಅವರೊಂದಿಗೆ ಶೀತಲ್, ರೇಖಾ ಅವರು ಸದಸ್ಯರಿಂದ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಾಳವಿಕಾ ಶಾಲಿನಿ ಅವರನ್ನ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಈ ವಾರ ಒಟ್ಟು 5 ಮಂದಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಸಂಜನಾ ಹಾಗೂ ಪ್ರಥಮ್ ದಾಖಲೆ ಬರೆದಿರೋದು ವಿಶೇಷವೆನಿಸಿದೆ. ಆ ದಾಖಲೆ ಏನು ಅಂತ ಮುಂದೆ ಓದಿ....

ದಾಖಲೆ ಮಾಡಿದ ಸಂಜನಾ-ಪ್ರಥಮ್

ಬಿಗ್ ಬಾಸ್ ಮನೆಗೆ ಬಂದಾಗನಿಂದ ಸತತವಾಗಿ ಮೂರು ವಾರವೂ ನಾಮಿನೇಟ್ ಆಗಿರುವ ವ್ಯಕ್ತಿಗಳು ಅಂದ್ರೆ ಸಂಜನಾ ಹಾಗೂ ಪ್ರಥಮ್. ಮೊದಲ ವಾರದಿಂದ ನಿರಂತರವಾಗಿ ಇವರಿಬ್ಬರು ಹೆಸರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮಾನ್ಯವಾಗಿದೆ. ಈಗ ನಾಲ್ಕನೆ ವಾರವೂ ಇವರಿಬ್ಬರು ನಾಮಿನೇಟ್ ಆಗಿದ್ದು, ಇದು ಈ ಬಾರಿಯ ದಾಖಲೆಯಾಗಿದೆ.

A-1 ಪ್ರಥಮ್

'ಬಿಗ್ ಬಾಸ್ ಕನ್ನಡ ಸೀಸನ್-4' ಕಾರ್ಯಕ್ರಮದ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಇಲ್ಲಿಯವರೆಗೂ, ಪ್ರಥಮ್ ಸತತವಾಗಿ ನಾಮಿನೇಟ್ ಆಗಿದ್ದಾರೆ. ಇದು ಈ ಸೀಸನ್ ನ ದಾಖಲೆ. ಯಾಕಂದ್ರೆ ಸತತ ನಾಲ್ಕು ಬಾರಿ ಯಾರು ಆಗಿಲ್ಲ.[BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ]

ಪ್ರಥಮ್ ಜೊತೆಯಲ್ಲಿ ಸಂಜನಾ

ಈ ಸೀಸನ್ ನ ಬಿಗ್ ಬಾಸ್ ಕಾರ್ಯಕ್ರಮಲ್ಲಿ ಹುಡುಗರ ಪರವಾಗಿ ಪ್ರಥಮ್ ಸತತವಾಗಿ ನಾಮಿನೇಟ್ ಆಗಿದ್ರೆ, ಹುಡುಗಿಯರಲ್ಲೂ ಸಂಜನಾ ಸತತ ನಾಲ್ಕು ಬಾರಿ ನಾಮಿನೇಟ್ ಆಗುವ ಮೂಲಕ ದಾಖಲೆ ಬರೆದಿದ್ದಾರೆ.

ಜನರ ಮತ ಗೆಲ್ಲಿಸುತ್ತಿದೆ

ಪ್ರತಿ ವಾರ ಸಂಜನಾ ಹಾಗೂ ಪ್ರಥಮ್ ನಾಮಿನೇಟ್ ಆಗುತ್ತಿದ್ದಾರೆ. ಆದ್ರೆ, ಜನರ ಮತ ಇವರನ್ನ ಸೇಫ್ ಮಾಡುತ್ತಿದೆ. ಹೀಗಾಗಿ ಇವರಿಬ್ಬರು ನಾಲ್ಕನೆ ವಾರವೂ ಮುಂದುವರೆದಿದ್ದಾರೆ.

ನಾಮಿನೇಷನ್ ಬಗ್ಗೆ ಸಂಜನಾ ಹೇಳಿದ್ದೇನು?

''ನನಗೆ ಬಿಗ್ ಬಾಸ್ ಮನೆಯಲ್ಲಿ ಅಮ್ಮ-ಅಪ್ಪ ಅಂತ ಹೇಳಿಕೊಂಡು ಬಕೆಟ್ ಹಿಡಿಯೋಕೆ ಬರಲ್ಲ. ನಾನು ಇರೋದೇ ಹೀಗೆ. ಇವರು ನಾಮಿನೇಟ್ ಮಾಡಿದರೂ ಜನ ಸೇಫ್ ಮಾಡ್ತಿದ್ದಾರೆ ಅಲ್ವಾ. ಇದರಿಂದ ಇವರ ಮುಖಕ್ಕೆ ಹೊಡೆದಾಗೆ ಆಗುತ್ತಿದೆ. ಇವರನ್ನ ಇಂಪ್ರೆಸ್ ಮಾಡುವುದಕ್ಕೆ ಅಥವಾ ಮೆಚ್ಚುಗೆ ಗಳಿಸುವುದಕ್ಕೆ ನಾನು ಬಂದಿಲ್ಲ. ನಾನು ಇದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ'' ಅಂತ ಪ್ರಥಮ್ ಬಳಿ ಸಂಜನಾ ಹೇಳಿಕೊಂಡರು.

ಪ್ರಥಮ್ ಹೇಳಿದ್ದೇನು?

''A-1 ನಾನೇ. ನಾಲ್ಕು ವಾರದಿಂದ ಸತತವಾಗಿ ನಾನು ನಾಮಿನೇಟ್ ಆಗುತ್ತಿದ್ದೇನೆ. ನನ್ನ ಬಿಟ್ಟು ಇನ್ನೊಬ್ಬರು ಇಲ್ಲ. ಒಂದು ಕಡೆ ನಗು, ಮತ್ತೊಂದು ಕಡೆ ಬೇಜಾರು. ಎಷ್ಟು ಮಾಡಿದ್ರೂ ಇವರು ನನ್ನ ಒಪ್ಪಿಕೊಳ್ಳುತ್ತಿಲ್ಲ ಅಲ್ವಾ. ಬಹುಶಃ ನಾನು ಈ ಮನೆಯಲ್ಲಿ ಇರುವಷ್ಟು ದಿನ ನಾಮಿನೇಷನ್ ಪಕ್ಕಾ''-ಅಂತ ಸಂಜನಾ ಬಳಿ ಪ್ರಥಮ್ ಅಭಿಪ್ರಾಯ ವ್ಯಕ್ತಪಡಿಸಿದರು

ಸೇಫ್ ಆಗ್ತಾರ? ಎಲಿಮಿನೇಟ್ ಆಗ್ತಾರ?

ಪ್ರತಿಯೊಂದು ವಾರವೂ ನಾಮಿನೇಟ್ ಆಗುತ್ತಿದ್ದರೂ, ಜನರು ಇವರನ್ನ ಸೇಫ್ ಮಾಡುತ್ತಿದ್ದಾರೆ. ಹೀಗಾಗಿ, ಇವರಿಬ್ಬರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಾರೆ. ಬಟ್, ಬಿಗ್ ಬಾಸ್ತೀರ್ಮಾನ ಹೇಗಿರುತ್ತೆ ಎಂದು ಗೊತ್ತಿಲ್ಲ. ಹೀಗಾಗಿ ಸಂಜನಾ ಹಾಗೂ ಪ್ರಥಮ್ ಈ ವಾರ ಸೇಫ್ ಆಗ್ತಾರ? ಎಲಿಮಿನೇಟ್ ಆಗ್ತಾರ? ಅಂತ ಕಿಚ್ಚನ ಜೊತೆ ವಾರದ ಕಥೆಯಲ್ಲಿ ನೋಡಬೇಕಿದೆ.

English summary
Director Pratham and Sanjan has created a record in the fourth season of the 'Big Boss' by being nominated for the fourth consecutive week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada