For Quick Alerts
  ALLOW NOTIFICATIONS  
  For Daily Alerts

  ನಟಿ ಸಂಜನಾ ಬುರ್ಲಿ ಈಗ 'ಲವ್ ರಿಸೆಟ್' ಮೂಡ್‌ನಲ್ಲಿ..

  By ಪ್ರಿಯಾ ದೊರೆ
  |

  ಎಂಜಿನಿಯರಿಂಗ್ ಓದಿ, ನಟಿಯಾಗಿರುವ ಸಂಜನಾ ಬುರ್ಲಿ ಈಗ ಬಣ್ಣದ ಲೋಕದಲ್ಲಿ ನಿಧಾನವಾಗಿ ಬ್ಯುಸಿಯಾಗುತ್ತಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ಸಂಜನಾ ನಿಜ ಜೀವನದಲ್ಲಿ ನಟಿಯಾಗುವ ಕನಸಿನ ಹಾದಿಯಲ್ಲಿದ್ದಾರೆ.

  ನಟಿ ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದು, ಕಿರುತೆರೆಗೂ ಎಂಟ್ರಿಕೊಟ್ಟು ಸುಮಾರು 5 ವರ್ಷವೇ ಕಳೆದಿದೆ. ಕೆಲ ಸಿನಿಮಾಗಳಲ್ಲೂ ಸಂಜನಾ ಅವರು ನಟಿಸಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದಾರೆ.

  ಅರ್ಧಾಂಗಿ: ಆಫೀಸಿಗೆ ಹೊರಟು ನಿಂತ ಅದಿತಿಗೆ ಕಂಡಿದ್ದು ಸೌಭಾಗ್ಯಳ ಕೋಟಿ ಕೋಟಿ ಆಸ್ತಿ!ಅರ್ಧಾಂಗಿ: ಆಫೀಸಿಗೆ ಹೊರಟು ನಿಂತ ಅದಿತಿಗೆ ಕಂಡಿದ್ದು ಸೌಭಾಗ್ಯಳ ಕೋಟಿ ಕೋಟಿ ಆಸ್ತಿ!

  ಸಂಜನಾ ಬುರ್ಲಿ ಅವರನ್ನು ಪ್ರೇಕ್ಷಕರು ಸ್ನೇಹಾ ಪಾತ್ರದಲ್ಲಿ ಮೆಚ್ಚಿಕೊಂಡಿದ್ದಾರೆ. ಓದಿನಲ್ಲಿ ರ್ಯಾಂಕ್ ಸ್ಟುಂಡೆಂಟ್ ಆಗಿದ್ದ ಸಂಜನಾ ಈಗ ಆಕ್ಟಿಂಗ್‌ನಲ್ಲೂ ಮುಂದಿದ್ದಾರೆ. ಇದೀಗ ಆಕೆಯ 'ಲವ್ ರಿಸೆಟ್' ಸಿದ್ಧವಾಗಿದ್ದು, ಚಿತ್ರದ ಹಾಡೊಂದು ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ.

  ಓದು ಕನಸಾದರೆ, ನಟನೆ ಪ್ಯಾಷನ್

  ಓದು ಕನಸಾದರೆ, ನಟನೆ ಪ್ಯಾಷನ್

  ನಟಿ ಸಂಜನಾ ಬುರ್ಲಿ ಅವರು ಬೆಂಗಳೂರಿನವರೇ. ತಂದೆ ಅಜಿತ್ ಬುರ್ಲಿ ಮತ್ತು ತಾಯಿ ಭಾರತಿ, ಪೋಷಕರೊಂದಿಗೆ ಬೆಂಗಳೂರಿನಲ್ಲಿ ಬೆಳೆದವರು. ಇವರ ಪೋಷಕರ ಆಸೆಯಂತೆ ಸಂಜನಾ ಅವರು ಎಂಜಿನಿಯರ್ ಓದಿದ್ದಾರೆ. ಓದಿ ಒಳ್ಳೆಯ ರ್ಯಾಂಕ್ ಸ್ಟುಡೆಂಟ್ ಆಗಿರಬೇಕೆಂದು ಕನಸು ಕಂಡ ಸಂಜನಾ, ಓದಿನಲ್ಲಿ ಸದಾ ಮುಂದಿದ್ದರು. ಇನ್ನು ನಟಿಯಾಗಬೇಕೆಂದು ಆಸೆಪಟ್ಟು ಓದುವಾಗಲೇ ರಂಗಭೂಮಿಯ ಕಲಾವಿದೆಯಾದರು. ಹಾಗೆಯೇ ಕಿರುತೆರೆಗೂ ಪಾದಾರ್ಪಣೆ ಮಾಡಿ, ಓದು, ನಟನೆ ಎರಡನ್ನೂ ಸರಿ ಸಮಾನವಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು. ಸದ್ಯ ಓದನ್ನು ಮುಗಿಸಿ ಫುಲ್ ಟೈಮ್ ನಟನೆಗೆ ಮೀಸಲಿಟ್ಟಿದ್ದಾರೆ.

  ಅಭಿಮಾನಿಗಳ ಫೇವರಿಟ್ ನಟಿ

  ಅಭಿಮಾನಿಗಳ ಫೇವರಿಟ್ ನಟಿ

  ನಟಿ ಸಂಜನಾ ಬುರ್ಲಿ ಅವರು 'ಪತ್ತೆದಾರಿ ಪ್ರತಿಭಾ' ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ತದನಂತರ ಸಂಜನಾ ಅವರು 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಮೂಲಕ ಅವರಿಗೆ ಹೆಸರು ಬರುತ್ತದೆ ಎಂದು ತುಂಬಾ ಆಸೆ ಇಟ್ಟುಕೊಂಡಿದ್ದರು. ಆದರೆ 'ಲಗ್ನಪತ್ರಿಕೆ' ಧಾರಾವಾಹಿ ಅರ್ಧಕ್ಕೆ ನಿಂತು ಹೋಗಿದ್ದಕ್ಕೆ ಬೇಸರಗೊಂಡಿದ್ದರು. ಕೋವಿಡ್‌ನಿಂದಾಗಿ ಕೆಲ ಸಮಯ ಯಾವ ಅವಕಾಶವೂ ಸಿಕ್ಕಿರಲಿಲ್ಲ. ಬಳಿಕ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಆಫರ್ ಬಂತು. ಇದರಲ್ಲಿ ಸದ್ಯ ಸ್ನೇಹ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಂಜನಾ ಅವರು ಸ್ನೇಹಾ ಪಾತ್ರದ ಮೂಲಕ ಅಭಿಮಾನಿಗಳ ಫೇವರಿಟ್ ನಟಿಯಾಗಿದ್ದಾರೆ.

  ಸ್ಯಾಂಡಲ್‌ವುಡ್‌ಗೂ ಎಂಟ್ರಿ

  ಸ್ಯಾಂಡಲ್‌ವುಡ್‌ಗೂ ಎಂಟ್ರಿ

  ಸಂಜನಾ ಬುರ್ಲಿ ಅವರು ಕಿರುತೆರೆ ಹಾಗೂ ರಂಗಭೂಮಿಗಷ್ಟೇ ಮೀಸಲಿರದೆ, ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟರು. ಸಂಜನಾ ಅವರು 'ಸ್ನೇಹರ್ಷಿ' ಎಂಬ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಬಳಿಕ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಅವರ ಜೊತೆಗೆ 'ವೀಕೆಂಡ್' ಎಂಬ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ರಿಲೀಸ್ ಕೂಡ ಆಗಿದೆ. ನಂತರ 'ನಾನ್ ವೆಜ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್' ಎಂಬ ಚಿತ್ರದಲ್ಲೂ ನಟಿಸಿದ್ದು, ಇದರ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರ ಇನ್ನೂ ಬಿಡುಗಡೆ ಭಾಗ್ಯವನ್ನು ಕಂಡಿಲ್ಲ.

  'ಲವ್ ರಿಸೆಟ್' ಮೂಡ್ ನಲ್ಲಿ ಸಂಜನಾ

  'ಲವ್ ರಿಸೆಟ್' ಮೂಡ್ ನಲ್ಲಿ ಸಂಜನಾ

  ಇದೀಗ ಸಂಜನಾ ಅವರು ನಟಿಸಿರುವ ಕಿರುಚಿತ್ರ ಭಾರೀ ಸದ್ದು ಮಾಡುತ್ತಿದೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಶ್ರೀ ಗಣೇಶ್ 'ಲವ್ ರಿಸೆಟ್' ಎಂಬ ಮತ್ತೊಂದು ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸಿನಿಮಾದಂತೆಯೇ ಚಿತ್ರೀಕರಿಸಿದ್ದಾರೆ. ಲೊಕೇಶನ್, ಕ್ಯಾಮರಾ ಎಲ್ಲವೂ ಅದ್ಧೂರಿಯಾಗಿದೆ. ಕಿರುಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡನ್ನು ಸುನಿಲ್ ಗುಜಗೊಂಡ ಹಾಗೂ ಅನನ್ಯಾ ಪ್ರಕಾಶ್ ಹಾಡಿದ್ದಾರೆ. ಅಭಿಲಾಶ್ ಲಕ್ರೆ, ಜಿಯೋಲ್ ಡುಬಾ ಸಂಗೀತ ಇದೆ. ನಟ ಪವನ್ ಮತ್ತು ಸಂಜನಾ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಇದೇ ತಿಂಗಳ ಕೊನೆಯಲ್ಲಿ ರಿಲೀಸ್ ಆಗಲಿದೆ.

  English summary
  Sanjana Burli Starrer Love Reset Short Movie Song Released. song Anuragada from the Love Reset sung by Sunil Gujagonda and Ananya Prakash on A2 Entertainment. Know More.
  Monday, November 7, 2022, 19:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X