»   » ಟ್ರೋಲ್ ಮಾಡುವವರಿಗೆ ಮರ್ಯಾದೆ ಇಲ್ಲ ಎಂದ 'ಬಿಗ್ ಬಾಸ್' ಸಂಜನಾ.!

ಟ್ರೋಲ್ ಮಾಡುವವರಿಗೆ ಮರ್ಯಾದೆ ಇಲ್ಲ ಎಂದ 'ಬಿಗ್ ಬಾಸ್' ಸಂಜನಾ.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ 'ಮೇಕಪ್ ಕ್ವೀನ್' ಸಂಜನಾ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದರು. ಇದರಿಂದ ರೊಚ್ಚಿಗೆದ್ದ ಸಂಜನಾ ಕೂಡ 'ಟ್ರೋಲ್ ಪೇಜ್'ಗಳ ಅಡ್ಮಿನ್ ಗಳಿಗೆ ಬೆಂಡೆತ್ತಿದ್ದರು. ಆದರೂ, ಪ್ರಯೋಜನ ಆಗಲಿಲ್ಲ. ಎಲ್ಲ 'ಟ್ರೋಲ್ ಪೇಜ್'ಗಳ ಅಡ್ಮಿನ್ ಗಳು ಒಂದಾಗಿ ಸಂಜನಾ ವಿರುದ್ಧ ಯರ್ರಾಬಿರ್ರಿ ಟ್ರೋಲ್ ಮಾಡಿದ್ದರು.

'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

ಈಗಲೂ, ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ಕುರಿತಾಗಿ ಲೆಕ್ಕವಿಲ್ಲದಷ್ಟು ಟ್ರೋಲ್ ಗಳಿವೆ. ಈ ಹಿನ್ನಲೆಯಲ್ಲಿ ''ಟ್ರೋಲ್ ಮಾಡಿದರೆ ಗುರ್ರೆನ್ನುತ್ತೀರಾ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರಿಯಾಕ್ಟ್ ಮಾಡುತ್ತೀರಲ್ಲಾ.? ಯಾಕೆ.?'' ಎಂದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಕೇಳಿದಕ್ಕೆ ಸಂಜನಾ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು....

Sanjana's reaction on Trolls

''ತುಂಬಾ ಎಕ್ಸ್ ಟ್ರೀಮ್ ಗೆ ಹೋದಾಗ ನಾನು ರಿಯಾಕ್ಟ್ ಮಾಡಿದೆ. ಅದಾದ್ಮೇಲೆ ಇನ್ನೂ ಜಾಸ್ತಿ ಮಾಡಿದರು. ಅವರಿಗೆ ಮರ್ಯಾದೆ ಇಲ್ಲ ಅಂತ ಸುಮ್ಮನಾಗಿಬಿಟ್ಟೆ'' ಎಂದು ಉತ್ತರಿಸಿದ್ದಾರೆ ಸಂಜನಾ.

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ಇನ್ನೂ ಇದೇ ಕಾರ್ಯಕ್ರಮದಲ್ಲಿ 'ದರ್ಶನ್ ಅಂದ್ರೆ ಬಿಲ್ಡಪ್' ಅಂತ ಹೇಳಿ ಸಂಜನಾ ಮಗದೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವಿವಾದದ ಕೇಂದ್ರ ಬಿಂದು ಆಗಿದ್ದರು. ಟ್ರೋಲ್ ಗಳಿಂದ ಬೇಸೆತ್ತು ಫೇಸ್ ಬುಕ್ ನಿಂದ ಹೊರಬಂದಿದ್ದರು. ಕೊನೆಗೆ ದರ್ಶನ್ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟರು.

English summary
'Bigg Boss' Sanjana has reacted about trolls in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada