»   » ದುನಿಯಾ ವಿಜಯ್ ಜೊತೆ ಡೇಟಿಂಗ್ ಮಾಡ್ತಾರಂತೆ 'ಬಿಗ್ ಬಾಸ್' ಸಂಜನಾ.!

ದುನಿಯಾ ವಿಜಯ್ ಜೊತೆ ಡೇಟಿಂಗ್ ಮಾಡ್ತಾರಂತೆ 'ಬಿಗ್ ಬಾಸ್' ಸಂಜನಾ.!

Posted By:
Subscribe to Filmibeat Kannada

ಹೊಸ ಹೆಂಡ್ತಿ ಕೀರ್ತಿ ಜೊತೆ ಖುಷಿ ಖುಷಿಯಾಗಿ 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ದಾಂಪತ್ಯ ಜೀವನ ನಡೆಸುತ್ತಿರುವಾಗಲೇ, ಇದೇನಪ್ಪಾ ಇದು ಇಂತಹ ಸುದ್ದಿ ಅಂತ ಶೀರ್ಷಿಕೆ ನೋಡಿದ ಕೂಡಲೆ ಬಾಯಿ ಮೇಲೆ ಬೆರಳಿಡುವ ಮುನ್ನ ಪೂರ್ತಿ ಮ್ಯಾಟರ್ ಓದಿರಿ....

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಭಾಗವಹಿಸಿದ್ದಾರೆ.

Sanjana takes part in 'Super Talk Time'

Rapid Fire ರೌಂಡ್ ನಲ್ಲಿ 'ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಾ' ಅಂತ ನಿರೂಪಕ ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ, ಕೊಟ್ಟಿರುವ ಆಯ್ಕೆಗಳ ಪೈಕಿ 'ದುನಿಯಾ ವಿಜಯ್' ರವರನ್ನ ಸಂಜನಾ ಸೆಲೆಕ್ಟ್ ಮಾಡಿಕೊಂಡಿದ್ದಾರೆ.

ಸಂಜನಾ ಜೊತೆಗೆ 'ಕಿರಿಕ್' ಕೀರ್ತಿ ಹಾಗೂ ಪ್ರಥಮ್ ಕೂಡ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಜನಾ, ಕಿರಿಕ್ ಕೀರ್ತಿ ಹಾಗೂ ಪ್ರಥಮ್ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಇಂದು ರಾತ್ರಿ 9 ಗಂಟೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಕಾರ್ಯಕ್ರಮದ ಪ್ರೋಮೋ ಇಲ್ಲಿದೆ ನೋಡಿ....

English summary
Sanjana of Bigg Boss Kannada fame takes part in Colors Super Channel's popular show 'Super Talk Time'. Watch Promo...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada