»   » 'ಭರ್ಜರಿ ಕಾಮಿಡಿ'ಯಿಂದ 'ಬಿಗ್ ಬಾಸ್' ಸಂಜನಾ ಹೊರಗೆ ಬಂದಿದ್ಯಾಕೆ? ಕಾರಣ ಇಲ್ಲಿದೆ!

'ಭರ್ಜರಿ ಕಾಮಿಡಿ'ಯಿಂದ 'ಬಿಗ್ ಬಾಸ್' ಸಂಜನಾ ಹೊರಗೆ ಬಂದಿದ್ಯಾಕೆ? ಕಾರಣ ಇಲ್ಲಿದೆ!

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ನಟಿ ಸಂಜನಾ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಸಂಜನಾ-ಭುವನ್-ಪ್ರಥಮ್ ನಡುವಿನ ಲವ್ ಟ್ರೈಯಾಂಗಲ್ ನಿಮಗೆ ನೆನಪಿರಬಹುದು. ಅದು 'ಬಿಗ್ ಬಾಸ್' ಮನೆಯಿಂದಾಚೆಗೂ ಮುಂದುವರಿದು 'ಸಂಜು ಮತ್ತು ನಾನು' ಧಾರಾವಾಹಿ ರೂಪ ಪಡೆದಿತ್ತು.

'ಸಂಜು ಮತ್ತು ನಾನು' ಮುಗಿದ್ಮೇಲೆ ಸಂಜನಾ ಪ್ರತ್ಯಕ್ಷವಾಗಿದ್ದು 'ಭರ್ಜರಿ ಕಾಮಿಡಿ'ಯಲ್ಲಿ. ವೀಕ್ಷಕರನ್ನು ನಕ್ಕು-ನಲಿಸುವ 'ಭರ್ಜರಿ ಕಾಮಿಡಿ' ಶೋನಲ್ಲಿ ಸಂಜನಾ ಕೂಡ ಸ್ಪರ್ಧಿಯಾಗಿದ್ದರು.

ಇಷ್ಟು ದಿನ ವೇದಿಕೆ ಮೇಲೆ ನಟನೆ ಮಾಡುತ್ತಿದ್ದ ಸಂಜನಾ ಈಗ 'ಭರ್ಜರಿ ಕಾಮಿಡಿ' ಶೋನಲ್ಲಿ ಇಲ್ಲ. ಇದ್ದಕ್ಕಿದ್ದಂತೆ ನಟಿ ಸಂಜನಾ 'ಭರ್ಜರಿ ಕಾಮಿಡಿ' ಶೋ ಬಿಟ್ಟಿದ್ದು ಯಾಕೆ.? ಇಲ್ಲಿ ಏನಾದರೂ ಕಿರಿಕ್ ಆಯ್ತಾ.? ಅಷ್ಟಕ್ಕೂ, 'ಭರ್ಜರಿ ಕಾಮಿಡಿ' ಶೋನಿಂದ ಸಂಜನಾ ಹೊರಬರುವುದಕ್ಕೆ ಕಾರಣ ಏನು.? ಎಂಬ ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ಓದಿರಿ...

ತೆಲುಗು ಕಡೆ ಮುಖ ಮಾಡಿದ ನಟಿ ಸಂಜನಾ

ನಟಿ ಸಂಜನಾ ತೆಲುಗಿನ ಕಡೆ ಮುಖ ಮಾಡಿದ್ದಾರೆ. ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನಟಿ ಸಂಜನಾಗೆ ಸಿಕ್ಕಿದೆ. ಹೀಗಾಗಿ 'ಭರ್ಜರಿ ಕಾಮಿಡಿ' ಶೋಗೆ ನಟಿ ಸಂಜನಾ ಗುಡ್ ಬೈ ಹೇಳಿದ್ದಾರೆ.

'ಭರ್ಜರಿ ಕಾಮಿಡಿ' ಕಾರ್ಯಕ್ರಮದಿಂದ ಹೊರ ಬಂದ ಸಂಜನಾ!

ತೆಲುಗಿನಲ್ಲಿ ಪ್ರಮುಖ ಪಾತ್ರ

ತೆಲುಗಿನ ಧಾರಾವಾಹಿಯಲ್ಲಿ ಸಂಜನಾಗೆ ಪ್ರಮುಖ ಪಾತ್ರ ಲಭಿಸಿದೆ. ಹೀಗಾಗಿ ಅನಿವಾರ್ಯವಾಗಿ ಕನ್ನಡದ ರಿಯಾಲಿಟಿ ಶೋ ಬಿಟ್ಟಿದ್ದಾರೆ. ಅಷ್ಟಕ್ಕೂ, ಸಂಜನಾ ಒಪ್ಪಿಕೊಂಡಿರುವ ತೆಲುಗಿನ ಧಾರಾವಾಹಿ ಯಾವುದು.? ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಸ್ಯಾಂಡಲ್ ವುಡ್ ನಲ್ಲಿ ಸಂಜನಾ ಮಿಂಚಿದ್ದರು

'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ, 'ಮೊಂಬತ್ತಿ' ಎಂಬ ಕನ್ನಡ ಸಿನಿಮಾದಲ್ಲಿ ನಟಿ ಸಂಜನಾ ಸೊಂಟ ಬಳುಕಿಸಿದ್ದರು. ಅದಾದ್ಮೇಲೆ, ಕಿರುತೆರೆಯಲ್ಲಿಯೇ ಸಂಜನಾ ಗಮನ ಹರಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದ ಸಂಜನಾ ಇದೀಗ ತೆಲುಗಿನ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇನ್ನೇನು ಮುಗಿಯಲಿದೆ

ರಾಗಿಣಿ, ಗುರುಪ್ರಸಾದ್, ದೊಡ್ಡಣ್ಣ ತೀರ್ಪುಗಾರರಾಗಿದ್ದ, ವೈಷ್ಣವಿ ನಿರೂಪಣೆ ಮಾಡುತ್ತಿದ್ದ 'ಭರ್ಜರಿ ಕಾಮಿಡಿ' ಕಾರ್ಯಕ್ರಮ ಇನ್ನೇನು ಮುಗಿಯಲಿದೆ. ಕಾರ್ಯಕ್ರಮ ಕೊನೆಯ ಹಂತದಲ್ಲಿ ಇರುವಾಗ, ಸಂಜನಾ ಹೊರಗೆ ಬಂದಿದ್ದಾರೆ.

English summary
Kannada Actress Sanjana of Bigg Boss Kannada fame, to play lead role in Telugu serial.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada