»   » 'ಸಂಕ್ರಾಂತಿ' ಸ್ಪೆಷಲ್ ಕಿರುತೆರೆಯಲ್ಲಿ ಸೂಪರ್ ಹಿಟ್ ಚಲನಚಿತ್ರಗಳು!

'ಸಂಕ್ರಾಂತಿ' ಸ್ಪೆಷಲ್ ಕಿರುತೆರೆಯಲ್ಲಿ ಸೂಪರ್ ಹಿಟ್ ಚಲನಚಿತ್ರಗಳು!

Written By:
Subscribe to Filmibeat Kannada

ಸಂಕ್ರಾಂತಿ ಹಬ್ಬವನ್ನ ಧೂಮ್ ಧಾಮ್ ಆಗಿ ಆಚರಿಸಿ, 'ಎಳ್ಳು ಬೆಲ್ಲ' ಸವಿದ ಮೇಲೆ ಮನಸ್ಸಿಗೆ ಮನರಂಜನೆ ಬೇಕಲ್ವಾ..? ಹೇಗಿದ್ದರೂ ರಜಾ ಮಜಾ....ಚಿತ್ರಮಂದಿರಕ್ಕೆ ಹೋಗಿ, ಹೊಸ ಸಿನಿಮಾ ನೋಡುವ ಬದಲು ಆರಾಮಾಗಿ ಕುಟುಂಬದವರೊಂದಿಗೆ ಮನೆಯಲ್ಲಿರಬೇಕು ಅಂತ ಬಯಸೋರಿಗೆ, ಕನ್ನಡ ಟಿವಿ ವಾಹಿನಿಗಳಲ್ಲಿ ಭರಪೂರ ಮನರಂಜನಾ ಔತಣವಿದೆ.

ಹೌದು, ಈ ವರ್ಷದ ಸುಗ್ಗಿ ಹಬ್ಬಕ್ಕೆ ಕಿರುತೆರಯಲ್ಲೂ ಕನ್ನಡದ ಸೂಪರ್ ಹಿಟ್ ಚಲನಚಿತ್ರಗಳನ್ನ ಪ್ರಸಾರವಾಗುತ್ತಿದ್ದು, ನೀವು ಮನೆಯಲ್ಲೇ ಕೂತು ಸೂಪರ್ ಸಂಕ್ರಾಂತಿ ಆಚರಣೆ ಮಾಡಬಹುದಾಗಿದೆ.

ಹಾಗಾದ್ರೆ, ಯಾವ ಯಾವ ಚಾನಲ್ ನಲ್ಲಿ, ಯಾವ ಯಾವ ಸಿನಿಮಾಗಳು ಪ್ರಸಾರವಾಗಲಿದೆ ಎಂಬ ಮಾಹಿತಿ ಕೆಳಗಿರುವ ಸ್ಲೈಡ್ ಗಳಲ್ಲಿ ನೀಡಲಾಗಿದೆ. ಮುಂದೆ ಓದಿ....

ಉದಯ ಟಿವಿಯಲ್ಲಿ 'ಕೋಟಿಗೊಬ್ಬ2'

ಕಿಚ್ಚ ಸುದೀಪ್ ಅಭಿನಯದ 2016ರ ಬ್ಲ್ಯಾಕ್ ಬಸ್ಟರ್ ಸಿನಿಮಾ 'ಕೋಟಿಗೊಬ್ಬ2', ಸಂಕ್ರಾಂತಿ ಹಬ್ಬದ ಪ್ರಯುಕ್ತ ನಿಮ್ಮ 'ಉದಯ ಟಿವಿ'ಯಲ್ಲಿ ಶನಿವಾರ (ಜನವರಿ 14) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ.

ಜೀ ಕನ್ನಡದಲ್ಲಿ 'ದನಕಾಯೋನು'

ಯೋಗರಾಜ್ ಭಟ್ ನಿರ್ದೇಶನ, ದುನಿಯಾ ವಿಜಯ್, ಪ್ರಿಯಾಮಣಿ, ರಂಗಾಯಣ ರಘು ಅಭಿನಯದ 'ದನಕಾಯೋನು' ಚಿತ್ರ ಇದೇ ಭಾನುವಾರ ರಾತ್ರಿ 8 ಗಂಟೆಗೆ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ

'ತಲೆ ಬಾಚ್ಕೊಳ್ಳಿ ಫೌಡರ್ ಹಾಕ್ಕೊಳ್ಳಿ'

ಚಿಕ್ಕಣ್ಣ, ವಿಕ್ರಮ್, ನಿಖಿತಾ ತುಕ್ರಾಲ್, ಬುಲೆಟ್ ಪ್ರಕಾಶ್ ಅಭಿನಯದ ಕಾಮಿಡಿ ಎಂಟರ್ ಟೈನರ್ 'ತಲೆ ಬಾಚ್ಕೊಳ್ಳಿ ಫೌಡರ್ ಹಾಕ್ಕೊಳ್ಳಿ' ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ 'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಶರಣ್ 'Rambo'

ಕಾಮಿಡಿ ಕಿಂಗ್ ಶರಣ್ ಅಭಿನಯದ ಹಾಸ್ಯ ಭರಿತ ಚಿತ್ರ 'Rambo' ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

'ಹೆಬ್ಬುಲಿ' ಆಡಿಯೋ ಕಾರ್ಯಕ್ರಮ

ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ರವಿಚಂದ್ರನ್, ರವಿಶಂಕರ್ ಅಭಿನಯದ 'ಹೆಬ್ಬುಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಡಿಸೆಂಬರ್ 25 ರಂದು ದಾವಣೆಗೆರೆಯಲ್ಲಿ ನಡೆದಿತ್ತು. ಈ ವಿಶೇಷ ಕಾರ್ಯಕ್ರಮ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 4 ಗಂಟೆಗೆ 'ಜೀ ಕನ್ನಡದಲ್ಲಿ' ಪ್ರಸಾರವಾಗಲಿದೆ.

ಎಂಜಾಯ್ ಮಾಡಿ.....!

ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಸೂಪರ್ ಹಿಟ್ ಸಿನಿಮಾಗಳು ಹಾಗೂ ಕಾರ್ಯಕ್ರಮಗಳನ್ನ ನೋಡಿ ಎಂಜಾಯ್ ಮಾಡಿ

English summary
Leading Kannada Entertainment TV Channels Are Airing Hit Kannada Movies as Sankranthi Festival Special on January 14th. Kotigobba2-Udaya TV 6PM, DanaKayonu-ZEE Kannada 5PM.....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada