»   » 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್!

'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್!

Posted By:
Subscribe to Filmibeat Kannada

ವರ್ಷದ ಮೊದಲನೇ ಹಬ್ಬ ಸಂಕ್ರಾಂತಿಯನ್ನ ನೀವೆಲ್ಲಾ ನಿಮ್ಮ ಮನೆಯಲ್ಲಿ ಸಂಭ್ರಮದಿಂದ ಆಚರಿಸುತ್ತೀರಾ. ಹಾಗೇ, ಸುವರ್ಣ ವಾಹಿನಿಯಲ್ಲಿ ಈ ಸಂಕ್ರಾಂತಿಯನ್ನ ಸುವರ್ಣ ಪರಿವಾರ ಆಚರಿಸಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತವರ್ಷಿಣಿ', 'ಅವನು ಮತ್ತೆ ಶ್ರಾವಣಿ', 'ಮಿಲನ', 'ಅನುರೂಪ' ಮತ್ತು 'ದುರ್ಗಾ' ಧಾರಾವಾಹಿಯ ಎಲ್ಲಾ ನಟ-ನಟಿಯರು ಸೇರಿ ಮನರಂಜನೆಯ ಜೊತೆಗೆ ಬಹಳ ವಿಜೃಂಭಣೆಯಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಈ ಆಚರಣೆಗೆ ಸ್ಯಾಂಡಲ್ ವುಡ್ ನ ನಟ-ನಟಿಯರು ಭಾಗವಹಿಸಿರುವುದು ವಿಶೇಷ. [ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!]

Sankranthi special program in Suvarna Channel

ನಟ-ನಿರ್ದೇಶಕ ರಮೇಶ್ ಅರವಿಂದ್ ''ನೂರು ಜನ್ಮಕೂ ನೂರಾರು ಜನ್ಮಕೂ..'' ಎಂಬ ಹಾಡಿಗೆ ಸುವರ್ಣ ಸುಂದರಿಯರ ಜೊತೆ ಡ್ಯಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಿದ್ರೆ, ನಟಿ ರಾಗಿಣಿ ದ್ವಿವೇದಿ ಡೊಳ್ಳು ಕುಣಿತಕ್ಕೆ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಲೂಸ್ ಮಾದ ಯೋಗಿ ಮತ್ತು ಹರ್ಷಿಕಾ ಪೂಣಚ್ಚ ಈ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ ಮಕರ ಸಂಕ್ರಮಣದ ಶುಭಾಶಯ ಕೋರಿದ್ದಾರೆ.

Sankranthi special program in Suvarna Channel

ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ದಿವ್ಯಾ ನಡೆಸಿಕೊಟ್ಟ ಈ ಸಂಕ್ರಾಂತಿ ಸಂಭ್ರಮದಲ್ಲಿ ಸಾಕಷ್ಟು ಮನರಂಜನೆ ಟಾಸ್ಕ್ ಗಳಿವೆ. ಸುವರ್ಣ ಪರಿವಾರದ ಎಲ್ಲಾ ಸದಸ್ಯರು ಭಾಗವಹಿಸಿ ಭರ್ಜರಿ ಮನರಂಜನೆ ನೀಡಿದ್ದಾರೆ.

ಸುವರ್ಣ ತಾರೆಯರೊಂದಿಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮಕರ ಸಂಕ್ರಮಣ ವಿಶೇಷ ಕಾರ್ಯಕ್ರಮ ಇದೇ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೆ ವೀಕ್ಷಿಸಿ....

English summary
Kannada Actor Ramesh Aravind and Kannada Actress Ragini Dwivedi has taken part in Suvarna Channel's Sankranthi special event. Watch the program on January 15th 1.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada