»   » ಈ 'ವೀಕೆಂಡ್' ವಿಶೇಷ: ಸಾಧಕರ ಸೀಟ್ ನಲ್ಲಿ ಸಂತೋಷ್ ಹೆಗ್ಡೆ.!

ಈ 'ವೀಕೆಂಡ್' ವಿಶೇಷ: ಸಾಧಕರ ಸೀಟ್ ನಲ್ಲಿ ಸಂತೋಷ್ ಹೆಗ್ಡೆ.!

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಪ್ರಿಯಾಮಣಿ ಕೂತ ಮೇಲೆ ವೀಕ್ಷಕರ ವಲಯದಿಂದ ಅಸಮಾಧಾನ ಭುಗಿಲೆದ್ದಿತ್ತು.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ಕೋಪಗೊಂಡಿರುವ ವೀಕ್ಷಕರನ್ನ ಕೂಲ್ ಮಾಡಲು ಇದೀಗ ಜೀ ಕನ್ನಡ ವಾಹಿನಿ ಸಜ್ಜಾದಂತೆ ಕಾಣುತ್ತಿದೆ.

ಇದರ ಪರಿಣಾಮ ಈ 'ವೀಕೆಂಡ್' ನಲ್ಲಿ... ಶನಿವಾರ (ಇಂದು, ಮೇ 13) ಕಾಶೀನಾಥ್ ರವರ ಜೀವನ ಚರಿತ್ರೆ ಅನಾವರಣವಾದರೆ, ಭಾನುವಾರ (ನಾಳೆ, ಮೇ 14) ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಾಧಕರ ಸೀಟ್ ನಲ್ಲಿ ಆಸೀನರಾಗಲಿದ್ದಾರೆ. ಮುಂದೆ ಓದಿ....

ವೀಕೆಂಡ್ ವಿತ್ ಸಂತೋಷ್ ಹೆಗ್ಡೆ

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ, 2006-2011 ರವರೆಗೆ ಕರ್ನಾಟಕದ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ, ವ್ಯವಸ್ಥೆಯ ಕೊಳೆಯನ್ನು ತೊಳೆಯುವತ್ತ.. ಭ್ರಷ್ಟಾಚಾರದ ಬಲ ಕುಗ್ಗಿಸುವತ್ತ ಹೆಜ್ಜೆ ಇಟ್ಟ ಸಂತೋಷ್ ಹೆಗ್ಡೆ ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಕೇಂದ್ರ ಬಿಂದು.

ಕಿರುತೆರೆ ಮೇಲೆ ಸಂತೋಷ್ ಹೆಗ್ಡೆ ಬಾಳ ಪಯಣ

ಉಡುಪಿ ಜಿಲ್ಲೆಯ ನಿಟ್ಟೆಯಲ್ಲಿ ಹುಟ್ಟಿ ಬೆಳೆದ ಸಂತೋಷ್ ಹೆಗ್ಡೆ ರವರ ಸಾಧನೆಯ ಹೆಜ್ಜೆ ಗುರುತು ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಲಿದೆ.

ದೊರೆಸ್ವಾಮಿ ಭಾಗಿ

ಸಂತೋಷ್ ಹೆಗ್ಡೆ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ದೊರೈಸ್ವಾಮಿ ಕೂಡ ಪಾಲ್ಗೊಂಡಿದ್ದಾರೆ.

ತಪ್ಪದೇ ವೀಕ್ಷಿಸಿ....

ಬರೀ ಸಿನಿಮಾದವರ ಜೀವನ ಶೈಲಿ ನೋಡಿ ನೋಡಿ ಬೇಸರಗೊಂಡಿದ್ದವರು, ಈ ಭಾನುವಾರದ 'ವೀಕೆಂಡ್ ವಿತ್ ರಮೇಶ್' ಮಿಸ್ ಮಾಡ್ಬೇಡಿ. ಯಾಕಂದ್ರೆ, ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ.. 'ಲೋಕಾಯುಕ್ತ' ಅಂದ್ರೆ ಇಡೀ ಕರ್ನಾಟಕ ನೆನಪಿಸಿಕೊಳ್ಳುವ ಸಂತೋಷ್ ಹೆಗ್ಡೆ ಈ ಭಾನುವಾರ ಸಾಧಕರ ಸೀಟ್ ನಲ್ಲಿರುತ್ತಾರೆ.

English summary
Former Judge of Supreme Court of India, Lokayuktha for Karnataka (2006-2011) Santhosh Hegde has taken part in Zee Kannada Channel's popular show Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada