For Quick Alerts
  ALLOW NOTIFICATIONS  
  For Daily Alerts

  'ಮಗಳು ಜಾನಕಿ' ಧಾರಾವಾಹಿಯ ಕಿರಿಯ ಪಾತ್ರಧಾರಿ ಇಂಚರಾ

  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ದಾರವಾಹಿಗಳಲ್ಲಿ ಮಗಲು ಜಾನಕಿ ಧಾರಾವಾಹಿ ಕೂಡ ಒಂದು. ಸಾಕಷ್ಟು ವಿಭಿನ್ನತೆಗಳಿಂದ ಪ್ರೇಕ್ಷಕರ ಮನಸೆಳೆದಿರುವ ಈ ಧಾರಾವಾಹಿಗೆ ಈಗ ವರ್ಷದ ಸಂಭ್ರಮ. ಈ ಸೀರಿಯಲ್ ನ ಸಾಕಷ್ಟು ಪಾತ್ರಗಳು ಪ್ರೇಕ್ಷಕರ ಮನಗೆದ್ದಿವೆ.

  ಜಾನಕಿ, ನಿರಂಜನ್, ಭಾರ್ಗಿ, ಸಂಜನಾ, ರಶ್ಮಿ, ಸಿ ಎಸ್ ಪಿ ಹೀಗೆ ಎಲ್ಲಾ ಪಾತ್ರಗಳು ಸಹ ಒಂದೊಂದು ವಿಶೇಷತೆಗಳಿಂದ ನೋಡುಗರನ್ನು ಆಕರ್ಷಿಸುತ್ತಿವೆ. ಇದರ ಜೊತೆಗೆ ಮುಖ್ಯ ಆಕರ್ಷಣೆ ಅಂದ್ರೆ ಪುಟ್ಟ ಮಗು ಇಂಚರ ಪಾತ್ರ. ಈ ಧಾರಾವಾಹಿಯ ತುಂಬ ಕಿರಿಯ ಪಾತ್ರದಾರಿ ಅಂದ್ರೆ ಇಂಚರಾ.

  ವರುಷ ತುಂಬಿದ ಹರುಷದಲ್ಲಿ 'ಮಗಳು ಜಾನಕಿ' ತಂಡ

  ಅಂದ್ಹಾಗೆ ಈ ಇಂಚರಾ ಯಾರು ಗೊತ್ತಾ. ಈಕೆ ಹೆಸರು ಸಾನ್ವಿ ವೆಂಕಟೇಶ್. ಸಾನ್ವಿಗೆ ಇನ್ನು ಏಳು ವರ್ಷ. ಕ್ಲಾರೆನ್ಸ್ ಪಬ್ಲಿಕ್ ಶಾಲೆಯಲ್ಲಿ 2ನೆ ತರಗತಿ ಓದುತಿದ್ದಾರೆ. ಸಾನ್ವಿ ಅಭಿನಯದನದಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಕರಾಟೆ ಪಟು ಕೂಡ ಹೌದು. ಈಗಾಗಲೆ ಕರಾಟೆಯಲ್ಲಿ ಪರ್ಪಲ್ ಬೆಲ್ಟ್ ಗಳಿಸಿದ್ದಾರೆ.

  ಸಾನ್ವಿಗೆ ಸಂಹಿತಾ ಎನ್ನುವ ಒಬ್ಬಳು ಅಕ್ಕ ಕೂಡ ಇದ್ದಾರೆ. ಇಬ್ಬರು ಸೇರಿ ಒಂದು ಯೂ ಟ್ಯೂಬ್ ಚಾನೆಲ್ ಮಾಡಿದ್ದಾರೆ. ಈ ಚಾನೆಲ್ ನಲ್ಲಿ ತರಹೇವಾರಿ ವಿಡಿಯೋಗಳನ್ನು ಮಾಡಿ ಹಾಕುತ್ತಿರುತ್ತಾರೆ. ಈ ಪುಟ್ಟ ಪೋರಿಯರ ವಿಡಿಯೋಗಳಿಗೆ ಸಾವಿರಗಟ್ಟಲೆ ಲೈಕ್ಸ್ ಗಳು ಬರುತ್ತವೆ.

  ಮಗಳು ಜಾನಕಿ ಧಾರಾವಾಹಿಯಲ್ಲಿ ಈಕೆ ತುಂಬ ಚಿಕ್ಕವಳು. ಹಾಗಾಗಿ ಸಾನ್ವಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಪುಟ್ಟ ಪೋರಿಯ ಪ್ರತಿಭೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಮ್ಮ ರಂಜಿ ಮಾಮನ ಟಿವಿಯಲ್ಲಿ ನೋಡಿದೆ ಎಂದು ಅಮ್ಮನನ್ನು ಕರೆದು ಕರೆದು ತೋರಿಸುವ ಇಂಚರಳ ಮುದ್ದು ಅಭಿನಯಕ್ಕೆ ನೋಡುಗರು ಫಿದಾ ಆಗಿದ್ದಾರೆ. ಈ ಪೋರಿ ಮತ್ತಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಎಲ್ಲರನ್ನು ರಂಜಿಸಲಿ ಎನ್ನುವುದು ಪ್ರೇಕ್ಷಕರ ಆಶಯ.

  English summary
  Child artist Sanvi Venkatesh is very small artist in Magalu Janaki serial. Kannada Famous serial Magalu Janaki completed one year. This serial directed by T N seetharam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X