For Quick Alerts
  ALLOW NOTIFICATIONS  
  For Daily Alerts

  ಬ್ಲಾಂಕ್ ಚೆಕ್ ಕೊಟ್ಟ ಬಾಲ: ತೇಲಾಡುತ್ತಿರುವ ಜಗನ್ನಾಥನಿಗೆ ಕಾದಿದೆಯಾ ಗ್ರಹಚಾರ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಕಾರ್ತಿಕ್‌ನನ್ನು ತನ್ನತ್ತ ಸೆಳೆದುಕೊಳ್ಳಲು ಸತ್ಯ ಪ್ರಯತ್ನಿಸುತ್ತಿದ್ದಾಳೆ. ಹೀಗಾಗಿ ಮಾತು ಮಾತಿಗೂ ಸತ್ಯ, ದಿವ್ಯಾ ಮತ್ತು ಬಾಲನ ಬಗ್ಗೆ ಉದಾಹರಣೆ ಕೊಡುತ್ತಿರುತ್ತಾಳೆ. ಅವರಿಬ್ಬರ ಪ್ರೀತಿಯೇ ಗ್ರೇಟ್. ನಿನಗೆ ರೊಮ್ಯಾನ್ಸ್ ಮಾಡೋಕೆ ಬರೋದಿಲ್ಲ ಎಂದು ರೇಗಿಸುತ್ತಿರುತ್ತಾಳೆ.

  ಗಿರಿಜಮ್ಮ ಕೂಡ ದಿವ್ಯಾ ಹಾಗೂ ಬಾಲನನ್ನು ಮುಂದಿಟ್ಟುಕೊಂಡು ಸತ್ಯ ಮತ್ತು ಕಾರ್ತಿಕ್ ಅನ್ನು ಒಂದು ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಕಾರ್ತಿಕ್ ಮತ್ತು ಸತ್ಯ ಒಂದಾದರೆ, ಅವರ ಬದುಕು ಸುಖವಾಗಿರುತ್ತದೆ. ಹಾಗೂ ಸತ್ಯಗೆ ಅವರ ಅತ್ತೆಯ ಮನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಗಿರಿಜಮ್ಮನ ಆಲೋಚನೆ.

  BBK9: ರೂಪೇಶ್ ಶೆಟ್ಟಿ ಹೊರಬರ್ತಿದ್ದಂತೆ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ರಿಲೀಸ್‌ಗೆ ರೆಡಿ!BBK9: ರೂಪೇಶ್ ಶೆಟ್ಟಿ ಹೊರಬರ್ತಿದ್ದಂತೆ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ರಿಲೀಸ್‌ಗೆ ರೆಡಿ!

  ಇನ್ನು ಇತ್ತ ಬಾಲ ಕೂಡ ದಿವ್ಯಾ ಮನೆಗೆ ಬಂದಿದ್ದು, ಇಬ್ಬರೂ ಇಲ್ಲೇ ಝಾಂಢಾ ಹೂಡುವಂತೆ ಕಾಣಿಸುತ್ತಾರೆ. ಯಾಕೆಂದರೆ, ದಿವ್ಯಾಗೆ ಆ ಹಳ್ಳಿಯಲ್ಲಿ ಬದುಕಲು ಆಗುವುದಿಲ್ಲ. ಇನ್ನು ಬಾಲನಿಗೂ ಹಳ್ಳಿಗಿಂತ ಇಲ್ಲೇ ಸುಖವಾಗಿದೆ. ಹಾಗಾಗಿ ಇಲ್ಲೇ ಪರ್ಮನೆಂಟ್ ಆಗಿ ಉಳಿಯುವ ಎಲ್ಲಾ ಸಾಧ್ಯತೆ ಇದೆ.

  ಗಿಫ್ಟ್‌ಗಾಗಿ ಪೀಡಿಸಿದ ದೊಡ್ಡಪ್ಪ

  ಗಿಫ್ಟ್‌ಗಾಗಿ ಪೀಡಿಸಿದ ದೊಡ್ಡಪ್ಪ

  ದಿವ್ಯಾ ಅವರ ದೊಡ್ಡಪ್ಪ ಜಗನ್ನಾಥ ಈಗ ಬಾಲನ ಹಿಂದೆ ಬಿದ್ದಿದ್ದಾನೆ. ಬಾಲ, ಕಾರ್ತಿಕ್‌ಗಿಂತಲೂ ಶ್ರೀಮಂತ ಎಂದು ನಂಬಿದ್ದಾನೆ. ಅದಕ್ಕಾಗಿಯೇ ತನ್ನ ರೂಮ್ ಅನ್ನು ಕೂಡ ಬಾಲ-ದಿವ್ಯಾಗೆ ಬಿಟ್ಟುಕೊಟ್ಟಿದ್ದಾನೆ. ಬಾಲನನ್ನು ಜಗನ್ನಾಥ ಬೆಳಗ್ಗೆ ಬೇಗನೇ ಎಬ್ಬಿಸುತ್ತಾನೆ. ಯಾಕೆ ಎಂದು ಕೇಳಿದ್ದಕ್ಕೆ, ನನಗೆ ಇವತ್ತು ಗಿಫ್ಟ್ ಕೊಡುತ್ತೀನಿ ಎಂದು ಹೇಳಿದ್ದಿರಿ. ಅದು ಕೊಟ್ಟರೆ ಚೆನ್ನಾಗಿರುತ್ತೆ ಎನ್ನುತ್ತಾನೆ. ಆಗ ಬಾಲ ಇದೇನು ಇನ್ನೂ ಈಗ ಎದ್ದೇಳುತ್ತಿದ್ದೀನಿ ಅಷ್ಟು ಬೇಗ ಹೇಗೆ ಕೊಡಲಿ ಎಂದಿದ್ದಕ್ಕೆ, ಜಗನ್ನಾಥ ಬಾಲನನ್ನು ವಾಕಿಂಗ್ ಗೆ ಕರೆದುಕೊಂಡು ಹೋಗುತ್ತಾನೆ. ವಾಕಿಂಗ್ ಇಂದ ಬಂದಕೂಡಲೇ ಬಾಲ ಜಗನ್ನಾಥ ಒಳ್ಳೆಯ ವ್ಯಕ್ತಿ ಎಂದು ಹೊಗಳುತ್ತಾನೆ. ಈ ಮಾತನ್ನು ಕೇಳಿದ ಗಿರಿಜಮ್ಮ ಶಾಕ್ ಆಗುತ್ತಾಳೆ.

  ಬಾಲನ ಆಕ್ಟಿಂಗ್‌ಗೆ ಜಗನ್ನಾಥ ಫಿದಾ

  ಬಾಲನ ಆಕ್ಟಿಂಗ್‌ಗೆ ಜಗನ್ನಾಥ ಫಿದಾ

  ಆಗ ಮತ್ತೆ ಜಗನ್ನಾಥ ಗಿಫ್ಟ್ ಕೊಡಿ ಎಂದು ಕೇಳುತ್ತಾನೆ. ಇದೇ ವೇಳೆಗೆ ಸತ್ಯ ಮತ್ತು ಕಾರ್ತಿಕ್ ಕೂಡ ಅಲ್ಲಿಗೆ ಬರುತ್ತಾರೆ. ಬಾಲ ಚೆಕ್ ಬುಕ್ ಅನ್ನು ತಂದು ಜಗನ್ನಾಥನನ್ನು ದೂರ ಕರೆದುಕೊಂಡು ಹೋಗುತ್ತಾನೆ. ಇದು ಪೋಸ್ಟ್ ಡೇಟೆಡ್ ಚೆಕ್, ಇನ್ನು ಮೂರು ತಿಂಗಳಾದ ಮೇಲೆಯೇ ಹಣ ಪಡೆಯಲು ಸಾಧ್ಯ ಎನ್ನುತ್ತಾನೆ. ಅದಕ್ಕೆ ಜಗನ್ನಾಥ ಪರವಾಗಿಲ್ಲ ಕೊಡಿ ಎಂದು ತೆಗೆದುಕೊಳ್ಳುತ್ತಾನೆ. ಬಾಲ ಬ್ಲಾಂಕ್ ಚೆಕ್ ಅನ್ನು ಕೊಟ್ಟಿರುತ್ತಾನೆ. ಇದನ್ನು ನೋಡಿ ಶಾಕ್ ಆಗಿದ್ದಲ್ಲದೇ ಎಲ್ಲರಿಗೂ ತೋರಿಸುತ್ತಾನೆ. ಮನೆಯ ಅಳಿಯ ಎಂದರೆ ಹೀಗಿರಬೇಕು ಎಂದ ಹೊಗಳುತ್ತಾನೆ. ಇದನ್ನೆಲ್ಲಾ ನೋಡಿ ಕಾರ್ತಿಕ್ ಮತ್ತು ಸತ್ಯ ಸುಮ್ಮನಿರುತ್ತಾರೆ.

  ಸತ್ಯ ಪ್ಲ್ಯಾನ್ ಸಕ್ಸಸ್ ಆಗ್ತಿದೆಯಾ..?

  ಸತ್ಯ ಪ್ಲ್ಯಾನ್ ಸಕ್ಸಸ್ ಆಗ್ತಿದೆಯಾ..?

  ಇನ್ನು ಸತ್ಯ, ಕಾರ್ತಿಕ್ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ. ದಿವ್ಯಾ ಹಾಗೂ ಬಾಲ ಎಷ್ಟು ರೊಮ್ಯಾಂಟಿಕ್ ಆಗಿ ಇದ್ದಾರೆ ಎಂದು ಹೇಳುತ್ತಾಳೆ. ಇದರಿಂದ ಕಾರ್ತಿಕ್ ಬೆಳಗ್ಗೆ ಸತ್ಯ ಏಳುವ ಮುನ್ನ ಕಾಫಿ ತಂದು ಕೊಡುತ್ತಾನೆ. ಆಗ ಸತ್ಯ ಮತ್ತೆ ಪ್ಲ್ಯಾನ್ ಮಾಡಿ ಕಾಫಿಗೆ ಸಕ್ಕರೆ ಇಲ್ಲ ಎಂದು ಹೇಳಿ ಕಾರ್ತಿಕ್‌ಗೆ ಟೇಸ್ಟ್ ಮಾಡಲು ಹೇಳುತ್ತಾಳೆ. ಕಾರ್ತಿಕ್ ರುಚಿ ನೋಡಿದ ಮೇಲೆ ಅವರು ಚೆನ್ನಾಗಿದೆ ಎಂದು ಕುಡಿಯುತ್ತಾಳೆ. ಇದೆಲ್ಲಾ ಬೇಕಂತಲೇ ಮಾಡಿದ್ದು ಎಂದು ಹೇಳುತ್ತಾಳೆ.

  ಸತ್ಯಗೆ ಕಾದಿದೆಯಾ ಗ್ರಹಚಾರಾ..?

  ಸತ್ಯಗೆ ಕಾದಿದೆಯಾ ಗ್ರಹಚಾರಾ..?

  ಇನ್ನು ಕೀರ್ತನಾ, ಸತ್ಯ ವಿರುದ್ಧ ದೊಡ್ಡ ಪ್ಲ್ಯಾನ್ ಮಾಡಿದ್ದಾಳೆ. ಮಹತಿಗೆ ಸೀತಾ ಬಳಿ ಬಂದು ಸುಳ್ಳು ಹೇಳುವಂತೆ ಹೇಳಿದ್ದಾಳೆ. ಹೀಗಾಗಿ ಮಹತಿ ಈಗ ಸೀತಾಳನ್ನು ನೋಡಲು ಬಂದಿದ್ದಾಳೆ. ಮಹತಿ ಏನು ಹೇಳುತ್ತಾಳೋ..? ಅದರಿಂದ ಸೀತಾ, ಸತ್ಯ ವಿರುದ್ಧ ಮತ್ತಷ್ಟು ಕೋಪ ಮಾಡಿಕೊಳ್ಳುತ್ತಾಳಾ..? ಇಲ್ಲ ಅವಳನ್ನ ಮನೆಯಿಂದ ಆಚೆ ಹಾಕುತ್ತಾಳಾ ಕಾದು ನೋಡಬೇಕಿದೆ.

  English summary
  sathya serial 27th october Episode Written Update. jagannatha forces bala to give gift. So bala gives blank cheque. This makes jagannatha more happy.
  Friday, October 28, 2022, 20:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X