Don't Miss!
- Lifestyle
11ಕ್ಕೂ ಅಧಿಕ ದೇಶಗಳಲ್ಲಿ ಮಂಕಿಪಾಕ್ಸ್ ಆತಂಕ: ಈ ರೋಗದ ಲಕ್ಷಣಗಳೇನು? ಭಾರತದಲ್ಲಿಯೂ ಕಾಣಿಸಿದೆಯೇ?
- News
ವಿಜಯೇಂದ್ರ ಮಿನಿಸ್ಟರ್ ಆದರೆ ಏನು ಬದಲಾವಣೆ ಆಗುತ್ತೆ? ಎಚ್. ವಿಶ್ವನಾಥ್ ಪ್ರಶ್ನೆ
- Automobiles
ಹೊಸ ನವೀಕರಣ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಜ್ಜಾದ ಹುಂಡೈ ವೆನ್ಯೂ ಫೇಸ್ಲಿಫ್ಟ್
- Sports
ಐಪಿಎಲ್ 2022: ಪಂಜಾಬ್ vs ಹೈದರಾಬಾದ್; ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ XI
- Technology
ಗ್ರಾಹಕರಿಗೆ ಬಿಗ್ ಶಾಕ್!..ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ!
- Finance
ಆಧಾರ್ ಕಾರ್ಡ್ ಮೂಲಕ ತ್ವರಿತ ಸಾಲ ಪಡೆಯುವುದು ಹೇಗೆ?
- Education
IAF Recruitment 2022 : ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುತ್ತಿ, ಬಳಸಿ ಸತ್ಯಗೆ ಸುತ್ತಿಕೊಂಡ ಮದುವೆ ನಂಟು: ಕಾರ್ತಿಕ್ ತಾಳಿ ಕಟ್ಟೋದೊಂದೆ ಬಾಕಿ!
ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಮದುವೆ ನಿಂತು ಹೋಗುತ್ತೇನೋ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ನಿಶ್ಚಯವಾದ ಮುಹೂರ್ತದಲ್ಲೇ ಮದುವೆ ಮಾಡಿ ಎಂದು ಗುರುಗಳು ತಿಳಿಸಿದ್ದಾರೆ. ಸತ್ಯ ಜೊತೆಗೆ ಮದುವೆ ಮಾಡಿಸಲು ರಾಮಚಂದ್ರ ರಾಯರು ನಿರ್ಧಾರ ಮಾಡಿದ್ದಾರೆ.
ಪುರೋಹಿತರು ಮದುವೆ ಹುಡುಗಿ ಇಲ್ಲ ಎಂದ ಮೇಲೆ ಮದುವೆಯೇ ನಡೆಯೊಲ್ಲ ಅನಿಸುತ್ತಿದೆ ನಾನಿನ್ನು ಹೊರಡುತ್ತೇನೆ ಎನ್ನುತ್ತಾರೆ. ಆಗ ರಾಮಚಂದ್ರ ರಾಯರು ಬಂದು ಈ ಮದುವೆ ನಡೆಯುತ್ತೆ ಯಾರೂ ಎಲ್ಲೂ ಹೋಗಬೇಡಿ, ತಾಳ್ಮೆಯಿಂದ ಇರಿ ಎನ್ನುತ್ತಾರೆ. ಹುಡುಗಿ ಬರುತ್ತಾಳೆ ಎಂದು ಹೇಳಿ ಹೋಗುತ್ತಾರೆ.
ಕೀರ್ತನಾ
ಪ್ಲ್ಯಾನ್
ಠುಸ್...
ಸತ್ಯ,
ಕಾರ್ತಿಕ್
ಮದುವೆಗೆ
ಅಪ್ಪನ
ನಿರ್ಧಾರ!
ಇತ್ತ ಗಿರಿಜಮ್ಮ ಎದೆ ಬಡಿದುಕೊಂಡು ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಯಿತಲ್ಲ ಎಂದು ಗೋಳಾಡುತ್ತಿದ್ದಾರೆ. ಸತ್ಯ ನೀನು ಇಷ್ಟೆಲ್ಲಾ ಕಷ್ಟ ಪಟ್ಟು ದಿವ್ಯಾ ಮದುವೆ ಮಾಡೋಕೆ ಹೊರಟರೆ ಅವಳು ಮಾಡಿದ ಕೆಲಸ ಎಂಥಹದ್ದು ನೋಡು ನಮ್ಮನ್ನೆಲ್ಲಾ ಒಟ್ಟಿಗೆ ಸಾಯಿಸಿ ಬಿಟ್ಟಳು ಎಂದು ಜಾನಕಿ ಹೇಳುತ್ತಾಳೆ. ಆಗ ಸತ್ಯ ಕೋಪ ಮಾಡಿಕೊಳ್ಳೋದಿಲ್ಲ.

ಸತ್ಯ-ಕಾರ್ತಿಕ್ ಪ್ರೀತಿ ವಿಚಾರ ಬಹಿರಂಗ!
ಸತ್ಯ ಹಾಗೂ ಅಮೂಲ್ ಬೇಬಿ ಪ್ರೀತಿ ವಿಚಾರವನ್ನು ರಾಮಚಂದ್ರ ರಾಯರ ಬಳಿ ಮಾತನಾಡಬೇಕು. ಕಾರ್ತಿಕ್ ಹಾಗೂ ಸತ್ಯಗೆ ಮದುವೆ ಮಾಡಿಸಬೇಕು ಎಂದು ಕಾಕ್ರೋಜ್ ಹಾಗೂ ಸ್ನೇಹಿತರು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಈ ವಿಚಾರವನ್ನು ಮಾತನಾಡಲು ರಾಮಚಂದ್ರ ರಾಯರನ್ನು ಭೇಟಿ ಮಾಡಿದ್ದಾರೆ. ಹಣ್ಣು-ಹೂವು ಹಿಡಿದುಕೊಂಡು ಬಂದಿರುವ ಹುಡುಗರು ರಾಮಚಂದ್ರ ರಾಯರಿಗೆ ಕೊಡಲು ಮುಂದಾಗಿದ್ದು, ಈಗ ಮದುವೆ ನಿಲ್ಲುವ ಬದಲು ಸತ್ಯ ಅವರ ಜೊತೆಗೆ ಮದುವೆ ಮಾಡಿಸಬಹುದಲ್ವಾ ಎಂದು ಹೇಳುತ್ತಾರೆ. ಹುಡುಗರ ಮಾತು ಕೇಳಿದ ರಾಮಚಂದ್ರ ರಾಯರು ಒಂದು ಕ್ಷಣ ಶಾಕ್ ಆಗುತ್ತಾರೆ.
ಮದುವೆ
ಬಿಟ್ಟು
ಓಡಿ
ಹೋದ
ದಿವ್ಯಾ:
ಸತ್ಯ
ಮೇಲೆ
ಕಾರ್ತಿಕ್
ಅನುಮಾನ!

ಸತ್ಯ ಸ್ನೇಹಿತರಿಂದ ರಾಮಚಂದ್ರ ರಾಯರಿಗೆ ತಾಂಬೂಲ!
ಹುಡುಗರು ನಾವು ಸತ್ಯ ತಮ್ಮಂದಿರು., ತಾಂಬುಲ ಕೊಡುತ್ತಿದ್ದೇವೆ ಇಲ್ಲ ಎನ್ನದೇ ತೆಗೆದುಕೊಳ್ಳಿ. ಈ ಮೂಲಕನಾದರೂ ಸತ್ಯ ಪ್ರೀತಿಗೆ ಜಯ ಸಿಗುತ್ತೆ. ಕಾರ್ತಿಕ್ ಕೂಡ ಸತ್ಯಳನ್ನ ಇಷ್ಟಪಟ್ಟಿದ್ದಾನೆ ಎನ್ನುತ್ತಾರೆ. ಆದರೆ. ರಾಮಚಂದ್ರ ರಾಯರು ಸುಮ್ಮನೆ ಹೋಗುತ್ತಾರೆ. ಆದರೆ ಹುಡುಗರು ಅಷ್ಟಕ್ಕೇ ಸುಮ್ಮನಾಗದೇ, ಆವತ್ತು ಮಂಗಳಮುಖಿಗೆ ಸಹಾಯ ಮಾಡಿದ್ದು ಸತ್ಯ, ಆದರೆ ಕಾರ್ತಿಕ್ ದಿವ್ಯಾ ನ ನೋಡಿ ಕನ್ಫ್ಯೂಸ್ ಆಗಿದ್ದಾರೆ. ಸತ್ಯ ಗುಣಗಳನ್ನು ಕಾರ್ತಿಕ್ ಒಪ್ಪಿಕೊಂಡಿರುವುದು. ಈ ಮದುವೆಯಾಗುವುದರಿಂದ ಎಲ್ಲವೂ ಸರಿ ಹೋಗುತ್ತೆ. ಎರಡೂ ಜೋಡಿಗಳೂ ಒಂದಾಗುತ್ತವೆ ಎನ್ನುತ್ತಾರೆ. ಆದರೆ ರಾಮಚಂದ್ರ ರಾಯರು ತಾಂಬೂಲ ತೆಗೆದುಕೊಳ್ಳದೆ ಹಾಗೆ ಹೊರಟು ಬಿಡುತ್ತಾರೆ.

ಕಣ್ಣೀರು ಹಾಕುತ್ತಿರುವ ಜಾನಕಿ, ಗಿರಿಜಮ್ಮ!
ಇತ್ತ ಜಾನಕಿ ಹಾಗೂ ಗಿರಿಜಮ್ಮ ನೊಂದುಕೊಂಡಿರುತ್ತಾರೆ. ಸತ್ಯ ಸಮಾಧಾನ ಮಾಡುತ್ತಿರುತ್ತಾಳೆ. ಆದರೆ ಜಾನಕಿ, ಇಲ್ಲ ಸತ್ಯ, ಒಬ್ಬ ಮಗಳಿಗೋಸ್ಕರ ಮತ್ತೊಬ್ಬಳು ಮಗಳ ಬಾಳನ್ನು ಕತ್ತಲೆಗೆ ದೂಡಿ ತಪ್ಪು ಮಾಡಿದ್ವಿ. ಆದರೆ ಆ ದೇವರು ನಮಗೆ ಸರಿಯಾಗೇ ಪಾಠ ಕಲಿಸಿದ್ದಾನೆ. ನಡೀರಿ ಬೀಗರು ಬರುವ ಮುಂಚೆ ಹೊರಟು ಬಿಡೋಣ. ಇನ್ನು ಹೆಚ್ಚು ಹೊತ್ತು ನಾವು ಇಲ್ಲಿರುವುದು ಬೇಡ ಎಂದು ಜಾನಕಿ ಹೇಳುತ್ತಾಳೆ. ಅಷ್ಟರಲ್ಲಿ ರಾಮಚಂದ್ರ ರಾಯರು ಬಂದು, ಕಣ್ತಪ್ಪಿಸಿ ಹೋಗಬೇಕು ಎಂದು ಕೊಂಡಿದ್ದೀರಾ. ಎಲ್ಲಿಗೆ ಹೊರಟಿದ್ದೀರಾ ಎಂದು ರಾಮಚಂದ್ರ ರಾಯರು ಕೇಳುತ್ತಾರೆ. ಆಗ ಜಾನಕಿ ಹಾಗೂ ಗಿರಿಜಮ್ಮ ಇನ್ನಿಲ್ಲಿದ್ದು ನಾವೇನು ಮಾಡೋದು, ನಿಮ್ಮ ಮನೆ ಆಸೆಪಟ್ಟು ತಪ್ಪು ಮಾಡಿದ್ವಿ ಎಂದು ಕ್ಷಮೆ ಕೇಳುತ್ತಾರೆ.
ಹಿಟ್ಲರ್
ಕಲ್ಯಾಣ:
ಅತ್ಯಾಚಾರದ
ಆರೋಪದಿಂದ
ತಂದೆಯನ್ನು
ಬಚಾವ್
ಮಾಡುತ್ತಾಳಾ
ಲೀಲಾ
?

ಕಾರ್ತಿಕ್ ಮದುವೆ ಆಗುವಂತೆ ಸತ್ಯ ಬಳಿ ಅಪ್ಪನ ಮನವಿ!
ಆಗ ರಾಮಚಂದ್ರ ರಾಯರು ಇಟ್ಟ ಮುಹೂರ್ತದಲ್ಲೇ ಮದುವೆ ನಡೆಯುತ್ತೆ ಗಂಡು-ಹೆಣ್ಣಿಗೆ ಆಶೀರ್ವಾದ ಮಾಡಿನೇ ಹೋಗಬೇಕು ಎನ್ನುತ್ತಾರೆ. ನಡೆದ ಎಲ್ಲಾ ಘಟನೆಗಳು ನಾವೆಲ್ಲಾ ನೆಪವಷ್ಟೇ. ನಿಮ್ಮ ಮೊಮ್ಮೊಗಳನ್ನು ನಮ್ಮ ಮನೆ ತುಂಬಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದೀನಿ. ಈಗಲೂ ಆ ಮಾತನ್ನು ಉಳಿಸಿಕೊಳ್ಳೋದಕ್ಕೆ ಬಂದಿದ್ದೀನಿ ಎಂದು ರಾಮಚಂದ್ರ ರಾಯರು ಹೇಳುತ್ತಾರೆ. ಅಲ್ಲಿಗೆ ಸತ್ಯ ಹಾಗೂ ಕಾರ್ತಿಕ್ ಮದುವೆ ನಡೆಯೋದು ಪಕ್ಕಾ ಆಗಿದೆ. ಆದರೆ ಈ ಮದುವೆಗೆ ಸೀತಾ ಹಾಗೂ ಕಾರ್ತಿಕ್ ಒಪ್ಪುತ್ತಾರಾ ಕಾದು ನೋಡಬೇಕಿದೆ.