For Quick Alerts
  ALLOW NOTIFICATIONS  
  For Daily Alerts

  ಸಂಸತ್ ಮಂಡಳಿ ಜೊತೆ ಅಮೀರ್ ಖಾನ್ ಸಂವಾದ

  |

  ಸತ್ಯಮೇವ ಜಯತೆ ಎಂಬ ಟಿವಿ ಟಾಕ್ ಶೋ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆದಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರನ್ನು ಸಂಸದೀಯ ಮಂಡಳಿ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಂದು (ಜೂನ್ 21, 2012) ತಮ್ಮ ತಂಡದೊಂದಿಗೆ ಅಮೀರ್ ಖಾನ್ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

  ವೈದ್ಯಕೀಯ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳನ್ನು ಅದನ್ನು ಅನಭವಿಸಿದವರು ಹಾಗೂ ಅವರಲ್ಲಿರುವ ಸಾಕ್ಷಿ ಸಮೇತ ಅಮೀರ್ ಖಾನ್ ಬಹಿರಂಗಗೊಳಿಸಿದ್ದರು. ಇದರಿಂದ ಭಾರತೀಯ ವೈದ್ಯಕೀಯ ಸಂಘ (IMA) ಹಾಗೂ ಕೆಲವು ವೈದ್ಯರು ನಟ ಅಮೀರ್ ಖಾನ್ ವಿರುದ್ಧ ತಿರುಗಿಬಿದ್ದಿದ್ದರು. ಅಮೀರ್ ಬಹಿರಂಗ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಆದರೆ ಅಮೀರ್ ಅದಕ್ಕೆ ಕ್ಯಾರೇ ಅಂದಿರಲಿಲ್ಲ.

  ಧಾರಾವಾಹಿಯ ಆ ವಿಶೇಷ ಸಂಚಿಕೆಗೆ ನಡೆಸಿದ ಸಂಶೋಧನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಬಿಜೆಪಿ ರಾಜ್ಯಸಭೆ ಸದಸ್ಯ ಹಾಗೂ ಸಂಸದೀಯ ವಾಣಿಜ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಕುಮಾರ್, ಅಮೀರ್ ಖಾನ್ ಅವರನ್ನು ಆಹ್ವಾನಿಸಿದ್ದಾರೆ. ಸಾಕ್ಷಿ ಸಮೇತ ಅಮೀರ್ ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

  ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ವೈದ್ಯಕೀಯ ಸಮಿತಿ (MMC), ಇದೇ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಪ್ರಸಾರವಾದ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದ ಕಾರ್ಯಕ್ರಮ ವೀಕ್ಷಿಸಿದ ನಂತರ 13 ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಹೀಗಾಗಿ ಸಾಕಷ್ಟು ವೈದ್ಯರು ಅಮೀರ್ ವಿರುದ್ಧ ತಿರುಗಿಬಿದ್ದಿದ್ದಾರೆ.

  ಇಂದು ನಡೆಯುವ ಸಂವಾದ ಕಾರ್ಯಕ್ರಮದ ನಂತರ ನಟ ಅಮೀರ್ ಖಾನ್ ಹಾಗೂ ಸತ್ಯಮೇವ ಜಯತೆ ಶೋ, ಮುಂದಿನ ದಿನಗಳಲ್ಲಿ ಯಾವ ರೀತಿಯ ಕಾರ್ಯಕ್ರಮ ನೀಡಬಹುದೆಂಬ ಕುತೂಹಲ ಎಲ್ಲರಲ್ಲಿದೆ. ಒಟ್ಟಿನಲ್ಲಿ, ಸತ್ಯಮೇವ ಜಯತೆ ಮೂಲಕ ವೈದ್ಯಲೋಕಕ್ಕೆ ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದೆ. ಹಾಗೇ, ಸಾರ್ವಜನಿಕರ ಒಳಿತಿಗೆ ಹೋರಾಡುವಾಗ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಅನುಭವ ಅಮೀರ್ ಗೂ ಆಗಿದೆ. (ಏಜೆನ್ಸೀಸ್)

  English summary
  Bollywood superstar, Aamir Khan, whose show Satyamave Jayate garnered much attention for its episodes throwing light on social issues, will address the Parliament on Thursday, on 21st June 2012, over the malpractices in the medical sector.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X