For Quick Alerts
  ALLOW NOTIFICATIONS  
  For Daily Alerts

  ಬ್ರಾ ಸೈಜ್ ಕೇಳಿದ ನೆಟ್ಟಿಗನಿಗೆ ನಟಿ ಸಯಂತನಿ ಕೊಟ್ಟ ಉತ್ತರ ಹೀಗಿದೆ

  |

  ಸಿನಿ ಸೆಲೆಬ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಬಟ್ಟೆಯ ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಿರುತ್ತಾರೆ. ನಟಿಮಣಿಯರ ಪೋಸ್ಟ್ ಗಳಿಗೆ ನೆಟ್ಟಿಗರು ಚಿತ್ರ-ವಿಚಿತ್ರ ಕಾಮೆಂಟ್ ಗಳನ್ನು ಮಾಡಿ, ಕಾಲೆಳೆಯುತ್ತಿರುತ್ತಾರೆ. ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇನ್ನು ಕೆಲವು ನಟಿಯರು ಅಲ್ಲೇ ಸರಿಯಾಗಿ ತಿರುಗೇಟು ನೀಡುತ್ತಾರೆ.

  ಹಿಂದಿ ಕಿರುತೆರೆ ಖ್ಯಾತ ನಟಿ, ಮಹಾಭಾರತದ ಧಾರಾವಾಹಿಯ ಸತ್ಯಾವತಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಸಯಂತನಿಗೆ ಘೋಷ್ ಗೂ ಇದೇ ರೀತಿಯ ವಿಚಿತ್ರ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಸಯಂತನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನಗಾದ ಕಹಿ ಅನುಭವದ ಬಗ್ಗೆ ದೀರ್ಘವಾಗಿ ಬರೆದುಕೊಂಡಿದ್ದಾರೆ.

  ಶಿವಾನಿ-ತ್ರಿಶೂಲ್ ಮದುವೆ: ಸ್ಪಷ್ಟನೆ ನೀಡಿದ ನಟ-ನಟಿಶಿವಾನಿ-ತ್ರಿಶೂಲ್ ಮದುವೆ: ಸ್ಪಷ್ಟನೆ ನೀಡಿದ ನಟ-ನಟಿ

  ಮಾನಸಿಕ ಆರೋಗ್ಯವು ಆರೋಗ್ಯದ ಪ್ರಮುಖ ಅಂಶವಾಗಿದೆ. ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಎನ್ನುವ ಜೊತೆಗೆ, ಸಂವಾದದಲ್ಲಿ ವ್ಯಕ್ತಿಯೊಬ್ಬ ಬ್ರಾ ಸೈಜ್ ಕೇಳಿದ. ನಾನು ಆ ವ್ಯಕ್ತಿಗೆ ಸರಿಯಾದ ಉತ್ತರ ಕೊಟ್ಟಿದ್ದೇನೆ. ಆದರೂ ಈ ಬಗ್ಗೆ ಮತ್ತಷ್ಟು ಮಾತನಾಡಲು ಬಯಸುತ್ತೇನೆ. ಬಾಡಿ ಶೇಮಿಂಗ್ ಮಾಡುವುದು ತಪ್ಪು, ಅದರಲ್ಲೂ ಹೆಣ್ಣಿನ ಸ್ತನಗಳ ಬಗ್ಗೆ ಅಷ್ಟೊಂದು ಮೋಹ ಏನು?' ಎಂದು ಹೇಳಿದ್ದಾರೆ.

  'ಹೆಂಗಸರು ನಾವು ನಮ್ಮನ್ನು ಪ್ರೀತಿಸಲು ಮತ್ತು ನಮಗಾಗಿ ನಿಲ್ಲಲು ಪ್ರಾರಂಭಿಸುವ ಸಮಯವಿದು. ಬೇರೆ ಯಾರು ಆಗುವುದಿಲ್ಲ. ಮುಂದಿನ ಬಾರಿ ನನ್ನ ಕಪ್ ಸೈಜ್ ಕೇಳಿದಾಗ ನನಗೆ ಏನು ಹೇಳಬೇಕೆಂದು ಗೊತ್ತಿದೆ. ನಾನು ದೊಡ್ಡ ಕಪ್ ಅನ್ನು ಇಷ್ಟಪಡುತ್ತೇನೆ. ಕಾಫಿ ಇಷ್ಟಪಡುತ್ತೇನೆ ಎಂದಮೇಲೆ ದೊಡ್ಡದನ್ನೇ ಬಯಸುತ್ತೇನೆ' ಎಂದಿದ್ದಾರೆ.

  ಹಿಂದಿ ಕಿರುತೆರೆ ಲೋಕದಲ್ಲಿ ಮನೆಮಾತಾಗಿರುವ ನಟಿ ಸಯಂತನಿ ಮಹಾಭಾರತ್, ನಾಗಿನ್-4, ಸಂಜೀವನಿ-2 ಸೇರಿದಂತೆ ಪ್ರಮುಖ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ಮಿಂಚಿದ್ದಾರೆ.

  English summary
  Actress Sayantani Ghosh powerful post by troll about bra size.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X