For Quick Alerts
  ALLOW NOTIFICATIONS  
  For Daily Alerts

  ಇಂಡಿಯಾ ಗಾಟ್ ಟ್ಯಾಲೆಂಟ್ ಶೋಗೆ ಉಜಿರೆ ವಿದ್ಯಾರ್ಥಿಗಳು

  By ಚಂದ್ರಶೇಖರ್ ಎಸ್ ಅಂತರ, ಉಜಿರೆ
  |

  ಕಲರ್ಸ್ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಇಂಡಿಯಾ ಗಾಟ್ ಟ್ಯಾಲೆಂಟ್(India's Got Talent) ಮತ್ತೆ ಆರಂಭಗೊಳ್ಳುತ್ತಿದೆ. ಈ ರಿಯಾಲಿಟಿ ಶೋನ ಐದನೇ ಆವೃತ್ತಿ ವಿಶಿಷ್ಟವಾಗಿ ರೂಪುಗೊಂಡಿದ್ದು, ದರ್ಬಾರ್ ಸೆಟ್ ನಲ್ಲಿ ಜಡ್ಜ್ ಗಳಾದ ಕಿರಣ್ ಖೇರ್, ಕರಣ್ ಜೋಹರ್ ಹಾಗೂ ಮಲೈಕಾ ಅರೋರಾ ಖಾನ್ ಕಾಣಿಸಿಕೊಂಡಿದ್ದಾರೆ. ಈ ಜನಪ್ರಿಯ ಶೋಗೆ ಕನ್ನಡ ಮಣ್ಣಿನ ಪ್ರತಿಭೆಗಳು ಮತ್ತೆ ಆಯ್ಕೆಗೊಂಡಿದ್ದಾರೆ.

  ಅನಾರ್ಕಲಿ ಡ್ರೆಸ್ ತೊಟ್ಟ ಮಲೈಕಾ, ರೇಷ್ಮೆ ಸೀರೆಯುಟ್ಟ ಕಿರಣ್, ಕಪ್ಪು ಬಣ್ಣದ ಜೋಧ್ ಪುರಿ ದಿರಿಸಿನಲ್ಲಿ ಕರಣ್ ಸಕತ್ ಆಗಿ ಕಾಣುತ್ತಿದ್ದಾರೆ. ದರ್ಬಾರ್ ನಲ್ಲಿ ಕುಳಿತು ಪ್ರತಿಭಾವಂತ ಅಡಿಷನ್ ತೆಗೆದುಕೊಳ್ಳುವ ಕಾರ್ಯಕ್ರಮದ ಪ್ರೋಮೋ ಇತ್ತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.

  ಅದ್ಭುತ ಪ್ರತಿಭೆಯುಳ್ಳ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಿದ್ದಾರೆ. ರಾಯಲ್ ಲುಕ್ ವುಳ್ಳ ಈ ರಿಯಾಲಿಟಿ ಶೋಗಾಗಿ ದೇಶದಾದ್ಯಂತ ಆಡಿಷನ್ ನಡೆದಿದ್ದು ಈಗಾಗಲೇ ಅನೇಕ ತಂಡಗಳು ಮುಂದಿನ ಸುತ್ತಿಗೆ ತೇರ್ಗಡೆ ಪಡೆದಿವೆ. ಇದರಲ್ಲಿ ಕರ್ನಾಟಕದ ತಂಡವೂ ಸ್ಪರ್ಧಿಸುತ್ತಿದೆ. ವಿವರ ಮುಂದೆ ಓದಿ..

  ಉಜಿರೆ ವಿದ್ಯಾರ್ಥಿಗಳು ಆಯ್ಕೆ

  ಉಜಿರೆ ವಿದ್ಯಾರ್ಥಿಗಳು ಆಯ್ಕೆ

  ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಕಲರ್ಸ್ ವಾಹಿನಿ ಆಯೋಜಿಸುತ್ತಿರುವ ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಮೊದಲ ಸುತ್ತಿಗೆ ನೇರವಾಗಿ ಆಯ್ಕೆಯಾಗಿ ಪ್ರದರ್ಶನ ನೀಡಲು ಮುಂಬೈಗೆ ತೆರಳಿದ್ದಾರೆ.

  ರಾಷ್ಟ್ರಮಟ್ಟದ ಸ್ಪರ್ಧೆಗೆ

  ರಾಷ್ಟ್ರಮಟ್ಟದ ಸ್ಪರ್ಧೆಗೆ

  ಇತ್ತೀಚೆಗಷ್ಟೇ ಮಂಗಳೂರಿನ ನಮ್ಮ ಟಿ.ವಿ. ವಾಹನಿಯಲ್ಲಿ ಮುಕ್ತಾಯಗೊಂಡ 'ಡ್ಯಾನ್ಸ್ ಟು ಡ್ಯಾನ್ಸ್' ರಿಯಾಲಿಟಿ ಡ್ಯಾನ್ಸ್ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರಾದ ಈ ನೃತ್ಯ ತಂಡ ನೇರವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಚಿತ್ರದಲ್ಲಿ : ಚಿತ್ರಕರ್ಮಿ ಕರಣ್ ಜೋಹರ್

  15 ವಿದ್ಯಾರ್ಥಿಗಳ ತಂಡ

  15 ವಿದ್ಯಾರ್ಥಿಗಳ ತಂಡ

  ಉಜಿರೆ ಎಸ್. ಡಿ. ಎಂ ಕಾಲೇಜಿನ 15 ವಿದ್ಯಾರ್ಥಿಗಳನ್ನು ಒಳಗೊಡ ನೃತ್ಯ ತಂಡ ತಮ್ಮ ನೃತ್ಯ ಪ್ರತಿಭೆಯನ್ನು ಕಲರ್ಸ್ ವಾಹಿನಿಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಹೊರ ಚೆಲ್ಲಲಿದ್ದಾರೆ. ಬೆಳ್ತಂಗಡಿಯ ಬೀಟ್ ಬೌನ್ಸರ್ಸ್ ಸಂಸ್ಥೆ ವಿದ್ಯಾರ್ಥಿಗಳ ತಂಡಕ್ಕೆ ನೃತ್ಯ ತರಬೇತಿ ನೀಡಲಿದೆ. ಚಿತ್ರದಲ್ಲಿ: ನಟಿ ಕಿರಣ್ ಖೇರ್

  ಕುಂಚ ಕಲಾವಿದ ವಿಲಾಸ್ ನಾಯಕ್

  ಕುಂಚ ಕಲಾವಿದ ವಿಲಾಸ್ ನಾಯಕ್

  ಈ ಹಿಂದೆ ಇದೇ ರಿಯಾಲಿಟಿ ಶೋನಲ್ಲಿ ಉಜಿರೆಯ ವಿಲಾಸ್ ನಾಯಕ್ ಅವರು ತಮ್ಮ ಕುಂಚದ ಕಲೆಯನ್ನು ಕಲರ್ಸ್ ವಾಹಿನಿಯ ಪ್ರದರ್ಶಿಸಿ ಅಂತಿಮ ಘಟ್ಟಕ್ಕೆ ತಲುಪಿದ ಐವರಲ್ಲಿ ಒಬ್ಬರಾಗಿದ್ದರು. ಕುದ್ರೋಳಿಯ ವಿಶಿಷ್ಟ ಜಾದೂಗಾರ ಗಣೇಶ್ ಅವರು ಕೂಡಾ ಸ್ಪರ್ಧೆಯ ಅಂತಿಮ ಸುತ್ತು ತಲುಪಿದ್ದರು. ಚಿತ್ರದಲ್ಲಿ : ಮಲೈಕಾ ಅರೋರಾ ಖಾನ್

  ಕಲಾವಿದ ವಿಲಾಸ್

  ತ್ವರಿತ ಗತಿಯಲ್ಲಿ ಚಿತ್ರ ರಚಿಸುವುದರಲ್ಲಿ ವಿಲಾಸ್ ಸಿದ್ದಹಸ್ತರು. ಅದರಲ್ಲೂ ತಲೆಕೆಳಗಾಗಿ ಚಿತ್ರವನ್ನು ರಚಿಸುವ ರೀತಿ ಅನನ್ಯ. ವಿಲಾಸ್ ಅವರ ಪ್ರತಿಭೆ ಬಗ್ಗೆ ತಿಳಿಯಲು ಸುವರ್ಣ ಟಿವಿ ಪ್ರಶಸ್ತಿ ಸಮಾರಂಭದ ವಿಡಿಯೋ ನೋಡಿ..

  ಇಂಡಿಯಾ ಗಾಟ್ ಟ್ಯಾಲೆಂಟ್ ನ ಬಹು ಜನಪ್ರಿಯ ಗಬ್ಬರ್ ಸಿಂಗ್ ಚಿತ್ರ ರಚನೆ ವಿಡಿಯೋ ಕೂಡಾ ತಪ್ಪದೇ ನೋಡಿ

  English summary
  Sri Dharmasthala Manjunatha College students team from Ujire, Karnataka got selected to Colors' popular talent reality show, India's Got Talent 5.The Popular reality show is back with fifth season and Royal Trio - Karan Johar, Malaika, Kiron will be adjudging the talented Indians

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X