For Quick Alerts
  ALLOW NOTIFICATIONS  
  For Daily Alerts

  ಕೋಟಿ ಗೆದ್ದ ಮೋಹಿತಾ ಶರ್ಮಾ ಏಳು ಕೋಟಿ ಗೆಲ್ಲದಂತೆ ಮಾಡಿದ ಪ್ರಶ್ನೆ ಇದು

  |

  2000 ರಲ್ಲಿ ಪ್ರಾರಂಭವಾಗಿ ಈ ವರೆಗೆ 12 ಸೀಸನ್ ಪ್ರಸಾರವಾಗಿರುವ ಕೋನ್ ಬನೇಗಾ ಕರೋರ್‌ಪತಿ ಕಾರ್ಯಕ್ರಮ ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಬದಲಿಗೆ ಅದರ ವೀಕ್ಷಕರು ಹೆಚ್ಚಾಗುತ್ತಲೇ ಇದ್ದಾರೆ.

  ಅಮಿತಾಬ್ ಬಚ್ಚನ್ ನಡೆಸಿಕೊಡುವ ಈ ಶೋ ಹಲವಾರು ಮಂದಿಯನ್ನು ಕೋಟ್ಯಧೀಶರನ್ನಾಗಿಸಿದೆ. ಸಾವಿರಾರು ಮಂದಿಗೆ ಲಕ್ಷಾಂತರ ಹಣ ಮಾಡಿಕೊಟ್ಟಿದೆ. ಈಗಲೂ ಮಾಡಿಕೊಡುತ್ತಿದೆ.

  ಈ ಬಾರಿ ಕೆಬಿಸಿಯ 12ನೇ ಸೀಸನ್‌ ನಡೆಯುತ್ತಿದ್ದು, ಈವರೆಗೆ ಇಬ್ಬರು ಕೋಟ್ಯಧಿಪತಿಗಳಾಗಿದ್ದಾರೆ. ವಿಶೇಷವೆಂದರೆ ಇಬ್ಬರೂ ಮಹಿಳೆಯರು. ಮೊದಲಿಗೆ ದೆಹಲಿಯ ನಾಜಿಯಾ ನಸಿಮ್ ಕೋಟ್ಯಧಿಪತಿ ಆದರೆ, ನವೆಂಬರ್ 17 ರ ರಾತ್ರಿ ಪ್ರಸಾರವಾದ ಶೋನಲ್ಲಿ ಮೋಹಿತಾ ಶರ್ಮಾ ಕೋಟ್ಯಧಿಪತಿ ಆದರು.

  ಮೊದಲ ದಿನ 9 ಪ್ರಶ್ನೆಗಳಿಗೆ ಉತ್ತರಿಸಿದ್ದರು

  ಮೊದಲ ದಿನ 9 ಪ್ರಶ್ನೆಗಳಿಗೆ ಉತ್ತರಿಸಿದ್ದರು

  ವೃತ್ತಿಯಲ್ಲಿ ಐಪಿಎಸ್ ಅಧಿಕಾರಿ ಆಗಿರುವ ಮೋಹಿತಾ ಶರ್ಮಾ ನವೆಂಬರ್ 16 ರ ಎಪಿಸೋಡ್‌ನಲ್ಲಿ ಹಾಟ್‌ಸೀಟ್‌ ಗೆ ಬಂದು ಮೊದಲ ದಿನವೇ 9 ಪ್ರಶ್ನೆಗಳಿಗೆ ಉತ್ತರಿಸಿ ಕೋಟಿ ಗೆಲ್ಲುವತ್ತ ಮುಖ ಮಾಡಿದ್ದರು.

  ಸೀಸನ್‌ನ ಎರಡನೇ ಕೋಟ್ಯಧಿಪತಿ

  ಸೀಸನ್‌ನ ಎರಡನೇ ಕೋಟ್ಯಧಿಪತಿ

  ನಂತರ ನವೆಂಬರ್ 17 ರಂದು ಅದ್ಭುತವಾಗಿ ಆಡಿದ ಮೋಹಿತಾ ಶರ್ಮಾ ಒಂದು ಕೋಟಿ ಪ್ರಶ್ನೆಗೆ ಆರಾಮಾಗಿ ಉತ್ತರಿಸಿ, ಈ ಸೀಸನ್‌ನ ಎರಡನೇ ಕೋಟ್ಯಧಿಪತಿ ಎನಿಸಿಕೊಂಡರು. ಕೋಟಿ ಪ್ರಶ್ನೆಗೆ ಉತ್ತರಿಸುವ ವೇಳೆಗೆ ಅವರು ಎಲ್ಲಾ ಲೈಫ್‌ಲೈನ್‌ ಗಳನ್ನು ಬಳಸಿಬಿಟ್ಟಿದ್ದರು.

  ಏಳು ಕೋಟಿ ಪ್ರಶ್ನೆಯನ್ನು ಉತ್ತರಿಸದ ಮೋಹಿತಾ

  ಏಳು ಕೋಟಿ ಪ್ರಶ್ನೆಯನ್ನು ಉತ್ತರಿಸದ ಮೋಹಿತಾ

  ಏಳು ಕೋಟಿಯ ಪ್ರಶ್ನೆ ಎದುರಿಸಿದ ಮೋಹಿತಾ ಪ್ರಶ್ನೆಗೆ ಉತ್ತರ ನೀಡಲಾಗದೆ, ಆಟವನ್ನು ಕ್ವಿಟ್ ಮಾಡಿ ಒಂದು ಕೋಟಿ ಹಣದೊಂದಿಗೆ ಶೋ ದಿಂದ ಹೊರನಡೆದರು. 'ನನ್ನ ಪತಿ 20 ವರ್ಷದಿಂದ ಆ ಶೋಗೆ ಬರಲು ಯತ್ನಿಸುತ್ತಿದ್ದರು, ಆಗಿರಲಿಲ್ಲ, ನಾನು ಅವರ ಆಸೆ ಪೂರೈಸಿದೆ' ಎಂದಿದ್ದಾರೆ ಮೋಹಿತಾ.

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada
  ಏಳು ಕೋಟಿಯ ಪ್ರಶ್ನೆ ಇದು

  ಏಳು ಕೋಟಿಯ ಪ್ರಶ್ನೆ ಇದು

  'ಬಾಂಬೆಯ ವಾಡಿಯ ಗ್ರೂಫ್‌ನಿಂದ ನಿರ್ಮಾಣವಾಗಿ 1817 ರಲ್ಲಿ ಉದ್ಘಾಟನೆಗೊಂಡು, ಈಗಲೂ ಕೆಲಸ ಮಾಡುತ್ತಿರುವ ಹಳೆಯ ಯುದ್ಧನೌಕೆಯ ಹೆಸರೇನು?' ಇದು 7 ಕೋಟಿಯ ಪ್ರಶ್ನೆ. ಇದರ ಆಯ್ಕೆಗಳು. a) ಎಚ್‌ಎಂಎಸ್ ಮಿಂಡೇನ್, b) ಎಚ್‌ಎಂಎಸ್ ಕಾರ್ನ್‌ವಾಲೀಸ್, c) ಎಚ್‌ಎಂಎಸ್ ಟ್ರಿಂಕೊಮಾಲಿ, d) ಎಚ್‌ಎಂಎಸ್ ಮೀನೆ. ಇದರ ಸರಿ ಉತ್ತರ b) ಎಚ್‌ಎಂಎಸ್ ಟ್ರಿಂಕೊಮಾಲಿ.

  English summary
  Mohita Sharma became second crorepathi in KBC season 12. Here is the jackpot question for 7 crore, which Mohita did not answer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X