For Quick Alerts
  ALLOW NOTIFICATIONS  
  For Daily Alerts

  ಆರಂಭವೇ ಆಗದ ಧಾರಾವಾಹಿಯ ಪ್ರಸಾರ ಹೆಚ್ಚು ಮಾಡಿ ಎಂದು ಪ್ರೇಕ್ಷಕರ ಒತ್ತಾಯ

  By Pavithra
  |

  ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳ ಮನೆ ಮಹಿಳೆಯ ಮನಸ್ಸನ್ನು ಮಾತ್ರವಲ್ಲದೆ ಯುವಕ-ಯುವತಿಯರ ಮನಸ್ಸನ್ನು ಗೆದ್ದು ಬಿಟ್ಟಿವೆ. ಯಾವುದೇ ಸಿನಿಮಾಗಳಿಗೆ ಕಮ್ಮಿ ಇಲ್ಲದಂತೆ ಸ್ಕ್ರೀನ್ ಪ್ಲೇ, ಲವ್ ಸ್ಟೋರಿ ಇವುಗಳ ಜೊತೆಯಲ್ಲಿ ಸ್ಟಂಟ್ ಗಳನ್ನು ಸೀರಿಯಲ್ ನಲ್ಲಿ ಅಳವಡಿಸಿಕೊಂಡಿದ್ದಾರೆ.

  ಇನ್ನು ಕೆಲವು ವರ್ಗದ ಜನರು ಧಾರಾವಾಹಿಯನ್ನು ನೋಡಿ ಸಾಕಾಗಿ ದಯಮಾಡಿ ಧಾರಾವಾಹಿಯನ್ನು ನಿಲ್ಲಿಸು ದೇವರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ಸೀರಿಯಲ್ ಗಳ ಮೇಲಿರುವ ಬೇಸರವನ್ನು ವ್ಯಕ್ತ ಪಡಿಸಿದ್ದರು.

  15 ವರ್ಷಗಳ ಬಳಿಕ ಮತ್ತೆ ನಗಿಸಲು ಬರುತ್ತಿದ್ದಾನೆ ಹೊಸ 'ಪಾಪ ಪಾಂಡು' 15 ವರ್ಷಗಳ ಬಳಿಕ ಮತ್ತೆ ನಗಿಸಲು ಬರುತ್ತಿದ್ದಾನೆ ಹೊಸ 'ಪಾಪ ಪಾಂಡು'

  ಧಾರಾವಾಹಿಯನ್ನು ಪ್ರೀತಿಸುತ್ತಿದ್ದ ಮತ್ತು ವಿರೋಧ ಮಾಡುತ್ತಿದ್ದ ವೀಕ್ಷಕರು ಈ ಒಂದು ಧಾರಾವಾಹಿಯ ಪ್ರಸಾರವನ್ನು ಮಾತ್ರ ಹೆಚ್ಚು ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ .ಇನ್ನು ಪ್ರಸಾರವೇ ಆರಂಭವಾಗದ ಧಾರಾವಾಹಿಗೆ ಹೆಚ್ಚಿನ ಬೇಡಿಕೆ ಬಂದಿರುವುದು ಇದೇ ಮೊದಲು. ಧಾರಾವಾಹಿ ಪ್ರೊಮೋ ನೋಡಿಯೇ ವೀಕ್ಷಕರು ಸೀರಿಯಲ್ ಪ್ರಸಾರವನ್ನು ಹೆಚ್ಚು ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಆ ಧಾರಾವಾಹಿ ಯಾವುದು? ಯಾವ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರವಾಗಲಿದೆ. ಆರಂಭಕ್ಕೂ ಮೊದಲೇ ವೀಕ್ಷಕರಿಂದ ಇಷ್ಟೊಂದು ಬೇಡಿಕೆ ಪಡೆದುಕೊಳ್ಳಲು ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಬೇಡಿಕೆ ಹೆಚ್ಚಿಸಿಕೊಂಡ ಧಾರಾವಾಹಿ

  ಬೇಡಿಕೆ ಹೆಚ್ಚಿಸಿಕೊಂಡ ಧಾರಾವಾಹಿ

  ಸಾಮಾನ್ಯವಾಗಿ ಧಾರಾವಾಹಿಗಳು ಪ್ರಸಾರವಾದ ನಂತರ ಬೇಡಿಕೆ ಹೆಚ್ಚಿಸಿಕೊಳ್ಳುವುದು, ಬೇಡಿಕೆ ಕಡಿಮೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ .ಆದರೆ ಇಲ್ಲೊಂದು ಧಾರಾವಾಹಿ ಆರಂಭಕ್ಕೂ ಮುನ್ನವೇ ಹೆಚ್ಚು ಸಮಯ ಪ್ರಸಾರ ಮಾಡಿ ಎಂದು ವೀಕ್ಷಕರು ಮನವಿ ಮಾಡುತ್ತಿದ್ದಾರೆ.

  ಶುರುವಾಗುತ್ತಿದೆ ಮಹಾಕಾಳಿಯ ಕಥೆ

  ಶುರುವಾಗುತ್ತಿದೆ ಮಹಾಕಾಳಿಯ ಕಥೆ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ತಯಾರಾಗಿರುವ ಹೊಸ ಧಾರಾವಾಹಿ ಮಹಾಕಾಳಿ. ವಾಹಿನಿಯವರು ಈಗಾಗಲೇ ಧಾರಾವಾಹಿಯ ಪ್ರೋಮೋವನ್ನು ಬಿಡುಗಡೆ ಮಾಡಿದ್ದು ವಾರಾಂತ್ಯದಲ್ಲಿ ಸೀರಿಯಲ್ ಪ್ರಸಾರ ಮಾಡಲು ನಿರ್ಧಾರವನ್ನೂ ಮಾಡಿದ್ದಾರೆ. ಪ್ರೋಮೋ ನೋಡಿರುವ ವೀಕ್ಷಕರು ಪ್ರತಿನಿತ್ಯ ಮಹಾಕಾಳಿಯ ಕಥೆಯನ್ನು ಪ್ರಸಾರ ಮಾಡಿ ಎಂದು ಕೇಳಿಕೊಂಡಿದ್ದಾರೆ.

  ಮೆಗಾ ಸೀರಿಯಲ್ ಗಳನ್ನು ದಯಮಾಡಿ ನಿಲ್ಲಿಸಿ

  ಮೆಗಾ ಸೀರಿಯಲ್ ಗಳನ್ನು ದಯಮಾಡಿ ನಿಲ್ಲಿಸಿ

  ಪ್ರತಿ ನಿತ್ಯ 6 ರಿಂದ 8-30 ರ ವರೆಗೆ ಪ್ರಸಾರವಾಗುವ ಧಾರಾವಾಹಿಗಳನ್ನು ನಿಲ್ಲಿಸಿ. ಮಹಾಕಾಳಿ ಧಾರಾವಾಹಿಯನ್ನು ಪ್ರತಿನಿತ್ಯ ಪ್ರಸಾರ ಮಾಡಿ ಎಂದು ವಾಹಿನಿಯವರಿಗೆ ಪ್ರೇಕ್ಷಕರು ಹೊಸ ಆಲೋಚನೆ ನೀಡಿದ್ದಾರೆ.

  ವಾರಾಂತ್ಯದಲ್ಲಿ ಮಾತ್ರ ಪ್ರಸಾರ

  ವಾರಾಂತ್ಯದಲ್ಲಿ ಮಾತ್ರ ಪ್ರಸಾರ

  ಮಹಾಕಾಳಿ ಧಾರಾವಾಹಿ ಹೊಸ ರೀತಿಯ ಕಥೆಯನ್ನು ಹೊಂದಿದೆ. ಪ್ರೋಮೋದಲ್ಲಿಲೇ ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಶನಿ ಧಾರಾವಾಹಿಯನ್ನು ಮೆಚ್ಚಿಕೊಂಡಿರುವ ವೀಕ್ಷಕರು ಪೌರಾಣಿಕ ಕಥಾಹಂದ ಇರುವ ಸೀರಿಯಲ್ ಗಳನ್ನ ನೋಡಲು ಇಷ್ಟ ಪಡುತ್ತಿದ್ದಾರೆ.

  English summary
  Kannada serial viewers have requested that the extend Mahakali serial broadcast . Mahakali is a serial to be broadcast on Colors Kannada Channel

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X