»   » ಏ.1ರಿಂದ ಬೆಂಗ್ಳೂರಲ್ಲಿ ಸೆಟ್ ಟಾಪ್ ಬಾಕ್ಸ್ ಕಡ್ಡಾಯ

ಏ.1ರಿಂದ ಬೆಂಗ್ಳೂರಲ್ಲಿ ಸೆಟ್ ಟಾಪ್ ಬಾಕ್ಸ್ ಕಡ್ಡಾಯ

Posted By:
Subscribe to Filmibeat Kannada
Set Top Box Mandatory
ಕೇಬಲ್ ಆಪರೇಟರ್ ನಿಂದ ಇನ್ನೂ ಸೆಟ್ ಟಾಪ್ ಬಾಕ್ಸ್ ಹಾಕಿಸಿಕೊಂಡಿಲ್ಲವೇ? ಹಾಗಿದ್ದರೆ ಮಾರ್ಚ್ 31, 2013ರೊಳಗೆ ಸೆಟ್ ಟಾಪ್ ಬಾಕ್ಸ್ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ನೆಚ್ಚಿನ ಕಾರ್ಯಕ್ರಮಗಳು, ಸೀರಿಯಲ್ ಗಳು ಏಪ್ರಿಲ್ 1ರಿಂದ ಟಿವಿ ಬಂದ್ ಆಗುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಬಂಧನೆ ಮೇರೆಗೆ ಮಾರ್ಚ್ 31, 2013 ರಿಂದ ಸೆಟ್ ಟಾಪ್ ಬಾಕ್ಸ್ ಇಲ್ಲದೇ ನೀವು ಬೆಂಗಳೂರು ಮತ್ತು ಮೈಸೂರಿನಲ್ಲಿ ಟಿ.ವಿ. ನೋಡಲು ಸಾಧ್ಯವಿಲ್ಲ. ಕೂಡಲೆ ನಿಮ್ಮ ಕೇಬಲ್ ಆಪರೇಟರನ್ನು ಸಂಪರ್ಕಿಸುವುದು ಒಳಿತು.

ಕೇಬಲ್ ಟಿವಿ ಸಂಪರ್ಕದಾರರಿಗೆ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಭಾರತೀಯ ದೂರ ಸಂಪರ್ಕ ಪ್ರಾಧಿಕಾರವು ಡಿಜಿಟಲ್ ಆಡ್ರೆಸಬಲ್ ಸಿಸ್ಟಮ್ (ಡಿಎಎಸ್) ಯೋಜನೆ ರೂಪಿಸಿದೆ. ಮಾ.31ರೊಳಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸೆಟ್ ಟಾಪ್ ಬಾಕ್ಸ್ ಗಳ ಬೆಲೆಯನ್ನು ರು.999ರಿಂದ ರು.1200ರೊಳಗೆ ನಿಗದಿಪಡಿಸಲಾಗಿದೆ. ಗ್ರಾಹಕರು ಇದಕ್ಕಿಂತಲೂ ಹೆಚ್ಚಿನ ಬೆಲೆ ನೀಡಬಾರದು ಎಂದು ಸೂಚಿಸಲಾಗಿದೆ. ಹೊಸ ವ್ಯವಸ್ಥೆಯಿಂದ ಗ್ರಾಹಕರು ತಮಗಿಷ್ಟವಾದ ಚಾನಲ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಲಭಿಸಲಿದೆ.

ಬೇಸಿಕ್ ಪ್ಲಾನ್ ಗಳಲ್ಲಿ ಉತ್ತಮ ಗುಣಮಟ್ಟದ 100 ಚಾನಲ್ ಗಳು ಸಿಗಲಿವೆ. ನಂತರದ ತಮಗಿಷ್ಟದ ವಿವಿಧ ಪ್ಲಾನ್ ಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದುದಾಗಿದೆ ಎಂದು ಬೆಂಗಳೂರು ವಿಭಾಗದ ಡಿಜಿಟಲ್ ಸೆಟ್ ಟಾಪ್ ಬಾಕ್ಸ್ ಅಳವಡಿಕೆ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

English summary
As per government regulations, you will not be able to watch TV in Bangalore and Mysore after March 31, 2013 without a Set Top Box. Please contact your cable operator immediately, Ministry of Information and Broadcasting.
Please Wait while comments are loading...