»   » ಶೀತಲ್ ಶೆಟ್ಟಿ ಹೋಗಿದ್ದು ಓಕೆ, ಶಾಲಿನಿ ಯಾಕೆ? 'ಬಿಗ್' ಮನೆ ಸದಸ್ಯರು ಹೇಳಿದ್ದೇನು?

ಶೀತಲ್ ಶೆಟ್ಟಿ ಹೋಗಿದ್ದು ಓಕೆ, ಶಾಲಿನಿ ಯಾಕೆ? 'ಬಿಗ್' ಮನೆ ಸದಸ್ಯರು ಹೇಳಿದ್ದೇನು?

Posted By:
Subscribe to Filmibeat Kannada

'ಬಿಗ್ ಬಾಸ್' ಕನ್ನಡ ಕಾರ್ಯಕ್ರಮದ ನಾಲ್ಕನೇ ವಾರ 'ಬಿಗ್' ಮನೆಯಿಂದ ಶಾಲಿನಿ ಹಾಗೂ ಶೀತಲ್ ಶೆಟ್ಟಿ ಹೊರಬಿದ್ದರು. ಡಬಲ್ ಎಲಿಮಿನೇಶನ್ ನಿಂದಾಗಿ ಇಬ್ಬರಿಗೂ ಗೇಟ್ ಪಾಸ್ ಸಿಕ್ತು.

ಹಾಗೆ 'ಬಿಗ್ ಬಾಸ್' ಮನೆಯಿಂದ ಔಟ್ ಆದ ಶಾಲಿನಿ ಹಾಗೂ ಶೀತಲ್ ಶೆಟ್ಟಿ ಈಗ ಸೀಕ್ರೆಟ್ ರೂಮ್ ಗೆ ಎಂಟ್ರಿಕೊಟ್ಟಿರುವುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ, ಈ ಸತ್ಯ ಸಂಗತಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗೊತ್ತಿಲ್ಲ.

ಶಾಲಿನಿ ಹಾಗೂ ಶೀತಲ್ ಶೆಟ್ಟಿ ನಿಜವಾಗಲೂ ಎಲಿಮಿನೇಟ್ ಆಗಿದ್ದಾರೆ ಅಂತ ಅಂದುಕೊಂಡಿರುವ ಮನೆಯ ಸದಸ್ಯರು ಇಬ್ಬರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇಬ್ಬರೂ ಹೊರ ಹೋಗಿರುವುದರಿಂದ ಹಲವರಿಗೆ ಬೇಸರವಾಗಿದ್ರೆ, ಕೆಲವರು ಮಾತ್ರ ಕೂಲ್ ಆಗಿದ್ದಾರೆ.

ರೇಖಾ 'ಸೆಂಟಿಮೆಂಟ್'

''ನಾನು ಶಾಲಿನಿ ರವರನ್ನ ತುಂಬಾ ಹಚ್ಚಿಕೊಂಡಿದ್ದೆ. ಗೊತ್ತಿಲ್ಲದೆ ಅಷ್ಟೊಂದು ಹತ್ತಿರ ಆಗಿದ್ದರು. ಅವರಿಗೆ 'ಬಿಗ್ ಬಾಸ್' ತುಂಬ ಇಂಪಾರ್ಟೆಂಟ್ ಆಗಿತ್ತು. ಅವರು ಹೋಗಿದ್ದು ತುಂಬ ಕಷ್ಟ ಆಯ್ತು'' - ರೇಖಾ

ಮಾಳವಿಕಾ 'ಮಾತು'

''ನಾನು ಹೋಗಿ ಹೋಗಿ ಅವರನ್ನ ನಾಮಿನೇಟ್ ಮಾಡಿದೆ? ನಾನು ಎಂತಹ ದ್ರೋಹಿ ಇರಬೇಕು. ಶಾಲಿನಿ ಹೋಗಲ್ಲ ಅಂತ ನಾಮಿನೇಟ್ ಮಾಡಿದ್ದು ಅಷ್ಟೇ. ಬಟ್, ವೆರಿ ಬ್ಯಾಡ್'' - ಮಾಳವಿಕಾ

ಪ್ರತಿವಾರನೂ ಒಬ್ಬೊಬ್ಬರು ಹೋಗಲೇಬೇಕು

''ಎಲಿಮಿನೇಶನ್ ಎನ್ನುವುದು ಪ್ರತಿವಾರನೂ ಆಗುತ್ತೆ. ಇದ್ರ ಬಗ್ಗೆ ಚಿಂತೆ ಬೇಡ. ಬೇರೆ ಯಾರಾದರೂ ಮನೆಗೆ ಬರಬಹುದು ಅನ್ಸುತ್ತೆ'' - ಓಂ ಪ್ರಕಾಶ್ ರಾವ್

ನನ್ನ ಬದಲಾವಣೆಗೆ ಶಾಲಿನಿ ಕಾರಣ - ಪ್ರಥಮ್

''ನಾನು ಬದಲಾಗುವುದಕ್ಕೆ ಶಾಲಿನಿ ಕಾರಣ. ಟಾಸ್ಕ್ ವಿಚಾರದಲ್ಲಿ ಆ ಘಟನೆ ಆದ ಬಳಿಕ ನನ್ನ ಹತ್ರ ಪ್ರಾಮಿಸ್ ತೆಗೆದುಕೊಂಡಿದ್ದರು. ಯಾರ ವಿಚಾರಕ್ಕೂ ಹೋಗಬೇಡ. ಯಾರಿಗೂ ಕಿರಿಕಿರಿ ಕೊಡಬೇಡ ಎಂದಿದ್ದರು. ಅಲ್ಲಿಂದ ನಾನು ಬದಲಾದೆ'' - ಪ್ರಥಮ್

ಸೀಕ್ರೆಟ್ ರೂಮ್ ಗೆ ಹೋಗಿರಬಹುದು

''ಇಷ್ಟು ಬೇಗ ಹೊರಗೆ ಹೋಗುವ ಕನ್ಟೆಸ್ಟಂಟ್ ಅಲ್ಲ ಶಾಲಿನಿ. ಬಹುಶಃ ಸೀಕ್ರೆಟ್ ರೂಮ್ ಅಂತ ಇದೆ ಅಲ್ವಾ ಅಲ್ಲೇನಾದರೂ ಇರಬಹುದು? ಒಂದು ವಾರದ ಸಣ್ಣ ಮಿಸ್ಟೇಕ್ ಇಷ್ಟು ದೊಡ್ಡ ಕಂಟಕವಾಗುತ್ತೆ ಎಂಬುದು ಆಶ್ಚರ್ಯ'' - ಮೋಹನ್

ಡಬಲ್ ಎಲಿಮಿನೇಶ್ ಶಾಕ್

ನಾಲ್ಕನೇ ವಾರ ಡಬಲ್ ಎಲಿಮಿನೇಶನ್ ಆಗಿರುವುದು ಮನೆಯ ಸದಸ್ಯರಿಗೆ ಬೇಜಾರು ತರಿಸಿದೆ. ಮನೆಯಲ್ಲಿ ಯಾವಾಗಲೂ ಆಕ್ಟೀವ್ ಆಗಿ ಇರುತ್ತಿದ್ದ ಇಬ್ಬರು ಹೊರಗೆ ಹೋಗಿರುವುದರಿಂದ ಬೋರ್ ಆಗುತ್ತಿದೆ ಎಂಬ ಅಭಿಪ್ರಾಯ ಕೆಲವರದ್ದು.

ಶೀತಲ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ

ಶಾಲಿನಿ ಎಲಿಮಿನೇಟ್ ಆಗಿದ್ದರ ಬಗ್ಗೆ ಮನೆಯಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಆದ್ರೆ, ಶೀತಲ್ ಶೆಟ್ಟಿಯ ಬಗ್ಗೆ ಯಾರೊಬ್ಬರು ಮಾತನಾಡಿಲ್ಲ.

ಹೊಸ ಅತಿಥಿಗಳ ನಿರೀಕ್ಷೆ

ಒಂದೇ ವಾರ ಇಬ್ಬರು ಎಲಿಮಿನೇಟ್ ಆಗಿದ್ದರಿಂದ, ಸದಸ್ಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ. ಇಬ್ಬರು ಅಥವಾ ಮೂರು ಜನ ಮತ್ತೆ ಮನೆಗೆ ಸ್ವರ್ಧಿಗಳಾಗಿ ಬರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

English summary
Bigg Boss Kannada 4, Week 4 : Read this article to know what other other contestants of 'Bigg Boss Kannada-4' reacted about Shalini and Sheethal Shetty'S Elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada