»   » ಸೃಜನ್ ಲೋಕೇಶ್ 'ಮಜಾ ಟಾಕೀಸ್' ಮಹಾ ಸಂಚಿಕೆಗೆ ಅತಿಥಿ ಯಾರು..?

ಸೃಜನ್ ಲೋಕೇಶ್ 'ಮಜಾ ಟಾಕೀಸ್' ಮಹಾ ಸಂಚಿಕೆಗೆ ಅತಿಥಿ ಯಾರು..?

Posted By:
Subscribe to Filmibeat Kannada

ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಸಂಚಿಕೆ ಅಕ್ಟೋಬರ್ 21 ಮತ್ತು 22ಕ್ಕೆ ಪ್ರಸಾರ ಆಗಲಿದೆ. ಅದರ ಜೊತೆಗೆ ಈಗ ಈ ಮಹಾ ಸಂಚಿಕೆಯ ಅತಿಥಿಗಳು ಯಾರು ಎನ್ನುವ ವಿಷಯ ಕೂಡ ಬಹಿರಂಗವಾಗಿದೆ.

''ಮತ್ತೆ ನಿಮ್ಮ ಮುಂದೆ ಬಂದೇ ಬರುತ್ತೇವೆ'' ಎಂದ ನಟ ಸೃಜನ್ ಲೋಕೇಶ್

ನಟ ಶರಣ್ ಮತ್ತು ಖಳನಟ ರವಿಶಂಕರ್ 'ಮಜಾ ಟಾಕೀಸ್' ಮಹಾ ಸಂಚಿಕೆಗೆ ಅತಿಥಿಯಾಗಿ ಭಾಗಿಯಾಗಿದ್ದಾರೆ. ಗ್ರಾಂಡ್ ಫಿನಾಲೆ ಪ್ರೋಮೋ ಇದೀಗ ಹೊರಬಂದಿದ್ದು, ಅದರಲ್ಲಿ ಶರಣ್ ಮತ್ತು ರವಿಶಂಕರ್ ಕಾಣಿಸಿಕೊಂಡಿದ್ದಾರೆ.

Sharan and Ravishankar in 'Maja Talkies grand finale

ಆದರೆ ಇದು ಗ್ರಾಂಡ್ ಫಿನಾಲೆಯ ಅದ್ದೂರಿ ಕಾರ್ಯಕ್ರಮ ಆಗಿರುವ ಕಾರಣ ಶರಣ್ ಮತ್ತು ರವಿಶಂಕರ್ ಜೊತೆಗೆ ಕನ್ನಡದ ಸ್ಟಾರ್ ನಟರ ಪೈಕಿ ಯಾರಾದರೂ ಮುಖ್ಯ ಅತಿಥಿಯಾಗಿ ಬಂದಿರುತ್ತಾರಾ ಎನ್ನುವ ನಿರೀಕ್ಷೆ ಸಹ ಇದೆ. ಅಂದಹಾಗೆ, ಈ ಹಿಂದೆ 100ನೇ ಸಂಚಿಕೆಗೆ ನಟ ಶಿವರಾಜ್ ಕುಮಾರ್ ಮತ್ತು 200ರ ಸಂಚಿಕೆಗೆ ದರ್ಶನ್ ಮುಖ್ಯ ಅತಿಥಿ ಆಗಿದ್ದರು.

ಗ್ರಾಂಡ್ ಫಿನಾಲೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಇದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಅಕ್ಟೋಬರ್ 21 ಮತ್ತು 22ಕ್ಕೆ ದಿನಾಂಕ ನಿಗದಿ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 8 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Actor Sharan and Ravishankar in Colours Kannada Channel's popular show 'Maja Talkies grand finale episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada