For Quick Alerts
  ALLOW NOTIFICATIONS  
  For Daily Alerts

  ಕಾಮಿಡಿ ಕಿಂಗ್ ಗಳ ಜೊತೆ ಕನ್ನಡದ ಕೋಟ್ಯಾಧಿಪತಿ!

  By Rajendra
  |

  ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಗಳಾದ ಶರಣ್ ಹಾಗೂ ಸಾಧು ಕೋಕಿಲಾ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಭಾಗವಹಿಸಲಿದ್ದಾರೆ. ಇದೇ ಜುಲೈ 23 ರ ಮಂಗಳವಾರ ಪ್ರಸಾರವಾಗಲಿರುವ ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಶರಣ್, ಸಾಧು ಜುಗಲ್ ಬಂಧಿ ಆಡಲಿದ್ದಾರೆ!

  ಹೆಚ್ಚಿನವರಿಗೆ ಗೊತ್ತಿರದ ವಿಷಯವೆಂದರೆ, ಶರಣ್ ಒಬ್ಬ ಅಪ್ರತಿಮ ಹಾಡುಗಾರ ಎಂಬ ವಿಚಾರ. ಶರಣ್ 'Rambo' ಚಿತ್ರದ ಪ್ಯಾಥೋ ಸಾಂಗ್ ಹಾಡುವ ಮೂಲಕ ಅಚ್ಚರಿ ಮೂಡಿಸಿದರು. ಅದಾದ ನಂತರ 'ವಿಕ್ಟರಿ' ಚಿತ್ರದ ಖಾಲಿ ಕ್ವಾಟ್ರು ಬಾಟ್ಲೀ ಹಂಗೇ ಲೈಫೂ.. ಹಾಡಿಗೆ ಧ್ವನಿಗೂಡಿಸಿದರು. ಅದಾದ ನಂತರ ಸಾಧು ಕೋಕಿಲಾ ಅವರು 'ಕಾವ್ಯಾ' ಚಿತ್ರದ ಹಾಡು ಹೇಳುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.

  ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾಧು ಹಾಗೂ ಶರಣ್ ವೃತ್ತಿ ಜೀವನದ ಬಗ್ಗೆ ಮಾತನಾಡಿಸಿದರು. ಶರಣ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದರೆ, ಸಾಧು ಕೋಕಿಲಾ ತಾನು ಎರಡು ರುಪಾಯಿ ಸಂಭಾವನೆಗೆ ಸಂಗೀತ ನೀಡಿದ ಬಗ್ಗೆ ಹೇಳಿಕೊಂಡರು. ಅದರ ಜೊತೆಗೆ ಇಬ್ಬರೂ ಸೇರಿ ಹಾಸ್ಯದ ಅಲೆ ಎಬ್ಬಿಸುತ್ತಲೇ ಕೋಟಿ ಗೆಲ್ಲುವ ಆಟ ಆಡಿದರು.

  ಶರಣ್ ಹಾಗೂ ಸಾಧು ಕೋಕಿಲಾ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ವರ್ಗ ಹಾಗೂ ಪ್ರೇಕ್ಷಕರನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಆ ಇಬ್ಬರೂ ಸೇರಿ ಒಂದು ಉತ್ತಮ ಉದ್ದೇಶ ಇಟ್ಟುಕೊಂಡು, ಶಾಂತಿಗಿರಿ ಆಶ್ರಮದ ಚಾರಿಟಿಗೆ ಗೆದ್ದ ಮೊತ್ತವನ್ನು ನೀಡಲಿದ್ದಾರೆ.

  ಈ ನಡುವೆ ಫೋನೋ ಫ್ರೆಂಡ್ ಪ್ರಶ್ನೆಗೆ ಉತ್ತರಿಸಲು ಬಂದು ನಟ ಉಪೇಂದ್ರ ಅವರ ಜೊತೆ ಸಾಧು ಹಾಗೂ ಪುನೀತ್ ಕಚಗುಳಿ ಇಡುವ ಸಂಭಾಷಣೆ ನಡೆಸಿದರು. ಈ ಹಂತದಲ್ಲಿ ಸಾಧು ಕೋಕಿಲಾ ಹೆಸರನ್ನು ನಾಮಕರಣ ಮಾಡಿದ್ದು ಯಾರು ಎನ್ನುವ ಪ್ರಶ್ನೆಗೆ ಉತ್ತರ ಏನೆಂಬುದು ತಿಳಿಯಬೇಕಾದರೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನೋಡಲೇಬೇಕು!

  ಕೊನೆಯಲ್ಲಿ ಸಾಧುಕೋಕಿಲಾ ಅವರು ಕೀಬೋರ್ಡ್ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮನರಂಜನೆ ನೀಡಿದರು. ಅದೇ ರೀತಿ ಚಿತ್ರ ವಿಚಿತ್ರ ಧ್ವನಿಯಲ್ಲಿ ಕೂಗುವ ಮೂಲಕ ಸಾಧುಕೋಕಿಲಾ ಅಚ್ಚರಿ ಮೂಡಿಸಿದರು. ನಗುನಗುತ್ತಲೇ ಪುನೀತ್-ಸಾಧು-ಶರಣ್ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಮಾರಂಭಕ್ಕೆ ಇನ್ನಷ್ಟು ರಂಗು ನೀಡಿದರು. (ಒನ್ಇಂಡಿಯಾ ಕನ್ನಡ)

  English summary
  Two comedy stars Sharan and Sadhu Kokila will be facing a volley of questions from Power Star Puneeth Rajkumar, in the famous Kannada reality show Kannadada Kotyadhipathi. Kannadada Kotyadhipati season 2 Comedian Special which will telecast on July 23 rd 2013 8-30pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X