For Quick Alerts
  ALLOW NOTIFICATIONS  
  For Daily Alerts

  ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!

  |
  Weekend with Ramesh Season 4: Rambo ಸಿನಿಮಾದ ಹಿಂದಿರುವ ನೋವಿನ ಕಥೆಯನ್ನ ಹಂಚಿಕೊಂಡ ನಟ ಶರಣ್

  'ಕರ್ಪೂರದ ಗೊಂಬೆ' ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡ ನಟ ಶರಣ್ ಸುಮಾರು 99 ಚಿತ್ರದವರೆಗೂ ಪೋಷಕ ನಟ ಹಾಗು ಹಾಸ್ಯನಟನಾಗಿಯೇ ಉಳಿದುಕೊಂಡಿದ್ದರು. ಆಗಾಗಲೇ ಶರಣ್ ಬೇಡಿಕೆಯ ಹಾಸ್ಯನಟನಾಗಿ ಬೆಳೆದು ನಿಂತಿದ್ದರು. ಸ್ಟಾರ್ ನಟರ ಚಿತ್ರಗಳಿಗೆ ಬೇಕಾಗಿದ್ದ ಕಲಾವಿದ ಆಗಿದ್ದರು.

  ಕಾಮಿಡಿಯನ್ ಆಗಿದ್ದ ಶರಣ್ Rambo ಚಿತ್ರದ ಮೂಲಕ ಹೀರೋ ಆಗಿ ಪ್ರಮೋಟ್ ಆಗ್ತಾರೆ. ಸಿನಿಮಾ ಸೂಪರ್ ಹಿಟ್ ಆಗುತ್ತೆ. ಅಲ್ಲಿಂದ ಹೀರೋ ಆಗಿಯೇ ಮುಂದುವರಿಯುವ ಶರಣ್ ಈಗ ಸ್ಟಾರ್ ನಟನಾಗಿದ್ದಾರೆ. ಆದರೆ, Rambo ಸಿನಿಮಾ ಮಾಡಿದಾಗ ಶರಣ್ ಅವರು ಎದುರಿಸಿದ ಕಷ್ಟಗಳು ಯಾರಿಗೂ ಗೊತ್ತಿಲ್ಲ.

  ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ

  ಶರಣ್ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದವರೆಲ್ಲಾ ''ಶರಣ್ ಹೀರೋ ಅಂದ್ರೆ ನಾನು ಮಾಡಲ್ಲ'' ಎಂದಿದ್ದರಂತೆ. '20 ನಿಮಿಷದ ಕಾಮಿಡಿಯನ್ ಇಟ್ಕೊಂಡು ಹೀರೋ ಮಾಡ್ತೀರಾ' ಎಂದು ನಿರ್ಮಾಪಕರನ್ನ ಕಾಲೆಳೆದಿದ್ದರಂತೆ. ಅಚ್ಚರಿ ಸಂಗತಿ ಅಂದ್ರೆ ಶರಣ್ ತಮ್ಮ ಮನೆಯನ್ನೇ ದುಡ್ಡಿಗಾಗಿ ಅಡ ಇಟ್ಟಿದ್ದರಂತೆ. ಏನಿದು Rambo ಹಿಂದಿನ ಕಹಾನಿ? ಮುಂದೆ ಓದಿ.....

  ತರುಣ್ ಸುಧೀರ್ ಕಥೆ ಕೇಳಿದ್ದರು

  ತರುಣ್ ಸುಧೀರ್ ಕಥೆ ಕೇಳಿದ್ದರು

  ''ಸ್ನೇಹಿತ ತರುಣ್ ಸುಧೀರ್ ಒಂದು ದಿನ ಫೋನ್ ಮಾಡಿ ಒಂದು ಸ್ಥಳಕ್ಕೆ ಬರಲು ಹೇಳಿದ. ಅಲ್ಲಿಗೆ ಹೋದಮೇಲೆ ಪದ್ಮನಾಭನ್ ಎಂಬವರನ್ನ ಪರಿಚಯಿಸಿ 'ಇವರೊಂದು ಕಥೆ ಹೇಳ್ತಾರೆ ಕೇಳು' ಅಂದ. ಆಗ ಕಥೆ ಕೇಳಿದೆ. ಸಿಕ್ಕಾಪಟ್ಟೆ ಎಕ್ಸೈಟ್ ಆದೆ. ಪ್ರತಿಯೊಂದು ಸೀನ್, ಐಡಿಯಾ, ಕಥೆ ಫ್ರೆಶ್ ಆಗಿತ್ತು. ತರುಣ್ ಕಥೆ ಹೇಗಿದೆ ಎಂದ. ಸಖತ್ ಆಗಿದೆ ಅಂದ''

  ಕಥೆ ಲಾಕ್ ಮಾಡಬೇಕು

  ಕಥೆ ಲಾಕ್ ಮಾಡಬೇಕು

  ಕಥೆ ಕೇಳಿ ಥ್ರಿಲ್ ಆದ ಶರಣ್ ಮತ್ತು ತರುಣ್ ಈ ಕಥೆಯನ್ನ ಹೇಗಾದರೂ ಮಾಡಿ ಲಾಕ್ ಮಾಡಬೇಕು ಎಂಬ ಯೋಚನೆ ಮಾಡಿದರು. ಆಗ ಒಂದು ಅಡ್ವಾನ್ಸ್ ಕೊಟ್ಟು ಕಥೆ ಲಾಕ್ ಮಾಡೋಣ ಎಂದು ನಿರ್ಧರಿಸಿದ ಅವರು 'ನಾವೇ ಸಿನಿಮಾ ಮಾಡ್ತೀವಿ' ಎಂದು ಹೇಳಿದರು. ಕಥೆ ನಮ್ಮ ಬಳಿ ಇಟ್ಕೊಂಡು ಆಮೇಲೆ ಯೋಚನೆ ಮಾಡೋಣ ಅಂದುಕೊಂಡಿದ್ದ ಶರಣ್ ಮತ್ತು ತರುಣ್ ''ಡೈರೆಕ್ಷನ್ ನೀವೇ ಮಾಡಿ, ನಾವೇ ಸಿನಿಮಾ ಮಾಡ್ತೀವಿ'' ಅಂತ ಹೇಳಿ ಪದ್ಮಾನಾಭನ್ ಅವರನ್ನ ಒಪ್ಪಿಸಿದರಂತೆ.

  ವೀಕೆಂಡ್ ವಿತ್ ರಮೇಶ್ ಶೋಗೆ ಬಂದ ಶರಣ್ ಬಗ್ಗೆ ವೀಕ್ಷಕರು ಏನ್ ಹೇಳುತ್ತಿದ್ದಾರೆ?

  ತಬಲಾ ನಾಣಿ ಪಾತ್ರ ಮಾಡ್ಬೇಕಿತ್ತು.!

  ತಬಲಾ ನಾಣಿ ಪಾತ್ರ ಮಾಡ್ಬೇಕಿತ್ತು.!

  ''ಆರಂಭದಲ್ಲಿ ತಬಲಾ ನಾಣಿ ಮಾಡಿದ್ದ ಪಾತ್ರವನ್ನ ಶರಣ್ ಮಾಡಲಿ ಎಂದು ನಿರ್ಧರಿಸಿದ್ವಿ. ಆಮೇಲೆ ನಾಯಕನ ಪಾತ್ರವೂ ಹಾಸ್ಯದಿಂದಲೇ ಇತ್ತು. ಶರಣ್ ಅವರು ಹೀರೋ ಆಗ್ಬೇಕು ಅಂತ ಇದ್ರು. ಯೋಚನೆ ಮಾಡಿ ಶರಣ್ ಅವರೇ ಹೀರೋ ಆಗಲಿ ಅಂತ ನಿರ್ಧರಿಸಿದ್ವಿ'' - ತರುಣ್ ಸುಧೀರ್

  ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ

  ಆಮೇಲೆ ಇನ್ನೊಂದು ಟೆನ್ಷನ್

  ಆಮೇಲೆ ಇನ್ನೊಂದು ಟೆನ್ಷನ್

  ''ಚಿತ್ರಕ್ಕೆ ನಿರ್ಮಾಪಕರು ಬೇಕು. ಶರಣ್ ಜೊತೆ ಸಿನಿಮಾ ಮಾಡ್ಬೇಕು ಎಂದು ತುಂಬಾ ಜನ ಹೇಳ್ತಿದ್ರು. ಶರಣ್ ಹೀರೋ ಮಾಡಬಹುದು ಎಂದಿದ್ದವರು ಬಳಿ ಈ ಕತೆ ಇಟ್ಕೊಂಡು ಹೋದ್ವಿ. ಆದರೆ, ನಾವು ಭೇಟಿ ಮಾಡಿದ ಯಾರೂ ಕೂಡ ದುಡ್ಡು ಹಾಕಲು ಸಿದ್ಧವಾಗಿರಲಿಲ್ಲ. ಬಜೆಟ್ ಜಾಸ್ತಿ, ಶರಣ್ ಇಟ್ಕೊಂಡು ವರ್ಕೌಟ್ ಆಗಲ್ಲ ಎಂದು ಎಲ್ಲರೂ ರಿಜೆಕ್ಟ್ ಮಾಡಿದ್ರು. ಆಮೇಲೆ ಮತ್ತೆ ಚಿಂತೆ ಶುರುವಾಯಿತು'' - ತರುಣ್ ಸುಧೀರ್

  ನಿರ್ಮಾಣ ಮಾಡೋಣ ಅಂತ ನಿರ್ಧಾರ ಆಯ್ತು

  ನಿರ್ಮಾಣ ಮಾಡೋಣ ಅಂತ ನಿರ್ಧಾರ ಆಯ್ತು

  ''ಸರಿ ನಾವೇ ಶೇರ್ ಮಾಡಿಕೊಂಡು ಸಿನಿಮಾ ಮಾಡೋಣ ಅಂತ ನಿರ್ಧರಿಸಿದೆ. ಅಟ್ಲಾಂಟಾ ನಾಗೇಂದ್ರ, ಶರಣ್ ಮತ್ತೆ ಇನ್ನೊಬ್ಬರು ಸೇರಿ ಬಂಡವಾಳ ಹಂಚಿಕೆ ಮಾಡಿಕೊಂಡರು. ಸಿನಿಮಾ ಮುಹೂರ್ತದ ಹಿಂದಿನ ದಿನ ಮೂರನೇ ನಿರ್ಮಾಪಕ ದುಡ್ಡಿಲ್ಲ ಎಂದು ಹಿಂದೆ ಸರಿದರು. ಆಗ ಮತ್ತೆ ಆತಂಕ. ಇಂತಹ ಸಮಯದಲ್ಲಿ ತನ್ನ ಮನೆಯನ್ನ ಇಟ್ಟು ಹಣ ತರ್ತೀನಿ ಎಂದು ಶರಣ್ ಮುಂದಾದರು. ಅದರ ಪ್ರತಿಫಲ ಇಂದು ಅದಕ್ಕಿಂತ ದೊಡ್ಡ ಮನೆ ಕಟ್ಟಿ ಚೆನ್ನಾಗಿದ್ದಾನೆ'' - ತರುಣ್ ಸುಧೀರ್

  ನಿರ್ಮಾಪಕರಿಗೆ ಕಾಲೆಳೆದಿದ್ದ ವ್ಯಕ್ತಿ

  ನಿರ್ಮಾಪಕರಿಗೆ ಕಾಲೆಳೆದಿದ್ದ ವ್ಯಕ್ತಿ

  ಅಟ್ಲಾಂಟಾ ನಾಗೇಂದ್ರ ಅವರು ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿನಿಮಾ ವ್ಯಕ್ತಿಯೊಬ್ಬ 'ಯಾವ ಸಿನಿಮಾ ಮಾಡ್ತಿದ್ದೀರಾ, ಯಾರು ಹೀರೋ' ಅಂತ ಕೇಳಿದ್ರು. ಅದಕ್ಕೆ 'ಶರಣ್ ಹೀರೋ' ಅಂದೆ. ತಕ್ಷಣ ಕಾರು ಸೈಡಿಗೆ ಹಾಕಿಸಿದ ಅವರು 'ರೀ 20 ನಿಮಿಷದ ಕಾಮಿಡಿಯನ್ ಇಟ್ಕೊಂಡು ಹೀರೋ ಮಾಡ್ತೀದ್ದಿರಾ, ತಲೆಯಲ್ಲಿ ಬುದ್ದಿ ಇಲ್ವಾ?' ಎಂದು ಕಾಲೆಳೆದಿದ್ದರಂತೆ.

  English summary
  Weekend with ramesh 4: Kannada actor sharan participated in Weekend with ramesh 4. Sharan shared his struggling days experience of Rambo movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X