Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ವೀಕೆಂಡ್ ವಿತ್ ರಮೇಶ್ 4' - ಈ ವಾರದ ಅತಿಥಿಗಳ ಹೆಸರು ಬಹಿರಂಗ
'ವೀಕೆಂಡ್ ವಿತ್ ರಮೇಶ್ ಸೀಸನ್ 4'ನ ನಾಲ್ಕು ಸಂಚಿಕೆಗಳು ಯಶಸ್ವಿಯಾಗಿ ಮುಗಿದಿವೆ. ಮೂರು ವಾರದಲ್ಲಿ ನಾಲ್ಕು ಅತಿಥಿಗಳು ಸಾಧಕರ ಸೀಟ್ ಮೇಲೆ ಕುಳಿತಿದ್ದಾರೆ.
ಪ್ರತಿ ವಾರದ ಸಂಚಿಕೆ ನೋಡುವ ಜನರಲ್ಲಿ ಮುಂದಿನ ವಾರ ಯಾರು ಬರುತ್ತಾರೆ ಎನ್ನುವ ಪ್ರಶ್ನೆ ಶುರು ಆಗುತ್ತದೆ. ಇವತ್ತು ಮಂಗಳವಾರ, ಈ ವಾರಾಂತ್ಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರುವ ಸಾಧಕರು ಯಾರು? ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಬಹುದು.
ಭಗವಾನ್ ವಿಷ್ಯದಲ್ಲಿ 'ವೀಕೆಂಡ್ ವಿತ್ ರಮೇಶ್' ಮಾಡುತ್ತಿರುವುದು ಎಷ್ಟು ಸರಿ?
ಈ ವಾರ ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಯಾರು ಎಂದು ಜೀ ಕನ್ನಡ ವಾಹಿನಿ ಫೇಸ್ ಬುಕ್ ನಲ್ಲಿ ಖಾತೆಯಲ್ಲಿ ಒಂದು ಸಣ್ಣ ಸುಳಿವು ನೀಡಿದೆ. ಮುಂದೆ ಓದಿ...

ಯಾರು ಅಂತ ನೀವು ಗೆಸ್ ಮಾಡಿ
ಜೀ ಕನ್ನಡ ವಾಹಿನಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಇಬ್ಬರು ಸಾಧಕರ ಫೋಟೋ ಹಾಕಿ ಅದನ್ನು ಗೆಸ್ ಮಾಡಿ ಎಂದು ವೀಕ್ಷಕರಿಗೆ ಪ್ರಶ್ನೆ ಕೇಳಿದೆ. ಸಾಕಷ್ಟು ಜನರು ಕಮೆಂಟ್ ಮೂಲಕ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಾರೆ. ಪ್ರೊಮೋಗೂ ಮುಂಚೆ ಈ ರೀತಿಯ ಸಣ್ಣ ಸುಳಿವು ನೀಡಿ ವೀಕ್ಷಕರ ಜಾಣತನವನ್ನು ಪರೀಕ್ಷೆ ಮಾಡಿದೆ.

ಸಾಧಕರ ಸೀಟ್ ಮೇಲೆ ಶಶಿಕುಮಾರ್
ಸಿನಿಮಾರಂಗದಲ್ಲಿ ಸುಪ್ರಿಮ್ ಸ್ಟಾರ್ ಎಂಬ ಬಿರುದು ಪಡೆದಿರುವ ಶಶಿಕುಮಾರ್ ಈಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಅತಿಥಿ ಆಗಿದ್ದಾರೆ. ಈ ವಾರ ಅವರ ಸಾಧನೆಯ ಹಾದಿ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ತಲುಪಲಿದೆ. 1988ರಲ್ಲಿ ಖಳನಾಯಕನಾಗಿ ಚಿತ್ರರಂಗಕ್ಕೆ ಬಂದ ಶಶಿಕುಮಾರ್ 65ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
'ವೀಕೆಂಡ್ ವಿತ್ ರಮೇಶ್'ಗೆ ಕುಂಬ್ಳೆ ಅವರನ್ನ ಕರೆತರಲು ಹೊಸ ಪ್ಲಾನ್

ವೀಕೆಂಡ್ ಕಾರ್ಯಕ್ರಮದಲ್ಲಿ ವಿನಯ ಪ್ರಸಾದ್
ಕನ್ನಡದ ಖ್ಯಾತ ನಟಿ ವಿನಯ ಪ್ರಸಾದ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರದ ಅತಿಥಿ ಆಗಿದ್ದಾರೆ. ಸೌತ್ ಇಂಡಿಯಾದ ಜನಪ್ರಿಯ ನಟಿ ಇವರಾಗಿದ್ದು, ಟಿವಿ ಹಾಗೂ ಸಿನಿಮಾ ಎರಡು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್, ಚಿರಂಜೀವಿ, ಶಿವರಾಜ್ ಕುಮಾರ್, ರವಿಚಂದ್ರನ್, ಮೋಹನ್ ಲಾಲ್ ರಜನಿಕಾಂತ್ ಹೀಗೆ ಸೌತ್ ಸೂಪರ್ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸಿದ ಖ್ಯಾತಿ ಅವರಿಗೆ ಇದೆ.

ಪ್ರೊಮೋಗಾಗಿ ನಿರೀಕ್ಷಿಸಿ
ಈ ಇಬ್ಬರು ಸಾಧಕರಲ್ಲಿ ಯಾರ ಸಂಚಿಕೆ ಶನಿವಾರ ಹಾಗೂ ಯಾರ ಸಂಚಿಕೆ ಭಾನುವಾರ ಪ್ರಸಾರ ಆಗುತ್ತದೆ ಎನ್ನುವುದು ಇನ್ನು ತಿಳಿದಿಲ್ಲ. ಸದ್ಯ ಜೀ ವಾಹಿನಿಯ ಪೋಸ್ಟ್ ಗಮನಿಸಿದರೆ ವಿನಯ್ ಪ್ರಸಾದ್ ಸಂಚಿಕೆ ಶನಿವಾರ ಹಾಗೂ ಶಶಿಕುಮಾರ್ ಸಂಚಿಕೆ ಭಾನುವಾರ ಪ್ರಸಾರ ಆಗಬಹುದು ಅನಿಸುತ್ತದೆ. ಆದರೆ, ಏನೇ ಇದ್ದರೂ ಪ್ರೊಮೋ ಬಂದಾಗ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.
'WWR'ಗೆ ದ್ರಾವಿಡ್ ಕರೆ ತರಲು ಅಭಿಯಾನ ಶುರು ಮಾಡಿದ ಜೀ ಕನ್ನಡ

ಮೂರು ವಾರ, ನಾಲ್ಕು ಅತಿಥಿಗಳು
'ವೀಕೆಂಡ್ ವಿತ್ ರಮೇಶ್ 4' ಕಾರ್ಯಕ್ರಮದ ಮೂರು ವಾರಗಳು ಕಳೆದಿದ್ದು, ನಾಲ್ಕು ಅತಿಥಿಗಳು ಬಂದಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ, ನಟ ರಾಘವೇಂದ್ರ ರಾಜ್ ಕುಮಾರ್, ನಟಿ ಪ್ರೇಮಾ ಹಾಗೂ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಈ ಸೀಸನ್ ನಲ್ಲಿ ಬಂದ ಅತಿಥಿಗಳಾಗಿದ್ದಾರೆ.