For Quick Alerts
  ALLOW NOTIFICATIONS  
  For Daily Alerts

  ಅಪಘಾತದ ಬಳಿಕ ಎಂಪಿ ಆದ ಶಶಿ ಕುಮಾರ್, ಟಿಕೆಟ್ ಸಿಕ್ಕಿದ್ದೆ ಅಚ್ಚರಿ.!

  |
  Weekend With Ramesh Season 4: ಶಶಿಕುಮಾರ್ ಎಂಪಿ ಆಗಿದ್ದ ಕಥೆಯೇ ರೋಚಕ | FILMIBEAT KANNADA

  ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಶಶಿ ಕುಮಾರ್ ಜೀವನದಲ್ಲಿ ಆ ಅಪಘಾತದಿಂದ ಎಲ್ಲವೂ ಮುಗಿದು ಹೋಗಿತ್ತು ಎಂಬ ಭಾವನೆ ಬಂದಿತ್ತು. ಅದರಿಂದ ಹೊರಬಂದ ಸುಪ್ರೀಂ ಹೀರೋ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ಆರಂಭಿಸಿದರು. ಈ ನಡುವೆ ರಾಜಕೀಯಕ್ಕೆ ಧುಮುಕುತ್ತಾರೆ. ಚಿತ್ರದುರ್ಗದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಮೊದಲ ಸಲವೇ ಗೆಲುವು ಕಾಣ್ತಾರೆ.

  ಚೊಚ್ಚಲ ಚುನಾವಣೆಯಲ್ಲಿ ಲೋಕಸಭೆ ಪ್ರವೇಶ ಮಾಡ್ತಾರೆ. ಶಶಿ ಕುಮಾರ್ ಜೀವನದಲ್ಲಿ ಎಲ್ಲವೂ ಆಕಸ್ಮಿಕವಾಗಿ ನಡೆದಿತ್ತು. ರಾಜಕೀಯ ಬರುವ ಯಾವ ಯೋಚನೆಯೂ ಶಶಿ ಕುಮಾರ್ ಅವರಿಗೆ ಇರಲಿಲ್ಲ. ಅವರ ಕುಟುಂಬ ಹಿನ್ನೆಲೆಯಲ್ಲೂ ರಾಜಕೀಯ ಇರಲಿಲ್ಲ. ಆದರೂ ತಾನಾಗಿಯೇ ಒಲಿದು ಬಂದ ಅವಕಾಶವನ್ನ ಬಿಡದ ನಟ ಎರಡು ಕೈಗಳಿಂದ ಅಪ್ಪಿಕೊಂಡರು.

  ಈ ಎರಡು ವಿಷ್ಯಕ್ಕೆ ಶಶಿ ಕುಮಾರ್ ಬಗ್ಗೆ ಪತ್ನಿಗೆ ಬೇಸರ ಇದ್ಯಂತೆ.!

  ಇದ್ದಕ್ಕಿದ್ದಂತೆ ಆಫರ್ ಬರುತ್ತೆ, ಆತುರದಲ್ಲೇ ನಾಮಪತ್ರ ಸಲ್ಲಿಸುತ್ತಾರೆ. ಅದೃಷ್ಟವಶಾತ್ ಗೆಲ್ತಾರೆ. ಅಷ್ಟಕ್ಕೂ, ಶಶಿ ಕುಮಾರ್ ಗೆ ರಾಜಕೀಯ ಅವಕಾಶ ಹೇಗೆ ಸಿಕ್ತು? ಬರಿ ನಟನೆಯಲ್ಲೇ ತೊಡಗಿಸಿಕೊಂಡಿದ್ದ ಸುಪ್ರೀಂ ಹೀರೋ ಮೊದಲ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ? ಮುಂದೆ ಓದಿ.....

  ಜೆ.ಎಚ್ ಪಟೇಲ್ ರಿಂದ ಅವಕಾಶ

  ಜೆ.ಎಚ್ ಪಟೇಲ್ ರಿಂದ ಅವಕಾಶ

  ಆಗ ಹಾಲಪ್ಪ ಸಿನಿಮಾ ಮಾಡ್ತಿದ್ದ ಶಶಿ ಕುಮಾರ್ ಮುಹೂರ್ತದ ಚಿತ್ರೀಕರಣ ಮಾಡ್ತಿದ್ರು. ಹಾಲಪ್ಪನ ಗೆಟಪ್ ನಲ್ಲೇ ಶಶಿ ಕುಮಾರ್ ಇದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಜೆಎಚ್ ಪಟೇಲ್ ಅವರ ಕಛೇರಿಯಿಂದ ಫೋನ್ ಬರುತ್ತೆ. ನೀವು ಜೆಡಿಯು ಪಕ್ಷದಿಂದ ನಾಮಪತ್ರ ಸಲ್ಲಿಸಬೇಕು ಎಂದು ಹೇಳಿದ್ರು. ಇದನ್ನ ಕೇಳಿ ಶಶಿ ಕುಮಾರ್ ಒಮ್ಮೆ ಅಚ್ಚರಿಯಾದರು.

  ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!

  ನಾಮಪತ್ರಕ್ಕೆ ಅದು ಕೊನೆ ದಿನ

  ನಾಮಪತ್ರಕ್ಕೆ ಅದು ಕೊನೆ ದಿನ

  ''ನಾಮಪತ್ರ ಸಲ್ಲಿಸುವುದಕ್ಕೆ ಅದು ಕೊನೆ ದಿನ. ಮಧ್ಯಾಹ್ನ 12 ಗಂಟೆ ಆಗಿತ್ತು. ಸಮಯ ನೋಡಿದ್ರೆ ತುಂಬಾ ಕಡಿಮೆ ಇದೆ. ನಮ್ಮ ತಂದೆಯವರ ಕೈಯಲ್ಲಿ ಬಿ ಫಾರಂ ಕಳುಹಿಸಿಕೊಟ್ಟಿದ್ದರು. ನಾನು ಶಾಕ್ ನಲ್ಲಿ ಯೋಚನೆ ಮಾಡ್ತಾ ನಿಂತ್ತಿದ್ದೆ. ಆಮೇಲೆ ಹಾಲಪ್ಪನ ಗೆಟಪ್ ನಲ್ಲೇ ಮೇಕಪ್ ಜೊತೆಯಲ್ಲಿ ಆತುರ ಆತುರವಾಗಿಯೇ ಹೋಗಿ ನಾಮಪತ್ರ ಸಲ್ಲಿಸಿದೆ''

  ಶಶಿ ಕುಮಾರ್ ಪಾಲಿಗೆ ಮರುಜೀವ ಕೊಟ್ಟಿದ್ದು ಆ ವ್ಯಕ್ತಿ.!

  ಶಶಿ ಕುಮಾರ್ ಹೆಸರು ಸೂಚಿಸಿದ್ದು ಶಂಕರ್ ಬಿದರಿ

  ಶಶಿ ಕುಮಾರ್ ಹೆಸರು ಸೂಚಿಸಿದ್ದು ಶಂಕರ್ ಬಿದರಿ

  ಅಂದ್ಹಾಗೆ, ಶಶಿ ಕುಮಾರ್ ಅವರಿಗೆ ಚಿತ್ರದುರ್ಗದ ಲೋಕಸಭೆ ಅಭ್ಯರ್ಥಿ ಟಿಕೆಟ್ ಕೊಡಿಸಿದ್ದು ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಂತೆ. 'ಜೆಎಚ್ ಪಟೇಲ್ ಅವರು ಚಿತ್ರದುರ್ಗಕ್ಕೆ ಅಭ್ಯರ್ಥಿ ಹುಡುಕುವಾಗ ನನ್ನ ಬಳಿ ಕೇಳಿದ್ರು. ಒಳ್ಳೆಯ ಅಭ್ಯರ್ಥಿ ಇದ್ರೆ ಹೇಳಿ ಅಂತ. ಆಗ ನಾನು ಸೂಚಿಸಿದ ಹೆಸರು ಶಶಿ ಕುಮಾರ್. ಆಮೇಲೆ ಅವರಿಗೆ ಜೆಡಿಯು ಪಕ್ಷದಿಂದ ಟಿಕೆಟ್ ಕೊಟ್ಟರು' ಎಂದು ಬಿದರಿ ಸಾಹೇಬ್ರು ವೀಕೆಂಡ್ ಟೆಂಟ್ ನಲ್ಲಿ ತಿಳಿಸಿದ್ದಾರೆ.

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು

  ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು

  1999ರ ಲೋಕಸಭೆಯಲ್ಲಿ ಸಂಸದರಾಗಿ ಆಯ್ಕೆಯಾದ ಶಶಿ ಕುಮಾರ್ ಅಂದು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾಣಿ ಅವರ ಮುಂದೆ ಪಕ್ಕದಲ್ಲಿ ನಿಂತು ಪ್ರಮಾಣವಚನ ಸ್ವೀಕರಿಸಿದ್ದರು.

  ಶಶಿಕುಮಾರ್ ಕೆಲಸಗಳು ಆಗಿವೆ

  ಶಶಿಕುಮಾರ್ ಕೆಲಸಗಳು ಆಗಿವೆ

  ಶಶಿ ಕುಮಾರ್ ಅವರು ಸಂಸದರಾಗಿದ್ದಾಗ ಚಿತ್ರದುರ್ಗದಲ್ಲಿ ಒಳ್ಳೆಯ ಕೆಲಸಗಳು ಆಗಿವೆ ಎಂಬ ಮಾತುಗಳನ್ನ ಆ ಭಾಗದ ಜನರು ಹೇಳಿದ್ದಾರೆ. ಅದರಲ್ಲಿ ಕೆಲವರು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಭಾಗಿಯಾಗಿ ಶಶಿ ಕುಮಾರ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  English summary
  Kannada actor Shashi kumar has successfully contested and won the Member of Parliament elections for Chitradurga constituency in 1999 lok sabha election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X