For Quick Alerts
  ALLOW NOTIFICATIONS  
  For Daily Alerts

  ರಮ್ಯಾಗೂ ಗಣೇಶ್ ಪತ್ನಿ ಶಿಲ್ಪಾಗೂ ಆಗ್ಬರಲ್ಲ: ಯಾಕೆ.? ಕಾರಣ ಬಹಿರಂಗ.!

  By Harshitha
  |
  ಸೂಪರ್ ಟಾಕ್ ಟೈಮ್ ನಲ್ಲಿ ರಮ್ಯಾ ಬಗ್ಗೆ ಮಾತನಾಡಿದ ಶಿಲ್ಪಾ ಗಣೇಶ್ | Filmibeat Kannada

  ನಟಿ, ರಾಜಕಾರಣಿ, ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರುವ ರಮ್ಯಾ ರವರಿಗೂ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಆಗಿರುವ ಶಿಲ್ಪಾ ರವರಿಗೂ ಆಗ್ಬರಲ್ಲ ಎಂಬ ಸಂಗತಿ ಈಗಾಗಲೇ ಜಗಜ್ಜಾಹೀರಾಗಿದೆ.

  ನಟಿ ರಮ್ಯಾ ವಿರುದ್ಧ ಸಿಡಿದೆದ್ದ 'ಗೋಲ್ಡನ್ ಸ್ಟಾರ್' ಪತ್ನಿ ಶಿಲ್ಪಾ ಗಣೇಶ್.!

  ಇಬ್ಬರ ಪಕ್ಷ, ತತ್ವ, ಸಿದ್ಧಾಂತಗಳು ಬೇರೆ ಬೇರೆ ಆಗಿರುವ ಕಾರಣ ರಮ್ಯಾ ಹಾಗೂ ಶಿಲ್ಪಾ ನಡುವೆ ಅಷ್ಟಕಷ್ಟೆ. ಇದೇ ಕಾರಣವಾಗಿ ಆಗಾಗ ಇಬ್ಬರ ಮಧ್ಯೆ ಫೇಸ್ ಬುಕ್ ವಾರ್ ಕೂಡ ನಡೆಯುತ್ತಲಿರುತ್ತದೆ.

  ಲೇವಡಿ ಮಾಡಿದ ರಮ್ಯಾ ವಿರುದ್ಧ ಉರಿದುಬಿದ್ದ ಶಿಲ್ಪಾ ಗಣೇಶ್.!

  ಇದೀಗ ರಮ್ಯಾ ಬಗ್ಗೆ ಶಿಲ್ಪಾ ಗಣೇಶ್ ಮಾತನಾಡಿದ್ದಾರೆ. ಅದೇನಂತ ಹೇಳಿದ್ದಾರೆ ಎಂಬುದನ್ನ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗಣೇಶ್ ದಂಪತಿ

  'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಗಣೇಶ್ ದಂಪತಿ

  'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ಅತಿಥಿಗಳಾಗಿ ಭಾಗವಹಿಸಿದರು. ಇದೇ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಬಗ್ಗೆ ಶಿಲ್ಪಾ ಗಣೇಶ್ ಮಾತನಾಡಿದ್ದಾರೆ.

  'ವಾರ್' ಇಲ್ಲ.!

  'ವಾರ್' ಇಲ್ಲ.!

  ''ನಮ್ಮ ನಡುವೆ ವಾರ್ ಅಂತ ಇಲ್ಲ, ನಮ್ಮ ಸಿದ್ಧಾಂತಗಳು ಬೇರೆ. ಅವರು ನಂಬುವ ಅವರ ಪಕ್ಷದ ಸಿದ್ಧಾಂತಕ್ಕೂ ನಮಗೂ ಹೊಂದಾಣಿಕೆ ಬರ್ತಾಯಿಲ್ಲ ಅಷ್ಟೆ'' ಎಂದರು ಶಿಲ್ಪಾ ಗಣೇಶ್

  ಗಣೇಶ್ ಅಭಿಮಾನಿಗಳ ಸಪೋರ್ಟ್ ಇದೆ

  ಗಣೇಶ್ ಅಭಿಮಾನಿಗಳ ಸಪೋರ್ಟ್ ಇದೆ

  ''ಗಣೇಶ್ ಫ್ಯಾನ್ಸ್ ನನ್ನನ್ನ ಸಪೋರ್ಟ್ ಮಾಡಿದ ಹಾಗೆ, ರಮ್ಯಾ ಫ್ಯಾನ್ಸ್ ಕೂಡ ಅವರನ್ನ ಸಪೋರ್ಟ್ ಮಾಡುತ್ತಾರೆ'' ಎಂದೂ ಹೇಳಿದ್ದಾರೆ ಶಿಲ್ಪಾ ಗಣೇಶ್

  'ಬೊಂಬಾಟ್' ಸಿನಿಮಾ ಇಷ್ಟ

  'ಬೊಂಬಾಟ್' ಸಿನಿಮಾ ಇಷ್ಟ

  ''ರಮ್ಯಾ ರವರ ಯಾವ ಸಿನಿಮಾ ಇಷ್ಟ.?'' ಎಂದು ನಿರೂಪಕ ಅಕುಲ್ ಬಾಲಾಜಿ ಕೇಳಿದಾಗ, ''ಗಣೇಶ್ ಜೊತೆಗೆ ರಮ್ಯಾ ನಟಿಸಿದ 'ಬೊಂಬಾಟ್' ಚಿತ್ರ ಇಷ್ಟ'' ಎಂದರು ಶಿಲ್ಪಾ ಗಣೇಶ್.

  English summary
  Shilpa Ganesh speaks about Ramya in Colors Super Channel's popular show 'Super Talk Time'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X