For Quick Alerts
  ALLOW NOTIFICATIONS  
  For Daily Alerts

  ನಿಮಗೆಲ್ಲಾ ಮನರಂಜನೆಯ 'ಕಿಕ್' ಕೊಡಲು ಶಿವಣ್ಣ ರೆಡಿ.!

  By Harshitha
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿರುತೆರೆಗೆ ಕಾಲಿಟ್ಟಿದ್ದಾರೆ. ರಿಯಾಲಿಟಿ ಶೋ ಮೂಲಕ ನಿಮ್ಮನ್ನೆಲ್ಲಾ ರಂಜಿಸಲು ಮುಂದಾಗಿದ್ದಾರೆ.

  ಪ್ರತಿಷ್ಟಿತ ಉದಯ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ 'ಕಿಕ್' ನಲ್ಲಿ ಪ್ರಮುಖ ತೀರ್ಪುಗಾರ (ಮಹಾ ಗುರು) ಆಗುವ ಮೂಲಕ ಅಣ್ಣಾವ್ರ ಮಗ ಸಣ್ಣ ಪರದೆ ಮೇಲೂ ಮಿಂಚಲಿದ್ದಾರೆ. [ಶಿವರಾಜ್ ಕುಮಾರ್ ಪತ್ನಿ ಗೀತಾಗೆ ಮುಜುಗರ ಆದ ಪ್ರಸಂಗ.!]

  ಡ್ಯಾನ್ಸ್ ರಿಯಾಲಿಟಿ ಶೋ ಅಂದ ಕೂಡಲೆ, ಹಳೇ ಫಾರ್ಮ್ಯಾಟ್ ಅಂತ ಮೂಗು ಮುರಿಯಬೇಡಿ. ಹೊಸತನ ಇರುವ 'ಕಿಕ್' ಬಗ್ಗೆ ಸಂಪೂರ್ಣ ಮಾಹಿತಿ ನಾವು ನೀಡ್ತಿದ್ದೇವೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

  'ಕಿಕ್' ಕೊಡಲಿರುವ ನಾಲ್ಕು ತಂಡಗಳು.!

  'ಕಿಕ್' ಕೊಡಲಿರುವ ನಾಲ್ಕು ತಂಡಗಳು.!

  'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಾಲ್ಕು ತಂಡಗಳು ಸೆಣಸಾಡಲಿವೆ. ['ಬುಲ್ ಬುಲ್' ರಚಿತಾ ಕಿರುತೆರೆಯಲ್ಲಿ ಕಿಕ್ ಕೊಡ್ತಾರೆ.!]

  ನಾಲ್ಕು ತಂಡಗಳು ಯಾವುವು.?

  ನಾಲ್ಕು ತಂಡಗಳು ಯಾವುವು.?

  'ಮೈಸೂರು ಮಹಾರಾಜಾಸ್', 'ಬೆಂಗಳೂರು ಬುಲ್ದೋಜರ್ಸ್', 'ಹುಬ್ಳಿ ಹೈದಾಸ್', 'ಮಂಗಳೂರು ಮಾಸ್ಟರ್ಸ್' ಹೆಸರಿನ ನಾಲ್ಕು ತಂಡಗಳ ಮಧ್ಯೆ 'ಕಿಕ್' ಕಾರ್ಯಕ್ರಮದಲ್ಲಿ ಡ್ಯಾನ್ಸಿಂಗ್ ಯುದ್ಧ ನಡೆಯಲಿದೆ.

  ಟೀಮ್ ಮುನ್ನಡೆಸುವವರು ನಾಯಕಿಯರು.!

  ಟೀಮ್ ಮುನ್ನಡೆಸುವವರು ನಾಯಕಿಯರು.!

  'ಕಿಕ್' ಕಾರ್ಯಕ್ರಮದ ವಿಶೇಷ ಏನಪ್ಪಾ ಅಂದ್ರೆ, ಪ್ರತಿಯೊಂದು ತಂಡವನ್ನ ಮುನ್ನಡೆಸುವವರು ಕನ್ನಡ ಚಿತ್ರರಂಗದ ನಾಯಕಿಯರು.

  ಯಾರ್ಯಾರು, ಯಾವ ತಂಡಕ್ಕೆ.?

  ಯಾರ್ಯಾರು, ಯಾವ ತಂಡಕ್ಕೆ.?

  'ಮೈಸೂರು ಮಹಾರಾಜಾಸ್' - ದೀಪಿಕಾ ಕಾಮಯ್ಯ

  'ಬೆಂಗಳೂರು ಬುಲ್ದೋಜರ್ಸ್' - ಕಾವ್ಯ ಶಾ

  ಹುಬ್ಳಿ ಹೈದಾಸ್' - ಕಾರುಣ್ಯ ರಾಮ್

  'ಮಂಗಳೂರು ಮಾಸ್ಟರ್ಸ್' - ಅಪೂರ್ವ ಗೌಡ

  ಒಂದೊಂದು ಟೀಮ್ ನಲ್ಲಿ 3 ಜೋಡಿಗಳು.!

  ಒಂದೊಂದು ಟೀಮ್ ನಲ್ಲಿ 3 ಜೋಡಿಗಳು.!

  ಒಂದೊಂದು ತಂಡದಲ್ಲಿ 3 ಜೋಡಿಗಳಿದ್ದು, ಒಟ್ಟು 12 ಜೋಡಿಗಳು 'ಕಿಕ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ.

  'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಇದ್ದಾರೆ.!

  'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಇದ್ದಾರೆ.!

  ಶಿವರಾಜ್ ಕುಮಾರ್ ಜೊತೆಗೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್, ನೃತ್ಯ ಸಂಯೋಜಕ ಕಮ್ ನಿರ್ದೇಶಕ ಎ.ಹರ್ಷ ಕೂಡ ತೀರ್ಪುಗಾರರ ಕುರ್ಚಿ ಮೇಲೆ ಕೂರಲಿದ್ದಾರೆ.

  ಅಕುಲ್ ಬಾಲಾಜಿ ನಿರೂಪಣೆ!

  ಅಕುಲ್ ಬಾಲಾಜಿ ನಿರೂಪಣೆ!

  ಅಕುಲ್ ಬಾಲಾಜಿ ನಿರೂಪಣೆಯಲ್ಲಿ 'ಕಿಕ್' ಕಾರ್ಯಕ್ರಮ ಮೂಡಿಬರಲಿದೆ.

  ಪ್ರಸಾರ ಯಾವಾಗ?

  ಪ್ರಸಾರ ಯಾವಾಗ?

  ಜುಲೈ 16 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಯಿಂದ 10.30ವರೆಗೆ 'ಕಿಕ್' ಕಾರ್ಯಕ್ರಮ ಪ್ರಸಾರವಾಗಲಿದೆ.

  English summary
  New Dance reality show 'Kick' will go on air from this Saturday (July 16th) in Udaya TV. Kannada Actor Shiva Rajkumar, Actress Rachita Ram and Choreographer A.Harsha to Judge the contestants in this show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X