»   » ಶಿವರಾಜ್ ಕಲ್ಪನೆಯಲ್ಲಿ ಬಿಗ್ ಬಾಸ್ ಶೋ ಅಂದ್ರೆ ಹೀಗಿರಬೇಕು.!

ಶಿವರಾಜ್ ಕಲ್ಪನೆಯಲ್ಲಿ ಬಿಗ್ ಬಾಸ್ ಶೋ ಅಂದ್ರೆ ಹೀಗಿರಬೇಕು.!

Posted By:
Subscribe to Filmibeat Kannada

ಬಿಗ್ ಬಾಸ್ ನ ಕಲರ್ ಫುಲ್ ವೇದಿಕೆಗೆ ರಾಜಕುಮಾರನ ಕುವರ ,ಕನ್ನಡದ ಮುತ್ತಣ್ಣ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕಾಲಿಟ್ಟು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಿದರು.

ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಮನೆಯಲ್ಲಿ ನೀವು ಯಾರ ಕ್ಯಾರೆಕ್ಟರ್ ಅನ್ನು ಇಷ್ಟಪಟ್ರಿ ಎಂದು ಕೇಳಿದ ಪ್ರಶ್ನೆಗೆ ಶಿವಣ್ಣ ಅವರು ಸುನಾಮಿ ಕಿಟ್ಟಿ ಮತ್ತು ಚಂದನ್ ಅವರ ಕ್ಯಾರೆಕ್ಟರ್ ಇಷ್ಟ ಅಂದ್ರು.

Shiva Rajkumar idea of Bigg Boss, no elimination, only game

ಯಾಕೆಂದರೆ ಸುನಾಮಿ ಕಿಟ್ಟಿಯ ಹೆಸರಲ್ಲಿ ಸುನಾಮಿ ಅಂತ ಇದ್ದರೂ ಕೂಡ ಆತನ ಕ್ಯಾರೆಕ್ಟರ್ ಹೆಸರಿಗೆ ತಕ್ಕ ಹಾಗೆ ಇಲ್ಲ ಬಹಳ ಒಳ್ಳೆಯ ಹುಡುಗ ಅಂತ ಅನಿಸುತ್ತಾನೆ. ಮತ್ತೆ ಚಂದನ್ ಒಬ್ಬ ಒಳ್ಳೆಯ ಮನುಷ್ಯ ಎಂದು ಶಿವಣ್ಣ ಅವರು ಬಿಗ್ ವೇದಿಕೆಯಲ್ಲಿ ಅಭಿಪ್ರಾಯಪಟ್ಟರು.[ಬಿಗ್ ಬಾಸ್ ವೇದಿಕೆಯಲ್ಲಿ ಶಿವರಾಜ್-ಸುದೀಪ್ ಅಪೂರ್ವ ಮಿಲನ ]

ಬಿಗ್ ಮನೆಯಲ್ಲಿ ಕಿಲಾಡಿಗಳು ಯಾರು ಅನ್ನೋ ಸುದೀಪ್ ಅವರ ಪ್ರಶ್ನೆಗೆ ಶಿವಣ್ಣ ಅವರು ಕ್ರಿಕೆಟರ್ ಅಯ್ಯಪ್ಪ ಮತ್ತು ಆರ್.ಜೆ ನೇತ್ರಾ ಎಂದು ಉತ್ತರಿಸಿದರು. ಕ್ರಿಕೆಟರ್ ಅಯ್ಯಪ್ಪ ಅವರು ಎಲ್ಲಾ ಕಡೆ ಇರ್ತಾರೆ, ಆದ್ರೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ, ವೈಡ್ ಬಾಲ್ ಕೂಡ ಹಾಕ್ತಾರೆ, ನೋ ಬಾಲ್ ಕೂಡ ಹಾಕ್ತಾರೆ. ನೇತ್ರಾ ಅವರು ಕೂಡ ಎಲ್ಲಾ ಕಡೆ ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ತಾರೆ ಎಂದು ಶಿವಣ್ಣ ಕಿಲಾಡಿಗಳ ಬಗ್ಗೆ ವೇದಿಕೆಯಲ್ಲಿ ಹಂಚಿಕೊಂಡರು.

ಶಿವಣ್ಣ ಅವರೇ ನೀವು ಬಿಗ್ ಬಾಸ್ ಮನೆ ಒಳಗೆ ಹೋದರೆ ಹೇಗಿರಬಹುದು ಅದು ಕೂಡ ಎಲ್ಲಾ ಕ್ಯಾಮರಾ ಆಫ್ ಮಾಡಿದಾಗ ಅಂತ ಸುದೀಪ್ ಅವರ ಪ್ರಶ್ನೆಗೆ, ಶಿವಣ್ಣ ಅವರು ಅಷ್ಟೇ ಉತ್ಸಾಹದಿಂದ ಮೊದಲಿಗೆ ಬಿಗ್ ಮನೆಯಲ್ಲಿ ಯಾರು ಯಾರು ಇರಬೇಕು. ಕಾರ್ಯಕ್ರಮ ಹೇಗಿರಬೇಕು ಎಂಬುದನ್ನು ವಿವರಿಸಿದರು.[ಸುದೀಪ್ ಮೇಲೆ ಆರೋಪ; ನೇಹ-ರೆಹಮಾನ್ ಬಗ್ಗೆ ಕಿಚ್ಚನ ಕಿಚ್ಚು!]

Shiva Rajkumar idea of Bigg Boss, no elimination, only game

ಅವರ ಪ್ರಕಾರ ಬಿಗ್ ಬಾಸ್ ಮನೆ ಹೀಗಿರಬೇಕಂತೆ, ಕನ್ನಡದ ಸ್ಟಾರ್ ನಟರಾದ ಶಿವಣ್ಣ, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಯಶ್, ರಾಧಿಕಾ ಪಂಡಿತ್, ಮಾಲಾಶ್ರೀ, ರಕ್ಷಿತಾ, ರಮ್ಯಾ ಮುಂತಾದ ಬಿಗ್ ಸ್ಟಾರ್ ಗಳೆಲ್ಲಾ ಒಳಗೆ ಹೋಗಬೇಕು.

ಟಾಸ್ಕ್ ಅಷ್ಟೇ ಇರಬೇಕು, ಯಾವುದೇ ಎಲಿಮಿನೇಷನ್ ಇರಬಾರದು, ಮೂರು ತಿಂಗಳು ಒಳಗಡೆನೇ ಇರಬೇಕು. ಯಾವ ಗೇಮ್ಸ್ ಅನ್ನೋದನ್ನ ನಾವೇ ಡಿಸೈಡ್ ಮಾಡ್ಬೇಕು ಎಂದು ಶಿವಣ್ಣ ತಮ್ಮ ಕಲ್ಪನೆಯ ಬಿಗ್ ಬಾಸ್ ಮನೆಯನ್ನು ವಿವರಿಸಿದರು.

English summary
In the Sunday episode of 'Super Sunday With Sudeep', Shivarajkumar and team promoted their next movie 'Shivalinga'. Along with Shivanna directed P Vasu and others also came to witness Sudeep's show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada