»   » ಚಿತ್ರಗಳು: 'ಮಜಾ ಟಾಕೀಸ್'ನಲ್ಲಿ ಮಸ್ತ್ ಮಜಾ ಮಾಡಿದ ಶಿವಣ್ಣ

ಚಿತ್ರಗಳು: 'ಮಜಾ ಟಾಕೀಸ್'ನಲ್ಲಿ ಮಸ್ತ್ ಮಜಾ ಮಾಡಿದ ಶಿವಣ್ಣ

Posted By:
Subscribe to Filmibeat Kannada

ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುವ, ನಟ ಕಮ್ ನಿರೂಪಕ ಸೃಜನ್ ಲೋಕೇಶ್‌ ನಡೆಸಿಕೊಡುವ 'ಮಜಾ ಟಾಕೀಸ್' ಎಲ್ಲರ ಮನೆ-ಮನ ಗೆದ್ದಿರುವ ಕಾಮಿಡಿ ಶೋ. ಇದೀಗ 'ಮಜಾ ಟಾಕೀಸ್' ಕಾಮಿಡಿ ಶೋ ಎಲ್ಲರ ಮೆಚ್ಚುಗೆ ಗಳಿಸಿ ಭರ್ಜರಿ 100 ಎಪಿಸೋಡ್ ಗಳನ್ನು ಪೂರೈಸಿದೆ.

ಅಂದಹಾಗೆ ಈ ಸ್ಪೆಷಲ್ ಎಪಿಸೋಡ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿರುವವರು ಯಾರು ಗೊತ್ತಾ?, ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು.['ಮಾಸ್ಟರ್ ಪೀಸ್' 50 ದಿನ ಆದ ಕೂಡಲೇ 'ಶಿವಲಿಂಗ' ಪ್ರತಿಷ್ಠಾಪನೆ]


ಹೌದು ಬಿಗ್ ಬಾಸ್ ವೇದಿಕೆಯ ಮೇಲೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರು ಒಂದಾಗಿ ಅಭಿಮಾನಿಗಳನ್ನು ರಂಜಿಸಿದ ಮೇಲೆ ಇದೀಗ ಸೃಜಾ ಜೊತೆ 'ಮಜಾ ಟಾಕೀಸ್' ನಲ್ಲಿ ಒಂದಾಗಿ ಶಿವಣ್ಣ ಅವರು ಮಸ್ತ್ ಮಜಾ ಮಾಡಿದ್ದಾರೆ.


ಶಿವರಾಜ್ ಕುಮಾರ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಶಿವಲಿಂಗ' ಬಿಡುಗಡೆಗೆ ತಯಾರಾಗಿ ನಿಂತಿದ್ದು, ಆ ಚಿತ್ರದ ಪ್ರೊಮೋಷನ್ ಗೆ ಚಿತ್ರತಂಡದೊಂದಿಗೆ 'ಮಜಾ ಟಾಕೀಸ್'ಗೆ ಆಗಮಿಸಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿತ್ತು.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]


ಇನ್ನು 'ಮಜಾ ಟಾಕೀಸ್' ನ 100ನೇ ಎಪಿಸೋಡ್ ಆಗಿರುವುದಿರಂದ ಭರ್ಜರಿಯಾಗಿ ಸಂಭ್ರಮವನ್ನು ಶಿವಣ್ಣ ಅವರ ಜೊತೆ 'ಮಜಾ ಟಾಕೀಸ್' ತಂಡದವರು ಆಚರಿಸಿಕೊಂಡಿದ್ದಾರೆ. ಸೃಜಾ ಅಂತೂ ಹೊಸ ಬಟ್ಟೆ ಧರಿಸಿ ಲಕ ಲಕ ಅಂತ ಹೊಳೆಯುತ್ತಿದ್ದರು. ಕಾಮಿಡಿ ಶೋ ನ ಸಂಭ್ರಮ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


ವೇದಿಕೆಗೆ ಶಿವಣ್ಣ ಗ್ರ್ಯಾಂಡ್ ಎಂಟ್ರಿ

'ಮಜಾ ಟಾಕೀಸ್' ವೇದಿಕೆಗೆ ಶಿವಣ್ಣ ಅವರು ಬಹಳ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಪರಿ ನೋಡಿ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಡ್ಯಾನ್ಸ್ ಮಾಡಿ ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದವರನ್ನು ರಂಜಿಸಿದರು.[ಬಿಗ್ ಬಾಸ್ ವೇದಿಕೆಯಲ್ಲಿ ಶಿವರಾಜ್-ಸುದೀಪ್ ಅಪೂರ್ವ ಮಿಲನ]


ಸೃಜಾ ವಿತ್ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಸೃಜನ್ ಲೋಕೇಶ್ ಅವರು ವಿಶೇಷ ಕಾರ್ಯಕ್ರಮಕ್ಕೆ ಬಹಳ ವಿಶೇಷವಾಗಿ ಬರಮಾಡಿಕೊಂಡರು.


ಶಿವಣ್ಣ ಜೊತೆ ಸೃಜಾ ಪೋಸ್

ವೇದಿಕೆಗೆ ಶಿವಣ್ಣ ಅವರು ಆಗಮಿಸಿದ ನಂತರ ಸೃಜನ್ ಲೋಕೇಶ್ ಅವರು ಶಿವರಾಜ್ ಕುಮಾರ್ ಅವರ ಪೊಟೋ ಗೆ ಫೋಸ್ ಕೊಟ್ಟ ರೀತಿ ಹೀಗಿತ್ತು.


'ಜೋಗಿ' ಸ್ಟೈಲಲ್ಲಿ

'ಜೋಗಿ' ಸ್ಟೈಲ್ ನಲ್ಲಿ ಶಿವಣ್ಣ ಮತ್ತು ಸೃಜನ್ ಲೋಕೇಶ್‌ ಅವರ ಜುಗಲ್ ಬಂದಿ ಹೀಗಿತ್ತು ನೋಡಿ. 'ಜೋಗಿ' ಸಿನಿಮಾದಲ್ಲಿ ಲಾಂಗ್ ಎತ್ತಿಕೊಂಡು ಬರುವ ಶಿವಣ್ಣ ಅವರ ಸ್ಟೈಲ್ ಅನ್ನು ಸೃಜನ್ ಲೋಕೇಶ್ ಅವರು ಅನುಕರಣೆ ಮಾಡಿದರು.


ಕಾಮಿಡಿ ನಟರೊಡನೆ ಶಿವಣ್ಣ

ಕಾಮಿಡಿ ಶೋ 'ಮಜಾ ಟಾಕೀಸ್' ನಲ್ಲಿ ಶಿವಣ್ಣ ಅವರು ಕಾಮಿಡಿ ನಟರೊಡನೆ ಮಸ್ತ್ ಮಜಾ ಮಾಡಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಚಿತ್ರದ ನಿರ್ದೇಶಕ ಪಿ.ವಾಸು ಮತ್ತು ನಿರ್ಮಾಪಕ ಕೆ.ಎ ಸುರೇಶ್ ಅವರು ಹಾಜರಿದ್ದರು.


ಶಿವಣ್ಣನಿಗೆ ಮಾಲೆ

'ಮಜಾ ಟಾಕೀಸ್'ನ ದಂಪತಿಗಳಾದ ಸೃಜನ್ ಲೋಕೇಶ್ ಮತ್ತು ನಟಿ ಶ್ವೇತಾ ಚೆಂಗಪ್ಪ (ರಾಣಿ) ಅವರು ಸೆಂಚುರಿ ಸ್ಟಾರ್ ಶಿವಣ್ಣ ಅವರಿಗೆ ಕಾಮಿಡಿ ಶೋ ವೇದಿಕೆಯಲ್ಲಿ ಹಾರ ಹಾಕಿ ಗೌರವಿಸಿದರು.


ಸೃಜನ್ ಲೋಕೇಶ್

ಎಲ್ಲರ ಮನ ಗೆದ್ದಿರುವ, 'ಮಜಾ ಟಾಕೀಸ್' ನ ಸಾರಥ್ಯ ವಹಿಸಿರುವ ಸೃಜನ್ ಲೋಕೇಶ್ ಅವರು ಹೊಸ ಬಟ್ಟೆಯಲ್ಲಿ ಲಕ ಲಕ ಮಿಂಚುತ್ತಿದ್ದರು. ಕಾಮಿಡಿ ಶೋ 100 ಎಪಿಸೋಡ್ ಯಶಸ್ವಿಯಾಗಿ ಪೂರೈಸಿದ್ದರಿಂದ ವೇದಿಕೆಯನ್ನು ಭಾರಿ ಅದ್ಧೂರಿಯಾಗಿ ಸಿಂಗರಿಸಲಾಗಿತ್ತು.


ಶಿವಣ್ಣ ಜೊತೆ ಸೆಲ್ಫಿ

ಸೃಜಾ ಅವರ ಪತ್ನಿ (ಕಾಮಿಡಿ ಶೋ ನಲ್ಲಿ ಮಾತ್ರ) ರಾಣಿ (ನಟಿ ಶ್ವೇತಾ ಚೆಂಗಪ್ಪ) ಅವರು ಶಿವಣ್ಣ ಅವರ ಜೊತೆ ಸಂಭ್ರಮದಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ.


ಶಿವಲಿಂಗ ನಟ ಶಿವಣ್ಣ

ಹಾರರ್ ಕಮ್ ಥ್ರಿಲ್ಲರ್ 'ಶಿವಲಿಂಗ' ಚಿತ್ರದ ಪೊಮ್ರೊಷನ್ ಗೆ 'ಮಜಾ ಟಾಕೀಸ್' ಕಾಮಿಡಿ ಶೋ ವೇದಿಕೆಗೆ ಆಗಮಿಸಿದ ಶಿವಣ್ಣ ಅವರು ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ವೇದಿಕಾ ಅವರು ಕಾಣಿಸಿಕೊಂಡಿದ್ದಾರೆ.


English summary
Hatrick Hero Shiva Rajkumar will be seen on 'Maja Talkies' this weekend. A new picture from the shooting sets of 'Maja Talkies' has gone viral in the social networking sites. In the picture, Shivanna is seen alongside the host, Srujan Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada