»   » 'ನಾವೆಲ್ಲ ನಿಮ್ಮ ಕಣ್ಣಿಗೆ ಕಾಣಲ್ವಾ?': ಅನೂಪ್ ಭಂಡಾರಿಗೆ ಶಿವಣ್ಣ ಪ್ರಶ್ನೆ!

'ನಾವೆಲ್ಲ ನಿಮ್ಮ ಕಣ್ಣಿಗೆ ಕಾಣಲ್ವಾ?': ಅನೂಪ್ ಭಂಡಾರಿಗೆ ಶಿವಣ್ಣ ಪ್ರಶ್ನೆ!

Posted By:
Subscribe to Filmibeat Kannada
ನಿರ್ದೇಶಕ ಅನೂಪ್ ಭಂಡಾರಿಗೆ ಪ್ರಶ್ನೆ ಹಾಕಿದ ಶಿವಣ್ಣ | Filmibeat Kannada

ಪ್ರತಿಭಾವಂತ ನಿರ್ದೇಶಕ ಅನೂಪ್ ಭಂಡಾರಿ ಇಲ್ಲಿಯವರೆಗೂ ಆಕ್ಷನ್ ಕಟ್ ಹೇಳಿರುವುದು ಎರಡೇ ಚಿತ್ರಗಳಿಗೆ - ಒಂದು 'ರಂಗಿತರಂಗ', ಇನ್ನೊಂದು 'ರಾಜರಥ'. ಈ ಎರಡೂ ಚಿತ್ರಗಳಲ್ಲೂ ನಾಯಕನಾಗಿ ಅಭಿನಯಿಸಿರುವುದು ಅನೂಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ.

ಎರಡು ಸಿನಿಮಾಗಳಲ್ಲಿ ಸಹೋದರನಿಗೆ ಆಕ್ಷನ್ ಕಟ್ ಹೇಳಿರುವ ಅನೂಪ್ ಭಂಡಾರಿಗೆ ಕನ್ನಡ ಚಿತ್ರರಂಗದಲ್ಲಿ ಬೇರೆ ಯಾರೂ ಕಣಲಿಲ್ವಾ.? ಈ ಪ್ರಶ್ನೆಯನ್ನ ನಾವು ಕೇಳ್ತಿದ್ದೀವಿ ಅಂತ ಅಂದುಕೊಳ್ಳಬೇಡಿ. ''ನಾವೆಲ್ಲ ನಿಮ್ಮ ಕಣ್ಣಿಗೆ ಕಾಣಲಿಲ್ವಾ.?'' ಎಂದು ಅನೂಪ್ ಭಂಡಾರಿಗೆ ಪ್ರಶ್ನೆ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!

ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಸಹೋದರರಾದ ಅನೂಪ್ ಹಾಗೂ ನಿರೂಪ್ ಭಾಗವಹಿಸಿದ್ದರು. 'ರಂಗಿತರಂಗ' ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದ ಶಿವಣ್ಣನಿಗೆ, ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ನಟಿಸುವ ಮನಸ್ಸಾಗಿದೆ. ಅದಕ್ಕೆ ನೋಡಿ, ಅನೂಪ್ ಗೆ ಶಿವಣ್ಣ ಹೀಗೆ ಪ್ರಶ್ನೆ ಮಾಡಿದ್ದು....

ಶಿವ ಮೆಚ್ಚಿದ 'ರಂಗಿತರಂಗ'

''ರಂಗಿತರಂಗ' ಬಹಳ ಒಳ್ಳೆಯ ಸಿನಿಮಾ. ಬಹಳ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ. ನನಗಂತೂ ಸಿನಿಮಾ ನೋಡಿ ತುಂಬಾ ಖುಷಿ ಆಯ್ತು'' ಎಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹೇಳಿದರು.

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

ನಾವೆಲ್ಲ ಕಾಣಲಿಲ್ವಾ ನಿಮಗೆ.?

''ಮೊದಲ ಚಿತ್ರ ನಿರೂಪ್ ಜೊತೆಗೆ ಮಾಡಿದ್ರಿ. ಎರಡನೇ ಚಿತ್ರವೂ ನಿರೂಪ್ ಜೊತೆಯಲ್ಲೇ ಮಾಡಿದ್ರಿ. ಬೇರೆ ಯಾರೂ ಇಲ್ವಾ.? ನಾವೆಲ್ಲ ಕಾಣಲಿಲ್ವಾ ನಿಮಗೆ.?'' ಎಂದು ಅನೂಪ್ ಭಂಡಾರಿಗೆ ಶಿವಣ್ಣ ಪ್ರಶ್ನೆ ಮಾಡಿದರು.

ನನಗೊಂದು ಸಿನಿಮಾ ಮಾಡಬಾರದಾ.?

''ನಾವು ಒಂದು ಸಿನಿಮಾ ಮಾಡೋಣ ಅಂತ ನಿಮ್ಮನ್ನ ಕೇಳಿಕೊಂಡೆ. ನನಗೊಂದು ಫಿಲ್ಮ್ ಮಾಡಬಾರದಾ.?'' ಎಂದು ಇದೇ ಶೋನಲ್ಲಿ ಅನೂಪ್ ಭಂಡಾರಿ ರವರನ್ನ ಶಿವಣ್ಣ ಕೇಳಿಕೊಂಡರು.

ಅನೂಪ್ ಹೇಳಿದ್ದೇನು.?

''ನಿಮಗೋಸ್ಕರ ನಾನು ಒಂದು ಸ್ಪೆಷಲ್ ರೋಲ್ ಬರೆಯುತ್ತಿದ್ದೇನೆ. ಅದು ಎಷ್ಟು ಟೈಮ್ ಆಗುತ್ತೋ ಗೊತ್ತಿಲ್ಲ. ಆದ್ರೆ, ಹಂಡ್ರೆಡ್ ಪರ್ಸೆಂಟ್ ಅದು ರೆಡಿ ಆದಾಗ ನಾನು ನಿಮ್ಮ ಹತ್ತಿರ ಬರುತ್ತೇನೆ'' ಎಂದರು ನಿರ್ದೇಶಕ ಅನೂಪ್ ಭಂಡಾರಿ.

ಡೇಟ್ಸ್ ಗ್ಯಾರೆಂಟಿ ಕೊಡುವೆ ಎಂದ ಶಿವಣ್ಣ

''ಯಾವತ್ತು ಸ್ಟೋರಿ ರೆಡಿ ಆಗುತ್ತೋ, ಅದರ ಮುಂದಿನ ತಿಂಗಳಲ್ಲೇ ನಿಮಗೆ ಡೇಟ್ಸ್ ಕೊಡುತ್ತೇನೆ ಅಂತ ಜನರ ಮುಂದೆ ಇವತ್ತು ನಾನು ಹೇಳುತ್ತಿದ್ದೇನೆ. ಇದು ನನ್ನ ಪ್ರಾಮಿಸ್'' ಎಂದು ಕಮಿಟ್ ಆದರು ಶಿವರಾಜ್ ಕುಮಾರ್.

English summary
Kannada Actor Shiva Rajkumar promises his dates to Director Anup Bhandari in No.1 Yari with Shivanna show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X