»   » ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!

ಅಮ್ಮನಿಂದ ಸೌಟಿನಲ್ಲಿ ಹೊಡೆಸಿಕೊಂಡಿದ್ದರಂತೆ 'ಪಾರ್ವತಿ' ಪುತ್ರ 'ಶಿವ'ಣ್ಣ.!

Posted By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ಶಿವರಾಜ್ ಕುಮಾರ್ ಇಂದು ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್... ಹ್ಯಾಟ್ರಿಕ್ ಹೀರೋ... ಕರುನಾಡ ಚಕ್ರವರ್ತಿ... ನಾಟ್ಯ ಸಾರ್ವಭೌಮ.! ತಮ್ಮ ಮೂವತ್ತೊಂದು ವರ್ಷಗಳ ಸಿನಿ ಜರ್ನಿಯಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ ಅಂದ್ರೆ ಕೋಟ್ಯಾಂತರ ಅಭಿಮಾನಿಗಳಿಗೆ ಪಂಚಪ್ರಾಣ.

ಇಂತಿಪ್ಪ ಶಿವಣ್ಣ ಚಿಕ್ಕವಯಸ್ಸಿನಲ್ಲಿ ಸಿಕ್ಕಾಪಟ್ಟೆ ತುಂಟ. ಪುಟಾಣಿ ಶಿವರಾಜ್ ಕುಮಾರ್ ತುಂಟತನದಿಂದ ಬೇಸೆತ್ತು ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸೌಟ್ ಹಿಡಿದುಕೊಂಡು ಹೊಡಿಯಲು ಓಡಿಬರುತ್ತಿದ್ದರಂತೆ. ಅಮ್ಮನಿಂದ ಎಷ್ಟೋ ಬಾರಿ ಶಿವಣ್ಣ ಸೌಟಿನಲ್ಲಿ ಒದೆ ತಿಂದಿದ್ದಾರಂತೆ.

Shiva Rajkumar revealed his childhood days in Public TV Interview

ಹೇರ್ ಕಟ್ ಮಾಡಿಸಲು ಕರೆದುಕೊಂಡು ಹೋದರೆ, ಅರ್ಧಂಬರ್ಧ ಕೂದಲು ಕಟ್ ಮಾಡಿಸಿಕೊಂಡು ಓಡಿ ಹೋಗುತ್ತಿದ್ದರಂತೆ ಪುಟಾಣಿ ಶಿವರಾಜ್ ಕುಮಾರ್. ಆಗ ಪುಟ್ಟ ಶಿವನನ್ನ ಕಟ್ಟಿ ಹಾಕಿ ಹೇರ್ ಕಟ್ ಮಾಡಿಸುತ್ತಿದ್ದರಂತೆ ತಾಯಿ ಪಾರ್ವತಮ್ಮ.

ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!

ಹಾಗಂತ, ಸ್ವತಃ ಶಿವಣ್ಣ 'ಪಬ್ಲಿಕ್ ಟಿವಿ'ಗಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗ ಪಡಿಸಿದರು. ಅಮ್ಮನನ್ನ ಕಳೆದುಕೊಂಡ ನೋವಿನಲ್ಲಿ ಇದ್ದ ಶಿವಣ್ಣ, ತಮ್ಮ ಬಾಲ್ಯದ ದಿನಗಳನ್ನ ಹೀಗೆ ಮೆಲುಕು ಹಾಕಿದರು.

ಅಮ್ಮನ ನಿಧನದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಡ್ ನಲ್ಲಿ ಇಲ್ಲದಿದ್ದರೂ, ಅಭಿಮಾನಿಗಳ ಒತ್ತಾಯದ ಮೇರೆಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡರು ಶಿವಣ್ಣ.

''ಅಪ್ಪ-ಅಮ್ಮ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪು ನಮ್ಮೊಂದಿಗೆ ಸದಾ ಇರುತ್ತದೆ'' ಎಂದು ಶಿವರಾಜ್ ಕುಮಾರ್ ಹೇಳಿದರು.

English summary
Kannada Actor Shiva Rajkumar revealed his childhood days in Public TV Interview

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada