»   » 'ಡಾ.ರಾಜ್-ಭಾರತಿ' ಜೋಡಿ ಬಗ್ಗೆ ಗುಣಗಾನ ಮಾಡಿದ ಸೆಂಚುರಿಸ್ಟಾರ್

'ಡಾ.ರಾಜ್-ಭಾರತಿ' ಜೋಡಿ ಬಗ್ಗೆ ಗುಣಗಾನ ಮಾಡಿದ ಸೆಂಚುರಿಸ್ಟಾರ್

Posted By:
Subscribe to Filmibeat Kannada

ಭಾರತಿ ವಿಷ್ಣುವರ್ಧನ್ ಅವರು ಪಂಚಭಾಷೆ ತಾರೆ. ಕನ್ನಡದ ಸೂಪರ್ ಸ್ಟಾರ್ ರಾಜ್ ಕುಮಾರ್, ವಿಷ್ಣುವರ್ಧನ್ ಅವರಿಂದ ಹಿಡಿದು ಎನ್.ಟಿ.ಆರ್, ನಾಗೇಶ್ವರ್ ರಾವ್, ಎಂ.ಜಿ.ಆರ್. ಶಿವಾಜಿ ಗಣೇಶ್, ಪ್ರೇಮ್ ನಜೀರ್, ಮೋಹನ್ ಲಾಲ್, ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನಾ ಹೀಗೆ ಪಂಚ ಭಾಷೆಗಳಲ್ಲೂ ಎಲ್ಲ ಸೂಪರ್ ಸ್ಟಾರ್ ಗಳ ಜೊತೆ ಸಿನಿಮಾ ಮಾಡಿದ್ದಾರೆ.

ಆದ್ರೆ, ಭಾರತಿ ಅವರು ಅತ್ಯುತ್ತಮ ಅಚ್ಚುಮೆಚ್ಚಿನ ಜೋಡಿ ಎನಿಸಿಕೊಂಡಿದ್ದು ಮಾತ್ರ ವರನಟ ಡಾ.ರಾಜ್ ಕುಮಾರ್ ಅವರ ಜೊತೆ. ಪ್ರೇಕ್ಷಕರು ಅಷ್ಟೆ ಇವರಿಬ್ಬರ ಜೋಡಿಯನ್ನ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಇಷ್ಟಪಡುತ್ತಿದ್ದರು.[ಒಂದೇ ಒಂದು ಮಾರ್ಕ್ ನಲ್ಲಿ ಒಮ್ಮೆ ಫೇಲ್ ಆಗಿದ್ದ ನಟಿ ಭಾರತಿ.!]

ಹಾಗಾದ್ರೆ, ಡಾ.ರಾಜ್ ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ಅವರ ಜೋಡಿ ಬಗ್ಗೆ ಹಾಗೂ ಭಾರತಿ ಅವರ ಅಭಿನಯದ ಬಗ್ಗೆ ರಾಜ್ ಕುಮಾರ್ ಅವರ ಸುಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನ್ ಹೇಳಿದ್ದಾರೆ ಗೊತ್ತಾ? ಅಂತ ಮುಂದೆ ಓದಿ......

ಭಾರತಿ ಅವರನ್ನ ಕೊಂಡಾಡಿದ ಶಿವಣ್ಣ

''ಅವರ ಬಗ್ಗೆ ಮಾತನಾಡೋಕೆ ನಾನು ತುಂಬಾ ಚಿಕ್ಕವನು. ನಾನು ಚಿಕ್ಕವನಿದ್ದಾಗಿನಿಂದಲೂ ಅವರು ನನ್ನನ್ನ ನೋಡಿದ್ದಾರೆ. ಹೀಗಾಗಿ ಅವರ ಬಗ್ಗೆ ಮಾತನಾಡುವ ಲೆವೆಲ್ ಗೆ ನಾನು ಇದ್ದೀನಾ ಅನ್ನೋದೇ ನನಗೆ ಗೊತ್ತಿಲ್ಲ'' - ಶಿವರಾಜ್ ಕುಮಾರ್, ನಟ [ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ನನಸಾಗದ ಒಲಿಂಪಿಕ್ಸ್ ಕನಸು]

ಭಾರತ ಮೆಚ್ಚಿದ ನಟಿ

''ಒನ್ ಆಫ್ ದಿ ಫೈನೆಸ್ಟ್ ಆಕ್ಟ್ರೆಸ್ ಇನ್ ದಿ ಇಂಡಿಯನ್ ಸ್ಕ್ರೀನ್ ಎಂದರೆ ಖಂಡಿತ ತಪ್ಪಾಗುವುದಿಲ್ಲ'' - ಶಿವರಾಜ್ ಕುಮಾರ್, ನಟ

ಅಪ್ಪಾಜಿ ಜೊತೆ ಅವರನ್ನ ನೋಡೋದೆ ಖುಷಿ

''ಅಪ್ಪಾಜಿ ಜೊತೆ ತುಂಬಾ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪಾಜಿ ಜೊತೆ ಅವರನ್ನ ನೋಡೋದೆ ನಮಗೆ ತುಂಬಾ ಖುಷಿ ಆಗೋದು'' -ಶಿವರಾಜ್ ಕುಮಾರ್, ನಟ

ಅತ್ಯುತ್ತಮ ಜೋಡಿ

'ಬಂಗಾರದ ಮನುಷ್ಯ', 'ಬಾಳು ಬೆಳಗಿತು' ಮತ್ತು 'ಮೇಯರ್ ಮುತ್ತಣ್ಣ' ಚಿತ್ರಗಳನ್ನ ಮರೆಯೋಕೆ ಆಗಲ್ಲ. ಪೇರ್ ಅಂದ್ರೆ ಇದು. ಡಾ.ರಾಜ್ ಕುಮಾರ್ - ಭಾರತಿ ಅಂದ್ರೆ ಒನ್ ಆಫ್ ದಿ ಬೆಸ್ಟ್ ಪೇರ್ ಆಗಿತ್ತು'' - ಶಿವರಾಜ್ ಕುಮಾರ್, ನಟ

English summary
Hatric Hero Shiva Rajkumar Talk About dr rajkumar and Bharathi Vishnuvardhan Pair in Zee Kannada's Popular show 'Weekend with Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada