For Quick Alerts
  ALLOW NOTIFICATIONS  
  For Daily Alerts

  ನಿಂತ ಜಾಗದಲ್ಲೇ ದರ್ಶನ್ ಚಿತ್ರಕ್ಕೆ ಕಮಿಟ್ ಆದ ಶಿವರಾಜ್ ಕುಮಾರ್.!

  By Harshitha
  |
  ದಿ ವಿಲನ್ ನಂತರ ಶಿವಣ್ಣ ಈ ದೊಡ್ಡ ಸ್ಟಾರ್ ಜೊತೆ ನಟಿಸೋದು ಕನ್ಫರ್ಮ್ | Filmibeat Kannada

  ಸ್ಯಾಂಡಲ್ ವುಡ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಅಜಾತಶತ್ರು'. 'ಕರುನಾಡ ಚಕ್ರವರ್ತಿ' ಶಿವಣ್ಣ ಯಾರ ಮೇಲೂ ಮುನಿಸಿಕೊಂಡವರಲ್ಲ, ಯಾವುದೇ ವಿವಾದಗಳಿಗೂ ಸಿಲುಕಿದವರಲ್ಲ.

  ಎಲ್ಲ ನಟರ ಜೊತೆ ಆತ್ಮೀಯತೆ ಬೆಳೆಸಿಕೊಂಡಿರುವ ಶಿವಣ್ಣ... ರಿಯಲ್ ಸ್ಟಾರ್ ಉಪೇಂದ್ರ, ಕ್ರೇಜಿ ಸ್ಟಾರ್ ರವಿಚಂದ್ರನ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇಂತಿಪ್ಪ 'ನಾಟ್ಯ ಸಾರ್ವಭೌಮ' ಶಿವರಾಜ್ ಕುಮಾರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೂ ಸ್ಕ್ರೀನ್ ಶೇರ್ ಮಾಡುವ ಆಸೆ ಇದೆ.

  ಕಳೆದ ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಜೊತೆಗೆ ಸಿನಿಮಾ ಮಾಡುವ ಬಯಕೆ ಹೊರಹಾಕಿದ್ದ ಶಿವಣ್ಣ, ಇದೀಗ ನಿಂತ ಜಾಗದಲ್ಲೇ ದರ್ಶನ್ ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಎಲ್ಲಿ, ಹೇಗೆ, ಏನು... ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ...

  'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ...

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿರ್ದೇಶಕ ನರ್ತನ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೂರೂ ಸೆಗ್ಮೆಂಟ್ ಗಳು ಮುಗಿದ ಬಳಿಕ ನರ್ತನ್ ರವರ ಮುಂದಿನ ಚಿತ್ರದ ಪ್ಲಾನ್ ಬಗ್ಗೆ ಶಿವಣ್ಣ ಮಾತನಾಡಲು ಆರಂಭಿಸಿದರು. ಆಗ....

  'ಮಫ್ತಿ' ಆದ್ಮೇಲೆ ನಿರ್ದೇಶಕ ನರ್ತನ್ ಕಣ್ಣು ಯಶ್ ಮೇಲೆ.!'ಮಫ್ತಿ' ಆದ್ಮೇಲೆ ನಿರ್ದೇಶಕ ನರ್ತನ್ ಕಣ್ಣು ಯಶ್ ಮೇಲೆ.!

  'ಮಫ್ತಿ 2' ಮಾಡ್ತಿದ್ದಾರಾ.?

  'ಮಫ್ತಿ 2' ಮಾಡ್ತಿದ್ದಾರಾ.?

  ಶಿವಣ್ಣ ಹಾಗೂ ಶ್ರೀಮುರಳಿ ಕಾಂಬಿನೇಶನ್ ನಲ್ಲಿ ನರ್ತನ್ 'ಮಫ್ತಿ' ಸಿನಿಮಾ ಮಾಡಿದ್ದಾಯ್ತು. ಮುಂದೆ ''ಮಫ್ತಿ-2' ಮಾಡ್ತೀರಾ'' ಎಂಬ ಪ್ರಶ್ನೆಯನ್ನ ನಿರ್ದೇಶಕ ನರ್ತನ್ ಗೆ ಶಿವಣ್ಣ ಕೇಳಿದರು.

  'ಮಫ್ತಿ' ನಂತರ ಮತ್ತೊಂದು ಚಿತ್ರದಲ್ಲಿ ಒಂದಾಗಲಿದೆ ಯಶಸ್ವಿ ಜೋಡಿ!'ಮಫ್ತಿ' ನಂತರ ಮತ್ತೊಂದು ಚಿತ್ರದಲ್ಲಿ ಒಂದಾಗಲಿದೆ ಯಶಸ್ವಿ ಜೋಡಿ!

  ನರ್ತನ್ ಹೇಳಿದ್ದೇನು.?

  ನರ್ತನ್ ಹೇಳಿದ್ದೇನು.?

  ''ಮಫ್ತಿ-2' ಗೆ 'ಭೈರತಿ ರಣಗಲ್' ಅಂತ ಹೆಸರಿಡೋದಾ ಹೇಗೆ ಅಂತ ಯೋಚನೆ ಮಾಡ್ತಿದ್ದೀನಿ'' ಎಂದರು ನರ್ತನ್. ಆಗ, ''ನೋಡಿ.. 'ಮಫ್ತಿ-2' ಮಾಡಿದರೂ ರೆಡಿ. 'ಮಫ್ತಿ-2' ಚಿತ್ರದಲ್ಲಿ ಶಿವಣ್ಣ ಜೊತೆಯಲ್ಲಿ ದರ್ಶನ್ ಅಂತ ಇದೆ. ಮಾಡಿ... ಯಾರು ಬೇಡ ಅಂತಾರೆ.? ಎಲ್ಲರ ಜೊತೆ ಸಿನಿಮಾ ಮಾಡಬೇಕು ಅನ್ನೋದೇ ನಮ್ಮ ಆಸೆ'' ಅಂತ ಶಿವಣ್ಣ ಹೇಳಿದರು.

  ಶಿವಣ್ಣನಿಗೆ ಹೊಸ ಸಿನಿಮಾ ಮಾಡ್ತಾರಾ 'ಮಫ್ತಿ' ಡೈರೆಕ್ಟರ್? ಶಿವಣ್ಣನಿಗೆ ಹೊಸ ಸಿನಿಮಾ ಮಾಡ್ತಾರಾ 'ಮಫ್ತಿ' ಡೈರೆಕ್ಟರ್?

  ರೂಮರ್ಸ್ ಕೇಳಿಬಂದಿತ್ತು

  ರೂಮರ್ಸ್ ಕೇಳಿಬಂದಿತ್ತು

  'ಮಫ್ತಿ-2' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ದರ್ಶನ್ ಕಾಣಿಸಿಕೊಳ್ತಾರೆ ಎಂಬ ಗಾಸಿಪ್ ಹರಿದಾಡಿತ್ತು. ಆ ರೂಮರ್ಸ್ ಶಿವಣ್ಣ ಕಿವಿಗೂ ಬಿದ್ಮೇಲೆ, ದರ್ಶನ್ ಜೊತೆಗೆ 'ಮಫ್ತಿ-2' ಮಾಡಿ ಅಂತ ನಿರ್ದೇಶಕ ನರ್ತನ್ ಗೆ ಹೇಳಿದ್ದಾರೆ. ಅಲ್ಲಿಗೆ, 'ಮಫ್ತಿ-2' ಚಿತ್ರದಲ್ಲಿ ಶಿವಣ್ಣ-ದರ್ಶನ್ ಕಾಂಬಿನೇಶನ್ ನಿರೀಕ್ಷೆ ಮಾಡಬಹುದು.

  'ಮಫ್ತಿ' ಯಶಸ್ಸಿನ ಬಳಿಕ ಬರುತ್ತಾ 'ಮಫ್ತಿ ಪಾರ್ಟ್ 2'? 'ಮಫ್ತಿ' ಯಶಸ್ಸಿನ ಬಳಿಕ ಬರುತ್ತಾ 'ಮಫ್ತಿ ಪಾರ್ಟ್ 2'?

  ನರ್ತನ್ ಜೊತೆಗೆ ಎರಡು ಸಿನಿಮಾ.?

  ನರ್ತನ್ ಜೊತೆಗೆ ಎರಡು ಸಿನಿಮಾ.?

  ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ನಿಂತ ಜಾಗದಲ್ಲೇ ''ನರ್ತನ್ ಜೊತೆಗೆ 'ಮಫ್ತಿ-2' ಹಾಗೂ 'ಭೈರತಿ ರಣಗಲ್' ಚಿತ್ರಗಳಿವೆ'' ಅಂತ ಹೇಳಿ ಶಿವಣ್ಣ ಕಮಿಟ್ ಆದರು. ಜೊತೆಗೆ ದರ್ಶನ್ ಜೊತೆಗೆ ಆಕ್ಟ್ ಮಾಡಲು ರೆಡಿ ಅಂದರು. ನರ್ತನ್ ಮಾತ್ರ ಮನಸ್ಸು ಮಾಡಬೇಕಷ್ಟೆ.

  English summary
  Kannada Actor Shiva Rajkumar wants to share screen space with Challenging Star Darshan in 'Mufti 2'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X