»   » ಮಗಳ ಧಾರಾವಾಹಿಯ ಪ್ರೋಮೋದಲ್ಲಿ ಕಂಡ ಶಿವರಾಜ್ ಕುಮಾರ್

ಮಗಳ ಧಾರಾವಾಹಿಯ ಪ್ರೋಮೋದಲ್ಲಿ ಕಂಡ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಈಗ ನಟ ಮಾತ್ರವಲ್ಲದೆ ನಿರ್ಮಾಣಕ್ಕೆ ಕೂಡ ಕೈ ಹಾಕಿದ್ದಾರೆ. ಒಂದು ಕಡೆ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಬ್ಯಾನರ್ ನಲ್ಲಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರೆ ಇತ್ತ ಶಿವಣ್ಣ ಒಂದು ಹೊಸ ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ.

ಶಿವಣ್ಣ 'ಮಾನಸ ಸರೋವರ' ಎಂಬ ಸೀರಿಯಲ್ ಅನ್ನು ಪ್ರೋಡ್ಯೂಸ್ ಮಾಡುವ ಸುದ್ದಿ ಹಿಂದೆಯೇ ಕೇಳಿ ಬಂದಿತ್ತು. ಅದೇ ರೀತಿ ಕೆಲವು ತಿಂಗಳಿನ ಹಿಂದೆ ಈ ಧಾರಾವಾಹಿಯ ಮುಹೂರ್ತ ಕೂಡ ಆಗಿತ್ತು. ಇದೀಗ ಈ ಧಾರಾವಾಹಿ ಅತಿ ಶೀಘ್ರದಲ್ಲೇ ಪ್ರಸಾರ ಆಗಲಿದೆ. ಸದ್ಯ 'ಮಾನಸ ಸರೋವರ' ಧಾರಾವಾಹಿಯ ಪ್ರೋಮೋಗಳು ಹೊರ ಬಂದಿದ್ದು ಇದರಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ...

ಪ್ರೊಮೋ ಬಿಡುಗಡೆ

ಉದಯ ಟಿವಿಯಲ್ಲಿ ಪ್ರಸಾರ ಆಗುವ 'ಮಾನಸ ಸರೋವರ' ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಪ್ರೋಮೋದಲ್ಲಿ ಶಿವಣ್ಣ

'ಕಸ್ತೂರಿ ನಿವಾಸ' ಚಿತ್ರದ ಗೊಂಬೆಯ ಜೊತೆ 'ಮಾನಸ ಸರೋವರ' ಪುಸ್ತಕ ಓದುತ್ತ ಶಿವಣ್ಣ ಅಂದಿನ ಸೂಪರ್ ಹಿಟ್ ಸಿನಿಮಾ ಇನ್ನು ಮುಂದೆ ಧಾರವಾಹಿಯಾಗಿ ಮುಂದುವರೆಯುತ್ತಿದೆ'' ಎಂದು ಹೇಳಿದ್ದಾರೆ.

ಅತಿ ಶೀಘ್ರದಲ್ಲಿ

ಧಾರಾವಾಹಿಯ ಎರಡನೇ ಪ್ರೋಮೋದಲ್ಲಿ ''ಅದೇ ಹಳೆ ಪಾತ್ರಗಳು ಆದರೆ ಹೊಸ ಧಾರಾವಾಹಿ 'ಮಾನಸ ಸರೋವರ' ಅತಿ ಶೀಘ್ರದಲ್ಲಿ'' ಎಂದು ವೀಕ್ಷಕರಿಗೆ ಶಿವಣ್ಣ ತಮ್ಮ ಧಾರಾವಾಹಿಯ ಬಗ್ಗೆ ಮಾತನಾಡಿದ್ದಾರೆ.

ಶಿವಣ್ಣನ ಮಗಳು ಈಗ ನಿರ್ಮಾಪಕಿ

ಶಿವರಾಜ್ ಕುಮಾರ್ ಅವರ 'ಶ್ರೀ ಮುತ್ತು ಸಿನಿ ಸರ್ವಿಸ್' ಸಂಸ್ಥೆಯಲ್ಲಿ ಈ ಧಾರಾವಾಹಿ ನಿರ್ಮಾಣ ಆಗುತ್ತಿದ್ದು, ಶಿವಣ್ಣ ಪುತ್ರಿ ನಿವೇದಿತಾ ಈ ಮೂಲಕ ನಿರ್ಮಾಪಕಿ ಆಗಿದ್ದಾರೆ.

'ಸೀರಿಯಲ್ ಕ್ಷೇತ್ರ'ಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ

ಹಳೆ ಜೋಡಿ ಹೊಸ ಧಾರಾವಾಹಿ

'ಪಟ್ಟಣ್ಣ ಕಣಗಾಲ್' ನಿರ್ದೇಶನದ 'ಮಾನಸ ಸರೋವರ' ಸಿನಿಮಾದಲ್ಲಿ ಶ್ರೀನಾಥ್ ಹಾಗೂ ಪದ್ಮ ವಾಸಂತಿ ಅಭಿನಯಿಸಿದ್ದರು. ಈಗ ಅದೇ ಹೆಸರಿನ ಧಾರಾವಾಹಿಯಲ್ಲಿ ಕೂಡ ಇದೇ ಜೋಡಿ ಕಾಣಿಸಿಕೊಳ್ಳುತ್ತಿದೆ. 'ರಾಮಚಂದ್ರ ವೈದ್ಯ' ಎಂಬುವವರು ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅಭಿಮಾನಿಗಳ ಶುಭಾಶಯ

ಉದಯ ಟಿವಿಯ ಫೇಸ್ ಬುಕ್ ಖಾತೆಯಲ್ಲಿ ಶಿವಣ್ಣನ ಈ ಧಾರಾವಾಹಿಯ ಪ್ರೋಮೋ ನೋಡಿರುವ ಅಭಿಮಾನಿಗಳು ಕಮೆಂಟ್ ಮಾಡಿ ತಮ್ಮ ಶುಭಾಷಯಗಳನ್ನು ತಿಳಿಸಿದ್ದಾರೆ.

English summary
Udaya Tv 'Manasa Sarovara' kannada serial promo released. Manasa Sarovara serial is producing by Kannada actor Shiva Rajkumar daughter Niveditha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada